ಮಲೆನಾಡು ಭಾಗದ ಜನರಿಗೆ ಪದವಿ ಶಿಕ್ಷಣ ಕೈಗೆಟುಕುವಂತೆ ಮಾಡಬೇಕು ಎನ್ನುವ ಉದ್ದೇಶದಿಂದ ಸ್ಥಾಪಿತವಾದ ಎಲ್.ಬಿ.ಕಾಲೇಜು ನಿರೀಕ್ಷಿತ ಪಥದಲ್ಲಿ ಸಾಗುತ್ತಿದೆ ಎಂದು ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಬಿ.ಆರ್.ಜಯಂತ್ ಹೇಳಿದರು.
ಸಾಗರ: ಮಲೆನಾಡು ಭಾಗದ ಜನರಿಗೆ ಪದವಿ ಶಿಕ್ಷಣ ಕೈಗೆಟುಕುವಂತೆ ಮಾಡಬೇಕು ಎನ್ನುವ ಉದ್ದೇಶದಿಂದ ಸ್ಥಾಪಿತವಾದ ಎಲ್.ಬಿ.ಕಾಲೇಜು ನಿರೀಕ್ಷಿತ ಪಥದಲ್ಲಿ ಸಾಗುತ್ತಿದೆ ಎಂದು ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಬಿ.ಆರ್.ಜಯಂತ್ ಹೇಳಿದರು.
ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಸರ್ವಸದಸ್ಯರ ಸಭೆಯಲ್ಲಿ ರ್‍ಯಾಂಕ್ ವಿಜೇತ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಈ ಬಾರಿ ತಾಳಗುಪ್ಪ ನಲಂದ ಪ್ರೌಢಶಾಲೆ, ಪ್ರಗತಿ ಸಂಯುಕ್ತ ಪ್ರೌಢಶಾಲೆ ಶೇ.೧೦೦ ಫಲಿತಾಂಶ ಪಡೆದಿದೆ. ಎಂಡಿಎಫ್ ಸ್ವತಂತ್ರ ವಿಜ್ಞಾನ ಪದವಿಪೂರ್ವ ಕಾಲೇಜು ಉತ್ತಮ ಫಲಿತಾಂಶ ತಂದಿದ್ದರೆ, ಎಲ್.ಬಿ.ಕಾಲೇಜಿನ ಅಕ್ಷಯ ಎ.ಎಲ್. ಬಿಕಾಂನಲ್ಲಿ ಪ್ರಥಮ ರ್‍ಯಾಂಕ್ ಪಡೆದಿದ್ದಾರೆ. ಬಿಸಿಎನಲ್ಲಿ ಶಶಿಪ್ರಿಯಾ ೬ನೇ ರ್‍ಯಾಂಕ್ ಪಡೆದು ಸಂಸ್ಥೆಗೆ ಹೆಸರು ತಂದಿದ್ದಾರೆ ಎಂದರು.ಈ ಸಾಲಿನಲ್ಲಿ ವಜ್ರ ಮಹೋತ್ಸವ ಆಚರಿಸುವ ಉದ್ದೇಶ ಹೊಂದಲಾಗಿದ್ದು, ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಹರನಾಥರಾವ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗಿದೆ. ವಜ್ರಮಹೋತ್ಸವ ಯಶಸ್ಸಿಗೆ ಎಲ್ಲರೂ ಸಹಕಾರ ನೀಡಬೇಕು. ಹಳೆಯ ವಿದ್ಯಾರ್ಥಿಗಳು ಕಾರ್ಯಕ್ರಮದ ಯಶಸ್ಸಿಗೆ ಎಲ್ಲ ರೀತಿಯ ಸಹಕಾರ ನೀಡಲು ಮನವಿ ಮಾಡಿದ ಅವರು, ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳು, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ ಎಂದು ಹೇಳಿದರು.
ಸಂಸ್ಥೆಯ ಉಪಾಧ್ಯಕ್ಷ ಕೆ.ಎಂ.ಸೂರ್ಯನಾರಾಯಣ, ಪ್ರಮುಖರಾದ ಎಂ.ಹರನಾಥರಾವ್, ಕವಲಕೋಡು ವೆಂಕಟೇಶ್, ಡಾ.ಎಚ್.ಎಂ.ಶಿವಕುಮಾರ್, ಸತ್ಯನಾರಾಯಣ, ಪ್ರಕಾಶ್ ತಲಕಾಲಕೊಪ್ಪ, ಡಾ. ಲಕ್ಷ್ಮೀಶ್ ಎ.ಎಸ್., ರವಿಕುಮಾರ್ ಎಚ್.ಎಂ. ಇನ್ನಿತರರು ಹಾಜರಿದ್ದರು.