ಪಿ. ಪ್ರಶಾಂತ್ ಗೌಡ ಹುಟ್ಟಹಬ್ಬ ಆಚರಣೆ

| Published : Jan 19 2025, 02:15 AM IST

ಸಾರಾಂಶ

ತ್ರಿಪುರ ಭೈರವಿ ಮಠದ ಆಂಜನೇಯಸ್ವಾಮಿ ದೇವಸ್ಥಾನ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ಮಹಾನಗರ ಪಾಲಿಕೆಯ ಮಾಜಿ ಸದಸ್ಯ, ಅನೇಕ ಸಾರ್ವಜನಿಕ ಸಂಘ ಸಂಸ್ಥೆಗಳನ್ನು ಮುನ್ನಡೆಸುತ್ತಿರುವ ಪಿ. ಪ್ರಶಾಂತ್ ಗೌಡ ಅವರ ಹುಟ್ಟುಹಬ್ಬದ ಪ್ರಯುಕ್ತ ಬಿಜೆಪಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಶನಿವಾರ ಶುಭ ಕೋರಿದರು.ನಗರದ ದೇವರಾಜ ಅರಸು ರಸ್ತೆಯ ತ್ರಿಪುರ ಭೈರವಿ ಮಠದ ಆಂಜನೇಯಸ್ವಾಮಿ ದೇವಸ್ಥಾನ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅರಸು ರಸ್ತೆ, ಶಿವರಾಮಪೇಟೆಯ ವರ್ತಕರು, ಸ್ಥಳೀಯ ಮುಖಂಡರು ಹಾಗೂ ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡು ಶುಭ ಕೋರಿದರು. ಬಿಜೆಪಿ ಚಾಮುಂಡೇಶ್ವರಿ ಕ್ಷೇತ್ರದ ನಗರ ಮಂಡಲದ ಅಧ್ಯಕ್ಷ ರಾಕೇಶ್ ಭಟ್, ಮುಖಂಡರಾದ ಚಂದನ್ ಗೌಡ, ಸಿ. ರಾಘವೇಂದ್ರ, ಸಿ.ಎಸ್. ಮಧು, ಸಂದೇಶ್ ಪವಾರ್, ಕುಂಚಿಟಿಗರ ಸಂಘದ ನಿರ್ದೇಶಕ ಎನ್. ದೀಪಕ್, ಮೈಸೂರು ರಕ್ಷಣಾ ವೇದಿಕೆಯ ಅಧ್ಯಕ್ಷ ಗುರುರಾಜ್ ಶೆಟ್ಟಿ, ಕಾರ್ಯದರ್ಶಿ ಪ್ರಮೋದ್ ಗೌಡ, ಚಿತ್ರನಟ ಅಮಿತ್ ಮೊದಲಾದವರು ಇದ್ದರು.