ಸಾರಾಂಶ
ಖಾಸಗಿ ರಂಗದ ಪ್ರತಿಷ್ಠಿತ ಮುಂಚೂಣಿಯ ಬ್ಯಾಂಕ್‌ಗಳಲ್ಲಿ ಒಂದಾದ ಕರ್ಣಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಹಾಗೂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಆಗಿರುವ ಶ್ರೀಕೃಷ್ಣನ್ ರಾಜಿನಾಮೆ ನೀಡಿದ್ದಾರೆ.
ಮಂಗಳೂರು : ಖಾಸಗಿ ರಂಗದ ಪ್ರತಿಷ್ಠಿತ ಮುಂಚೂಣಿಯ ಬ್ಯಾಂಕ್‌ಗಳಲ್ಲಿ ಒಂದಾದ ಕರ್ಣಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಹಾಗೂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಆಗಿರುವ ಶ್ರೀಕೃಷ್ಣನ್ ರಾಜಿನಾಮೆ ನೀಡಿದ್ದಾರೆ. ಬ್ಯಾಂಕಿನ ನಿರ್ದೇಶಕ ಮಂಡಳಿ ಜೊತೆಗಿನ ಮನಸ್ತಾಪದ ಹಿನ್ನೆಲೆಯಲ್ಲಿ ಶ್ರೀಕೃಷ್ಣನ್ ಅವರ ರಾಜಿನಾಮೆ ಪಡೆದಿರುವುದಾಗಿ ತಿಳಿದುಬಂದಿದೆ.
2023ರ ಜೂನ್‌ನಲ್ಲಿ ಶ್ರೀಕೃಷ್ಣನ್ ಅವರು ಕರ್ಣಾಟಕ ಬ್ಯಾಂಕ್(ಕೆಬಿಎಲ್) ಎಂಡಿ ಹಾಗೂ ಸಿಇಒ ಆಗಿ ನೇಮಕಗೊಂಡು ಅಧಿಕಾರ ಸ್ವೀಕರಿಸಿದ್ದರು. ಅದಕ್ಕೂ ಮೊದಲು ಆರು ವರ್ಷಗಳ ಕಾಲ ಮಹಾಬಲೇಶ್ವರ ಎಂ.ಎಸ್. ಅವರು ಬ್ಯಾಂಕಿನ ಎಂಡಿ, ಸಿಇಒ ಆಗಿದ್ದರು.
ಅವರ ಬಳಿಕ ಆಡಳಿತ ಮಂಡಳಿ ಇದೇ ಮೊದಲ ಬಾರಿಗೆ ಕನ್ನಡಿಗೇತರ ಚೆನ್ನೈ ಮೂಲದ ಶ್ರೀಕೃಷ್ಣನ್ ಅವರನ್ನು ಎಂಡಿ, ಸಿಇಒ ಆಗಿ ನೇಮಕ ಮಾಡಿತ್ತು.ಬ್ಯಾಂಕಿನ ಹಿತಾಸಕ್ತಿಗೆ ವಿರುದ್ಧವಾಗಿ ವರ್ತನೆ ಕಂಡುಬಂದ ಹಿನ್ನೆಲೆಯಲ್ಲಿ ಬ್ಯಾಂಕಿನ ನಿರ್ದೇಶಕ ಮಂಡಳಿ ಎಂಡಿ ಹಾಗೂ ಸಿಇಒ ಆಗಿರುವ ಶ್ರೀಕೃಷ್ಣನ್ ರಾಜಿನಾಮೆಗೆ ಸೂಚನೆ ನೀಡಿತ್ತು. ಹೀಗಾಗಿ ಶ್ರೀಕೃಷ್ಣನ್ ಅವರು ಎಂಡಿ ಹಾಗೂ ಸಿಇಒ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ.