ಸೇವಾ ಮನೋಭಾವದಿಂದ ಸಂಸ್ಕೃತಿ, ಸಂಸ್ಕಾರ ಕಲಿಯಿರಿ: ಗೋವಿಂದಸ್ವಾಮಿ

| Published : Jun 27 2024, 01:06 AM IST

ಸೇವಾ ಮನೋಭಾವದಿಂದ ಸಂಸ್ಕೃತಿ, ಸಂಸ್ಕಾರ ಕಲಿಯಿರಿ: ಗೋವಿಂದಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಬೀರೂರು, ಭವಿಷ್ಯದ ನಿರ್ಮಾತೃಗಳಾದ ಯುವಜನರು, ಕೇವಲ ಅಂಕಗಳ ಹಿಂದೆ ಬೀಳದೇ ದೇಶದ ಕನಸನ್ನು ನನಸು ಮಾಡುವ ದಿಕ್ಕಿನಲ್ಲಿ ಸೇವಾ ಮನೋಭಾವದಿಂದ ಸಂಸ್ಕೃತಿ ಮತ್ತು ಸಂಸ್ಕಾರ ಕಲಿಯಬೇಕು ಎಂದು ಜೋಡಿತಿಮ್ಮಾಪುರದ ತಾಲೂಕು ಪಂಚಾಯ್ತಿ ಮಾಜಿ ಸದಸ್ಯ ಗೋವಿಂದಸ್ವಾಮಿ ಹೇಳಿದರು.

- ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ವಾರ್ಷಿಕ ಶಿಬಿರಕ್ಕೆ ಚಾಲನೆ

ಕನ್ನಡಪ್ರಭ ವಾರ್ತೆ ಬೀರೂರು

ಭವಿಷ್ಯದ ನಿರ್ಮಾತೃಗಳಾದ ಯುವಜನರು, ಕೇವಲ ಅಂಕಗಳ ಹಿಂದೆ ಬೀಳದೇ ದೇಶದ ಕನಸನ್ನು ನನಸು ಮಾಡುವ ದಿಕ್ಕಿನಲ್ಲಿ ಸೇವಾ ಮನೋಭಾವದಿಂದ ಸಂಸ್ಕೃತಿ ಮತ್ತು ಸಂಸ್ಕಾರ ಕಲಿಯಬೇಕು ಎಂದು ಜೋಡಿತಿಮ್ಮಾಪುರದ ತಾಲೂಕು ಪಂಚಾಯ್ತಿ ಮಾಜಿ ಸದಸ್ಯ ಗೋವಿಂದಸ್ವಾಮಿ ಹೇಳಿದರು.

ಬೀರೂರು ಸಮೀಪದ ಜೋಡಿತಿಮ್ಮಾಪುರ ಗ್ರಾಮದಲ್ಲಿ ಸೋಮವಾರ ಕಡೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಿಂದ ನಡೆದ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ವಾರ್ಷಿಕ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ದೇಶ ಯುವಜನರಿಂದ ಸುಭದ್ರಗೊಳ್ಳಬೇಕಿದೆ. ಸಾಮಾಜಿಕ ನಾಯಕತ್ವ ಗುಣ ಪ್ರೇರೇಪಿಸುವ ಸೇವಾಯೋಜನೆ ಚಟುವಟಿಕೆಗಳ ಮೂಲಕ ಸಾಮಾಜಿಕ ಬದುಕಿನ ಮೂಲಮಂತ್ರವನ್ನು ಕಲಿಯುವುದು ಅಗತ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ಡಾ.ಕೆ.ಎ.ರಾಜಣ್ಣ ಮಾತನಾಡಿ, ಗ್ರಾಮಗಳ ಮೂಲಭೂತ ಸೌಲಭ್ಯ ಸುಧಾರಣೆ ಹಾಗೂ ಅಭಿವೃದ್ಧಿಗೆ ವಿದ್ಯಾರ್ಥಿಗಳ ಸೇವಾ ಕಾಳಜಿ ಅಷ್ಟೇ ಮುಖ್ಯ. ಗ್ರಾಮೀಣ ಬದುಕಿನ ಚಿತ್ರಣವನ್ನು ಪ್ರಗತಿಯತ್ತ ಕೊಂಡೂಯ್ಯಲು ಕಾಲೇಜು ವಿದ್ಯಾರ್ಥಿಗಳು ಸದಾ ಮುಂಚೂಣೆಯಲ್ಲಿ ನಿಂತು ಜನರಲ್ಲಿ ಅರಿವಿನ ಜಾಗೃತಿ ಮೂಡಿಸಬೇಕು ಎಂದರು.ಎನ್ ಎಸ್ ಎಸ್ ರಾಜ್ಯ ಪ್ರಶಸ್ತಿ ಪುರಸ್ಕೃತ ಪಿ.ಜಿ.ಶಿವಮೂರ್ತಿ ಮಾತನಾಡಿ, ಸಾಮಾಜಿಕ ಪ್ರಜ್ಞೆಯಿಂದ ನಾವು ಬದುಕುವ ಸಮಾಜದ ಬಗ್ಗೆ ಕಾಳಜಿ ಮೂಡಿಸುವುದು ನನಗಾಗಿ ಅಲ್ಲ, ನಿಮಗಾಗಿ ಎಂಬ ಧ್ಯೇಯ ಹೊಂದಿದೆ ಎಂದರು. ಈಗ ಕೇಂದ್ರ ಸರ್ಕಾರದ ನೀತಿಯಂತೆ ಪ್ರತಿಯೊಬ್ಬ ವಿದ್ಯಾರ್ಥಿ ಕಾಲೇಜು ವ್ಯಾಸಂಗದ ಸಂದರ್ಭದಲ್ಲಿ ಎನ್‌ಸಿಸಿ ಅಥವಾ ಎನ್‌ಎಸ್‌ಎಸ್‌ನಲ್ಲಿ ಪಾಲ್ಗೊಳ್ಳುವುದು ಕಡ್ಡಾಯ. ವಿದ್ಯಾರ್ಥಿಗಳು ಇಂತಹ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ತಮ್ಮ ಬೆಳವಣಿಗೆಗೆ ನಾಂದಿ ಹಾಡಬೇಕು. ಸ್ವಚ್ಛಭಾರತ ಯೋಜನೆ ಕೂಡಾ ಇದೇ ಕಾಳಜಿಯಿಂದ ಆರಂಭವಾಗಿದ್ದು ಎನ್‌ಎಸ್‌ಎಸ್ ಇಂತಹ ಯೋಜನೆಗಳ ಯಶಸ್ಸಿಗೆ ಕೈಜೋಡಿಸಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆ ಅಧ್ಯಕ್ಷ ಕೆ.ಪಿ.ರಾಘವೇಂದ್ರ, ಗ್ರಾಪಂ ಸದಸ್ಯ ವೆಂಕಟೇಶ್ ಜೆ ಜಿ, ಗ್ರಾಮದ ಮುಖಂಡ ಡಾ.ಮಹೇಶ್‌ಎಸ್, ಸಹಪ್ರಾಧ್ಯಾಪಕ ಎಂ.ಡಿ.ಗೋವಿಂದಪ್ಪ , ಕೆ.ಟಿ.ನರಸಿಂಹಪ್ಪ , ಬಸವರಾಜಪ್ಪ ಬಿ, ಹನುಮಂತಪ್ಪಎಚ್. ಜಿ, ಹನುಮಂತಪ್ಪ ಎಲ್ ಟಿ, ಸ.ಹಿ.ಪ್ರ ಶಾಲೆಯ ಮುಖ್ಯೋಪಾಧ್ಯಾಯರಾದ ಲೀಲಾವತಿ.ಪಿ, ಕಾಲೇಜಿನ ಅಧ್ಯಾಪಕ ಮಂಜುನಾಥ ಎಸ್ ಬಿ, .ಈರಣ್ಣ ಜೆ, ಹರೀಶ್‌ ಡಿ.ಎಲ್, ಕುಮಾರ್.ಎಸ್, ತಿಮ್ಮೇಗೌಡ ಟಿ.ಕೆ, ಲೋಕಪಾವನ, ಮಮತ ಕೆ ಎಂ, ಡಾ.ನವೀನ್ ಕುಮಾರ್ ವೈ ಎನ್, ಕಾಲೇಜಿನ ವ್ಯವಸ್ಥಾಪಕ ರವಿಚಂದ್ರ ಕೆ.ಎನ್, ಕಾರ್ಯಕ್ರಮಾಧಿಕಾರಿಗಳಾದ ಕುಮಾರ ಎಚ್.ಎಂ, ಅಶೋಕ್ ಕುಮಾರ್ ಜಿ.ಎಸ್ ಹಾಗೂ ಎನ್.ಎಸ್.ಎನ್‌ನ ವಿದ್ಯಾರ್ಥಿಗಳು ಹಾಜರಿದ್ದರು.

----

25 ಬೀರೂರು 1ಬೀರೂರು ಸಮೀಪದ ಜೋಡಿತಿಮ್ಮಾಪುರ ಗ್ರಾಮದಲ್ಲಿ ಸೋಮವಾರ ಕಡೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ವತಿಯಿಂದ ಏರ್ಪಡಿಸಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ವಾರ್ಷಿಕ ಶಿಬಿರಕ್ಕೆ ತಾಲೂಕು ಪಂಚಾಯ್ತಿ ಮಾಜಿ ಸದಸ್ಯ ಗೋವಿಂದಸ್ವಾಮಿ ಚಾಲನೆ ನೀಡಿ ಮಾತನಾಡಿದರು. ಕಾಲೇಜು ಪ್ರಾಚಾರ್ಯ ಡಾ.ಕೆ.ಎ.ರಾಜಣ್ಣ , ಕಾರ್ಯಕ್ರಮಾಧಿಕಾರಿ ಕುಮಾರ ಎಚ್.ಎಂ ಮತ್ತು ಅಶೋಕ್ ಕುಮಾರ್ ಇದ್ದರು.