ಉತ್ತಮ ಗುರಿ ಸಾಧನೆಗೆ ವಿದ್ಯಾರ್ಥಿ ಜೀವನದಲ್ಲಿಯೇ ಭದ್ರ ಬುನಾದಿ ಹಾಕಿ

| Published : Feb 25 2024, 01:47 AM IST

ಉತ್ತಮ ಗುರಿ ಸಾಧನೆಗೆ ವಿದ್ಯಾರ್ಥಿ ಜೀವನದಲ್ಲಿಯೇ ಭದ್ರ ಬುನಾದಿ ಹಾಕಿ
Share this Article
  • FB
  • TW
  • Linkdin
  • Email

ಸಾರಾಂಶ

ಭವಿಷ್ಯದ ಜೀವನ ಯಶಸ್ವಿಯಾಗಲು ವಿದ್ಯಾರ್ಥಿ ಜೀವನದಲ್ಲಿಯೇ ಭದ್ರವಾದ ಬುನಾದಿಯನ್ನು ನಿರ್ಮಿಸಿಕೊಂಡು ಗುರಿಯನ್ನು ತಲುಪಬೇಕು ಎಂದು ಗದಗ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಅಮಿತ ಬಿದರಿ ಸಲಹೆ ನೀಡಿದರು.

ಗದಗ: ಭವಿಷ್ಯದ ಜೀವನ ಯಶಸ್ವಿಯಾಗಲು ವಿದ್ಯಾರ್ಥಿ ಜೀವನದಲ್ಲಿಯೇ ಭದ್ರವಾದ ಬುನಾದಿಯನ್ನು ನಿರ್ಮಿಸಿಕೊಂಡು ಗುರಿಯನ್ನು ತಲುಪಬೇಕು ಎಂದು ಗದಗ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಅಮಿತ ಬಿದರಿ ಸಲಹೆ ನೀಡಿದರು.ಅವರು‌ ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಬಿ.ಎಚ್. ಪಾಟೀಲ ಸಂಯುಕ್ತ ಪದವಿ ಪೂರ್ವ ಕಾಲೇಜ್‌ನಲ್ಲಿ ಏರ್ಪಡಿಸಲಾಗಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುವ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.ತಮ್ಮ ಯಾವುದೇ ಒಂದು ಗುರಿ ತಲುಪಲು ಪೂರ್ವ ಸಿದ್ಧತೆ ಮಾಡಿಕೊಳ್ಳುವುದು ಪ್ರಾಮುಖ್ಯವಾಗಿರುತ್ತದೆ. ಈಗ ಎಷ್ಟು ಶ್ರಮ ಪಡುತ್ತೀರೂ ಅಷ್ಟೇ ಮುಂದೆ ತಮ್ಮ ಗುರಿ ಮುಟ್ಟುವುದಕ್ಕೆ ಸಾಧ್ಯವಾಗುತ್ತದೆ. ಐಎಎಸ್, ಕೆಎಎಸ್, ಐಪಿಎಸ್ ಅಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ನಿರಂತರ ಅಭ್ಯಾಸ ಜೊತೆಗೆ ಸಂಕಲ್ಪ ಅವಶ್ಯ ಎಂದರು.ನಿವೃತ್ತ ಪ್ರಾಚಾರ್ಯ ಅನಿಲ ವೈದ್ಯ ಮಾತನಾಡಿ, ಇಂದು ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ವಿಶ್ವಾರ್ಹತೆ ಕಡಿಮೆಯಾಗಿದ್ದು, ವಿದ್ಯಾರ್ಥಿಗಳ ಮೇಲೆ ನಂಬಿಕೆ ಇಲ್ಲದಂತಾಗಿದೆ. ವಿದ್ಯಾರ್ಥಿಗಳು ಶ್ರದ್ಧೆ, ಸಂಸ್ಕೃತಿ, ಸಂಪ್ರದಾಯಯಗಳನ್ನು ಅಳವಡಿಸಿಕೊಂಡು ಯಶಸ್ವಿಯಾಗಬೇಕು. ಸಾಧನೆ ಮಾಡಲು ಶಿಕ್ಷಕರ, ಹಿರಿಯರ ಮಾರ್ಗದರ್ಶನ ಅವಶ್ಯವಿದೆ‌‌ ಎಂದರು.ಸನ್ಮಾನ ಸ್ವೀಕರಿಸಿದ ಗ್ರಾ. ಪಂ. ಅಧ್ಯಕ್ಷ ಕೆ.ಎಸ್. ಪೂಜಾರ, ನಿವೃತ್ತ ಉಪನ್ಯಾಸಕ ಎ. ಆರ್. ಜೋಶಿ, ನಿವೃತ್ತ ಶಿಕ್ಷಕ ಎಸ್.ಎಸ್. ದೊಡ್ಡಮನಿ ಅವರು ಮಾತನಾಡಿದರು. ಕಳೆದ ವರ್ಷ ದ್ವಿತೀಯ ಪರೀಕ್ಷೆಯಲ್ಲಿ ಕಾಲೇಜ್‌ಗೆ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಸಹೋದರ ಚನ್ನವೀರಗೌಡ ಪಾಟೀಲ ಅವರ ಸ್ಮರಣಾರ್ಥವಾಗಿ ಜಿ.ಪಂ. ಮಾಜಿ ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ ನಗದು ಬಹುಮಾನ ವಿತರಿಸಿದರು. ವೀರಯ್ಯ ಗಂಧದ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿದರು.ಸಂಸ್ಥೆಯ ಅಧ್ಯಕ್ಷ ಈಶ್ವರಪ್ಪ ಕುಂಬಾರ ಅಧ್ಯಕ್ಷತೆ ವಹಿಸಿದ್ದರು. ಗ್ರಾ. ಪಂ. ಉಪಾಧ್ಯಕ್ಷೆ ಪುಷ್ಪಾ ಪಾಟೀಲ, ಜಿ ಪಂ ಮಾಜಿ ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ, ನಿರ್ದೇಶಕ ಮಲ್ಲಪ್ಪ ಕಮತರ, ವೀರಯ್ಯ ಗಂಧದ, ಟಿ.ಎನ್. ಅಂಬಕ್ಕಿ, ಕೆ.ಎಂ. ಪಾಟೀಲ, ಎ.ಎನ್. ಪೂಜಾರ ವೇದಿಕೆಯಲ್ಲಿದ್ದರು. ಪ್ರಾಚಾರ್ಯ ಬಿ.ವಿ.ಪಾಟೀಲ ಸ್ವಾಗತಿಸಿದರು. ಆರ್.ಎಸ್. ಚವಡಿ ನಿರೂಪಿಸಿದರು. ಜೆ.ಜಿ. ಮಕನದಾರ ವಂದಿಸಿದರು.