ರೋಟರಿ ಸಿಲ್ಕ್ ಸಿಟಿಯಲ್ಲಿ ನಾಯಕತ್ವ ಗುಣ, ವ್ಯಕ್ತಿತ್ವ ವೃದ್ಧಿ

| Published : Jun 26 2024, 12:31 AM IST

ಸಾರಾಂಶ

ಹಿರಿಯರ ಮಾರ್ಗದರ್ಶನ ಹಾಗೂ ರೋಟರಿ ಸಿಲ್ಕ್‌ಸಿಟಿ ಮಿತ್ರರ ಸಹಕಾರದೊಂದಿಗೆ ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸುವ ಉದ್ದೇಶ ನನ್ನದಾಗಿದೆ. ರಕ್ತದಾನ ಶಿಬಿರ ಆಯೋಜನೆ, ಪರಿಸರ ಸಂರಕ್ಷಣೆಗಾಗಿ ಸಸಿಗಳನ್ನು ನೆಟ್ಟು ಪೋಷಣೆ ಮಾಡುವುದು, ವಿವಿಧ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ, ಮಕ್ಕಳೊಂದಿಗೆ ಬೆರೆತು ಅವಶ್ಯಕವಾದ ಸಾಮಗ್ರಿಗಳನ್ನು ಕೊಡುಗೆ ನೀಡಿ, ಅವರ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಯುವ ಜನಾಂಗದಲ್ಲಿ ಸಮಯ ಪರಿಪಾಲನೆ, ನಾಯಕತ್ವ ಗುಣ ಹಾಗೂ ವ್ಯಕ್ತಿತ್ವ ವಿಕಸನ, ಸೇವಾ ಮನೋಭಾವನೆಯನ್ನು ರೂಢಿಸಿಕೊಳ್ಳಲು ರೋಟರಿ ಸಿಲ್ಕ್‌ಸಿಟಿ ಉತ್ತಮ ವೇದಿಕೆಯಾಗಿದೆ ಎಂದು ರೋಟರಿ ನಿಯೋಜಿತ ಜಿಲ್ಲಾ ಗೌರ್‍ನರ್ ರೋ. ಸತೀಶ್ ಬೋಲಾರ್ ತಿಳಿಸಿದರು.

ನಗರದ ಮಾಯಾ ಗಾರ್ಡನ್‌ನಲ್ಲಿ ರೋಟರಿ ಸಿಲ್ಕ್‌ಸಿಟಿಯ ೨೦೨೪-೨೫ನೇ ಸಾಲಿನ ನೂತನ ಅಧ್ಯಕ್ಷ ಮಾಣಿಕ್‌ಚಂದ್ ಸೀರ್ವಿ ಪಿ. ಹಾಗೂ ತಂಡದವರ ಪದವಿ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ, ಪದವಿ ಪ್ರಧಾನ ಮಾಡಿ ಅವರು ಮಾತನಾಡಿದರು.

ಚಾಮರಾಜನಗರ ರೋಟರಿ ಹಾಗೂ ರೋಟರಿ ಸಿಲ್ಕ್ ಸಿಟಿಗಳು ಬಹಳ ಅಚ್ಚುಕಟ್ಟಾಗಿ ಶಿಸ್ತು ಬದ್ಧವಾಗಿವೆ. ಇಂಥ ಸಂಸ್ಥೆಗಳಿಂದ ಜಿಲ್ಲೆಯ ಗೌರವ ಹೆಚ್ಚುವ ಜೊತೆಗೆ ಹೊರ ಜಿಲ್ಲೆ ಹಾಗೂ ರಾಜ್ಯಗಳಲ್ಲಿ ಜಿಲ್ಲೆಯ ರೋಟರಿಯ ಬಗ್ಗೆ ಇನ್ನು ಹೆಚ್ಚಿನ ಅಭಿಮಾನ ಮಾಡುತ್ತದೆ. ರೋಟರಿ ಸಿಲ್ಕ್‌ಸಿಟಿಯ ೩೪ ಮಂದಿ ಸದಸ್ಯರು ಸಹ ಬಿಳಿ ಬಣ್ಣದ ಶರ್ಟ್ ಧರಿಸಿ, ಬಹಳ ಲವಲವಿಕೆಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಹಾಗೂ ಜವಾಬ್ದಾರಿಗಳ ಹಂಚಿಕೆ, ಶಿಸ್ತು ಬದ್ಧವಾಗಿ ನಡೆಯುತ್ತಿರುವ ಕಾರ್ಯಕ್ರಮವನ್ನು ನೋಡುವುದು ಒಂದು ಚೆಂದವಾಗಿದೆ. ಇಂಥ ಸಂಸ್ಥೆಯ ಸದಸ್ಯತ್ವವನ್ನು ಪಡೆದುಕೊಳ್ಳುವ ಜೊತೆಗೆ ಯುವಕರು ತಮ್ಮ ಗೌರವವನ್ನು ಇನ್ನು ಹೆಚ್ಚಿಸಿಕೊಳ್ಳಬೇಕು ಎಂದರು.

ನೂತನ ರೋಟರಿ ಸಿಲ್ಕ್ ಸಿಟಿ ಅಧ್ಯಕ್ಷ ಮಾಣಿಕ್ ಚಂದ್ ಸೀರ್ವಿ ಪಿ. ಮಾತನಾಡಿ, ಹಿರಿಯರ ಮಾರ್ಗದರ್ಶನ ಹಾಗೂ ರೋಟರಿ ಸಿಲ್ಕ್‌ಸಿಟಿ ಮಿತ್ರರ ಸಹಕಾರದೊಂದಿಗೆ ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸುವ ಉದ್ದೇಶ ನನ್ನದಾಗಿದೆ. ರಕ್ತದಾನ ಶಿಬಿರ ಆಯೋಜನೆ, ಪರಿಸರ ಸಂರಕ್ಷಣೆಗಾಗಿ ಸಸಿಗಳನ್ನು ನೆಟ್ಟು ಪೋಷಣೆ ಮಾಡುವುದು, ವಿವಿಧ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ, ಮಕ್ಕಳೊಂದಿಗೆ ಬೆರೆತು ಅವಶ್ಯಕವಾದ ಸಾಮಗ್ರಿಗಳನ್ನು ಕೊಡುಗೆ ನೀಡಿ, ಅವರ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದು. ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸೇರಿ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಹಾಗೂ ಸಂಸ್ಥೆಯ ಸದಸ್ಯರ ಮಕ್ಕಳನ್ನು ಗೌರವಿಸಲಾಯಿತು. ಕರಿವರದರಾಜಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ಪುರುಷೋತ್ತಮ್ ಅವರ ಸೇವೆಯನ್ನು ಗುರುತಿಸಿ ಸನ್ಮಾನ ಮಾಡಲಾಯಿತು.

ವೇದಿಕೆಯಲ್ಲಿ ಸಹಾಯಕ ಗೌರ್‍ನರ್ ಗಿರೀಶ್ ಜೆಡೆ, ವಲಯ ಪ್ರತಿನಿಧಿ ಎಸ್. ಸುರೇಶ್, ನೂತನ ಕಾರ್ಯದರ್ಶಿ ಶಮಿತ್ ಕುಮಾರ್ ಎಚ್.ಪಿ., ನಿಕಟಪೂರ್ವ ಅಧ್ಯಕ್ಷ ಅಕ್ಷಯ್ ವೈ, ನೂತನ ಪದಾಧಿಕಾರಿಗಳಾದ ಸಂತೋಷ್‌ಕುಮಾರ್, ಮಣಿಕಂಠಸ್ವಾಮಿ, ಹರ್ಷ ದೇವ್, ವಿಶ್ವಾಸ್, ಗಿರೀಶ್ ದೊಡ್ಡರಾಯಪೇಟೆ, ಚೇತನ್ಯ ಪಿ. ಹೆಗಡೆ, ರವಿ, ಪ್ರಶಾಂತ್, ಅದರ್ಶ, ವೆಂಕಟನಾಗಪ್ಪಶೆಟ್ಟಿ, ಶಾಂತಿಪ್ರಸಾದ್, ಶಿವಪ್ರಸಾದ್, ಆಜೇಯ್, ಬಸವರಾಜು, ರಾಜು ಮೊದಲಾದವರು ಇದ್ದರು.