ಸಾರಾಂಶ
ಲಕ್ಷ್ಮೇಶ್ವರ: ಪಟ್ಟಣದ ಲಿಟಲ್ ಹಾರ್ಟ್ಸ್ ಇಂಟರ್ ನ್ಯಾಶನಲ್ ಸ್ಕೂಲ್ ಲಕ್ಷ್ಮೇಶ್ವರದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಕಾರ್ಯಕ್ರಮವನ್ನು ಬುಧವಾರ ಆಚರಿಸಲಾಯಿತು. ವಿಜ್ಞಾನ ದಿನಾಚರಣೆಯ ನಿಮಿತ್ತ ಶಾಲಾ ಮಕ್ಕಳಿಂದ ವಿಜ್ಞಾನ ವಸ್ತು ಪ್ರದರ್ಶನವು ನಡೆಯಿತು.
ಈ ವೇಳೆ ಗದಗ ಜಿಮ್ಸ್ ನಿರ್ದೇಶಕ ಡಾ,ಬಸವರಾಜ ಬೊಮ್ಮನಹಳ್ಳಿ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯೂ ಪ್ರಶ್ನೆ ಮಾಡುವುದರ ಮೂಲಕ ವಿಜ್ಞಾನ ತಿಳಿದುಕೊಳ್ಳಬೇಕು. ತಂತ್ರಜ್ಞಾನ ಹೇಗೆ ಬಳಸಬೇಕು ಹಾಗೂ ಮಕ್ಕಳು ಮೊಬೈಲ್‌ಗಳ ಬಳಕೆ ಕಡಿಮೆ ಮಾಡಿ ಅಭ್ಯಾಸದ ಕಡೆ ಗಮನಹರಿಸಬೇಕು ಮುಖ್ಯವಾಗಿ ಸದೃಢವಾದ ಆರೋಗ್ಯ ಹೊಂದಬೇಕೆಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಸಂಸ್ಥಾಪಕ ರಾಮೇಶ್ವರ ಪರುತಪ್ಪ ಶಿರಹಟ್ಟಿ ವಹಿಸಿಕೊಂಡಿದ್ದರು. ಇಂದು ಭಾರತೀಯ ವಿಜ್ಞಾನಿ ಸರ್.ಸಿ.ವಿ.ರಾಮನ್ ಅವರ "ರಾಮನ್ ಎಪೆಕ್ಟ್ " ಅವಿಸ್ಕಾರದ ನೆನಪಿಗಾಗಿ ಪ್ರತಿವರ್ಷವು ಫೆ.೨೮ರಂದು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತದೆ. ಇಂದಿನ ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನವು ಅತಿ ಮುಖ್ಯವಾಗಿದೆ ಎಲ್ಲರೂ ತಂತ್ರಜ್ಞಾನದ ಬಗ್ಗೆ ಅರಿತುಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಗಂಗಾಧರ ಶಿರಹಟ್ಟಿ. ಮಾತನಾಡಿ, ನಮ್ಮ ದೇಶಕ್ಕೆ ವಿಜ್ಞಾನಿಗಳ ಸೇವೆ ಅಪಾರವಾದ್ದದು, ಮಕ್ಕಳು ವಿಜ್ಞಾನದ ಪ್ರಯೋಜನೆ ಪಡೆದುಕೊಳ್ಳಬೇಕು ವಿಜ್ಞಾನಿಗಳ ಆದರ್ಶ ಗುಣಗಳನ್ನು ಪಾಲಿಸಬೇಕೆಂದು ಎಂದು ಹೇಳಿದರು.ಈ ವೇಳೆ ಶಿಕ್ಷಕ ಮಾರುತಿ ಮ್ಯಾಗೇರಿ, ಪರಶುರಾಮ ಹುಡೇದ, ಶ್ರೀಕಾಂತ ಮುದಗಲ್, ಸುವರ್ಣ ಹಡಗಲಿ, ರೇಷ್ಮಾ ಖುದ್ದುಬಾಯಿ, ಮೇರಿ ಅಂಥೋನಿ, ಸೀಮಾ ಪಾಟೀಲ. ಪ್ರೀತಿ ಅಖಳಂಡಸ್ವಾಮಿಮಠ. ದಾನಮ್ಮ ಜವಳಿ, ವಿಜಯಲಕ್ಷ್ಮೀ ಪಾಟೀಲ, ವಿಜಯಲಕ್ಷ್ಮೀ ಹಣಗಿ, ಯಶೋಧ ಎಚ್ ಆರ್, ಅನುಷಾ ಹಿರೇಮಠ, ರೇಷ್ಮಾ, ಅಕ್ಷತಾ ಕೋರಿಶೆಟ್ಟರ್, ಲತಾ ಬಸಾಪುರ, ಆಶಾಬೇಗಂ ನದಾಫ್, ಗೀತಾ ಮುಗಳಿ, ದೀಪಾ ದೊಡ್ಡಮನಿ, ಶೀಲಾ ಮರೋಳ, ಅನಿತಾ ಬಳ್ಳಾರಿ ಹಾಗೂ ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ನಿಖತ್ ಭದ್ರಾಪುರ ನಿರೂಪಿಸಿದರು.ಪೂರ್ಣಿಮಾ ಕೊಡ್ಲಿ ಸ್ವಾಗತಿಸಿದರು. ದೀಪಾ ಪಾಟೀಲ ವಂದಿಸಿದರು.ಪೊಟೋ-ಪಟ್ಟಣದ ಲಿಟಲ್ ಹಾರ್ಟ್ ಇಂಟರ್ ನ್ಯಾಶನಲ್ ಶಾಲೆಯಲ್ಲಿ ಖ್ಯಾತ ವಿಜ್ಞಾನಿ ಭಾರತ ರತ್ನ ಡಾ,ಸಿ.ವಿ.ರಾಮನ್ನ ಅವರ ಜಯಂತಿ ಅಂಗವಾಗಿ ವಿಜ್ಞಾನ ವಸ್ತು ಪ್ರದರ್ಶನವನ್ನು ಜಿಮ್ಸ್ ನಿರ್ಧೇಶಕ ಡಾ,ಬಸವರಾಜ ಬೊಮ್ಮನಳ್ಳಿ