ಸಾರಾಂಶ
ಮುಂಡಗೋಡ: ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ. ಶೈಕ್ಷಣಿಕ ಜಿಲ್ಲಾ ಪ್ರೌಢಶಾಲಾ ಮುಖ್ಯಾಧ್ಯಾಪಕರ ಸಂಘದ ಸಹಯೋಗದಲ್ಲಿ ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳಿಗೆ ಕಲಿಕಾ ಸ್ಫೂರ್ತಿ ಮಾರ್ಗದರ್ಶಿ ಶಿಬಿರವನ್ನು ಮುಂಡಗೋಡದ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು. ಶಿರಸಿಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಡಯಟ್ ಪ್ರಾಂಶುಪಾಲ ಎಂ.ಎಸ್. ಹೆಗಡೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಶಿಬಿರಗಳ ಸಂಪೂರ್ಣ ಉಪಯೋಗವನ್ನು ಪಡೆದುಕೊಂಡು ಮುಂಬರುವ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವಂತೆ ಶುಭ ಹಾರೈಸಿದರು.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಪನ್ಯಾಸಕ ನಾರಾಯಣ ಭಾಗ್ವತ್ ಮಕ್ಕಳಿಗೆ ನೆನಪಿನ ಶಕ್ತಿ ವೃದ್ಧಿ ಹೇಗೆ ಮಾಡಬೇಕು ಮತ್ತು ಸ್ಮರಣಶಕ್ತಿ ಹೆಚ್ಚಿಸುವ ವಿಧಾನಗಳನ್ನು ತಿಳಿಸಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಜಕಣಾಚಾರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿರಸಿ ಶೈಕ್ಷಣಿಕ ಜಿಲ್ಲಾ ಪ್ರೌಢಶಾಲಾ ಮುಖ್ಯಾಧ್ಯಾಪಕರ ಸಂಘದ ಅಧ್ಯಕ್ಷ ಎಸ್.ಡಿ. ಮುಡೆಣ್ಣವರ, ಈಶ್ವರ ನಾಯ್ಕ, ರಮೇಶ ಅಂಬಿಗೇರ, ಮಂಜುನಾಥ ಯಾಜಿ, ನಾಗರಾಜ ನಾಯ್ಕ, ಗಾಯಿತ್ರಿ ಪಿ.ಆರ್., ಇಕ್ಬಾಲ್ ಅಹಮದ, ಕೃಷ್ಣ ಭಟ್, ಸವಿತಾ ವೇರ್ಣೇಕರ, ಅಜಿಮ್ ಸರ್, ಗಿರೀಶ್. ಕುಲಕರ್ಣಿ, ಗಜಾನನ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ನಾಗರಾಜ ನಾಯ್ಕ ಸ್ವಾಗತಿಸಿದರು. ರಮೇಶ ಪವಾರ ನಿರೂಪಿಸಿದರು. ಜಿ.ಎನ್. ನಾಯ್ಕ ವಂದಿಸಿದರು.
ಅಂಗನವಾಡಿ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣೆಅಂಕೋಲಾ: ತಾಲೂಕಿನ ಹೊಸಗದ್ದೆ ಅಂಗನವಾಡಿ ಕೇಂದ್ರದ ಮಕ್ಕಳಿಗೆ ರೋಟರಿ ಕ್ಲಬ್ ಹಾಗೂ ಪುಷ್ಪಲತಾ ನಾಯಕ ಅವರ ಪ್ರಾಯೋಜಕತ್ವದಲ್ಲಿ ಸಮವಸ್ತ್ರ, ಕುಡಿಯುವ ನೀರಿನ ಬಾಟಲ್, ಮಕ್ಕಳ ಕುರ್ಚಿ, ಪೆನ್ನು ಹಾಗೂ ಮಕ್ಕಳ ಆಟದ ಸಾಮಗ್ರಿಗಳನ್ನು ಉಚಿತವಾಗಿ ವಿತರಿಸಲಾಯಿತು.
ರೂರಲ್ ರೋಟರಿ ಅಧ್ಯಕ್ಷ ರವಿ ನಾಯಕ ಮಾತನಾಡಿ, ದೇಶದ ಭವಿಷ್ಯ ಬೆಳಗಬೇಕಾದರೆ ಮುಖ್ಯವಾಗಿ ಮಕ್ಕಳು ಶೈಕ್ಷಣಿಕವಾಗಿ ಬೆಳೆಯಬೇಕು. ಅದಕ್ಕಾಗಿ ಸರ್ಕಾರದ ಜತೆಗೆ ಎಲ್ಲ ಸಂಘ- ಸಂಸ್ಥೆಗಳು, ವೈಯಕ್ತಿಕವಾಗಿ ಕೈಜೋಡಿಸಬೇಕು ಎಂದರು.ಸಾಮಗ್ರಿಗಳ ಪ್ರಾಯೋಜಕತ್ವ ವಹಿಸಿಕೊಂಡ ರೂರಲ್ ರೋಟರಿ ಕ್ಲಬ್ ಕಾರ್ಯದರ್ಶಿ ಪುಷ್ಪಲತಾ ನಾಯಕ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಇರುವ ಇಂಥ ಅಂಗನವಾಡಿ ಕೇಂದ್ರಗಳಿಗೆ ಕೈಲಾದ ಸಹಾಯವನ್ನು ಮಾಡುವ ಮೂಲಕ ಎಲ್ಲರೂ ಸಮಾಜದ ಏಳ್ಗೆಯಲ್ಲಿ ಭಾಗವಹಿಸಬೇಕು ಎಂದರು.ಕ್ಲಬ್‌ನ ಖಜಾಂಚಿ ಶಿವಾನಂದ ನಾಯಕ, ಡಾ. ಸಂಜು ನಾಯಕ, ಅಂಗನವಾಡಿ ಕಾರ್ಯಕರ್ತೆ ಸವಿತಾ ಆಗೇರ, ಅಡುಗೆ ಸಹಾಯಕಿ ಧನವಂತಿ ಹಾಗೂ ಊರ ನಾಗರಿಕರು ಉಪಸ್ಥಿತರಿದ್ದರು.