ಸಾರಾಂಶ
ಬಿಜೆಪಿ ಪಕ್ಷವನ್ನು ಕಟ್ಟಿ ದೇಶವನ್ನು ಭದ್ರ ಬುನಾದಿ ಹಾಕಿದ ಶ್ಯಾಂ ಪ್ರಕಾಶ್ ಮುಖರ್ಜಿ ಅವರ ನೆನಪು ಹಾಗೂ ಮೋದಿ ಸರ್ಕಾರದ ಆಡಳಿತ ವೈಕರಿ ಕುರಿತಾಗಿ ಬಿಜೆಪಿ ಸರ್ಕಾರದ ಕಾರ್ಯಕ್ರಮಗಳ ವಿವರಗಳನ್ನು ಈ ಮೂಲಕ ಜನರಲ್ಲಿ ತಲುಪಿಸುವ ಕೆಲಸ ಮಾಡಲಾಗುತ್ತದೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಬಿಜೆಪಿ ಸಂಸ್ಥಾಪಕ ಶ್ಯಾಂ ಪ್ರಕಾಶ್ ಮುಖರ್ಜಿ ಅವರ ಬಲಿದಾನದ ಅಂಗವಾಗಿ ಬಿಜೆಪಿ ಕಾರ್ಯಕರ್ತರು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸ್ಮರಿಸಿದರು.ಪಟ್ಟಣದ ಪೂರ್ಣಯ್ಯ ಬೀದಿಯ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಪೀಹಳ್ಳಿ ರಮೇಶ್ ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆಡಳಿತಾಧಿಕಾರ 11ನೇ ವರ್ಷಕ್ಕೆ ಕಾಲಿಟ್ಟ ಹಿನ್ನೆಲೆ ಬಿಜೆಪಿ ಕಾರ್ಯಕರ್ತರ ನೇತೃತ್ವದಲ್ಲಿ ಜನ ಸಂಘ ಹಾಗೂ ಬಿಜೆಪಿ ಸಂಸ್ಥಾಪಕ ಶ್ಯಾಂಪ್ರಕಾಶ್ ಮುಖರ್ಜಿ ಅವರ ನೆನಪಿಗಾಗಿ ತಾಲೂಕಿನಾದ್ಯಂತ 15 ದಿನಗಳವರೆಗೆ ವಿವಿಧ ಕಾರ್ಯಕ್ರಮಗಳ ಆಯೋಜಿಸಲಾಗಿದೆ ಎಂದರು.
ದೇವಾಲಯಗಳ ಬಳಿ ಗಿಡಗೆಂಟೆ ತೆಗೆದು ಸ್ವಚ್ಛ ಮಾಡುವುದು, ಸಸಿ ನೆಟ್ಟು ಪರಿಸರ ಉಳಿಸುವುದು ಸೇರಿದಂತೆ ಇತರ ಜನಪರ ಕಾರ್ಯಕ್ರಮ ಆಯೋಜಿಸಲಾಗಿದೆ. ಬಿಜೆಪಿ ಪಕ್ಷವನ್ನು ಕಟ್ಟಿ ದೇಶವನ್ನು ಭದ್ರ ಬುನಾದಿ ಹಾಕಿದ ಶ್ಯಾಂ ಪ್ರಕಾಶ್ ಮುಖರ್ಜಿ ಅವರ ನೆನಪು ಹಾಗೂ ಮೋದಿ ಸರ್ಕಾರದ ಆಡಳಿತ ವೈಕರಿ ಕುರಿತಾಗಿ ಬಿಜೆಪಿ ಸರ್ಕಾರದ ಕಾರ್ಯಕ್ರಮಗಳ ವಿವರಗಳನ್ನು ಈ ಮೂಲಕ ಜನರಲ್ಲಿ ತಲುಪಿಸುವ ಕೆಲಸ ಮಾಡಲಾಗುತ್ತದೆ ಎಂದರು.ಈ ವೇಳೆ ಕಾರ್ಯಕ್ರಮದ ಸಂಚಾಲಕ ಹೇಮಂತ್ ಕುಮಾರ್, ಸಹ ಸಂಚಾಲಕ ಆನಂದ್ ಕುಮಾರ್, ಉಮೇಶ್ ಕುಮಾರ್, ಜಯಲಕ್ಷ್ಮಮ್ಮ, ಗಾಯಿತ್ರಿ, ಪಾತೀಮಾ, ಪುಟ್ಟರಾಮು, ದರಸಗುಪ್ಪೆ ಸುರೇಶ್, ಪ್ರಭಾಕರ್ ಸೇರಿದಂತೆ ಇತರರು ಇದ್ದರು.