ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರಇಂದಿನ ಸಮಾಜದಲ್ಲಿ ವ್ಯಕ್ತಿಯ ಬೆಳವಣಿಗೆಗೆ ಕುಂಠಿತವಾಗಿರುವ ದೂರದರ್ಶನ, ಮೊಬೈಲ್‌ಗೆ ದಾಸರಾಗಬೇಡಿ, ಓದು ಅಭ್ಯಾಸ ಕೈಗೊಳ್ಳಿ ಜ್ಞಾನ ದಾಸೋಹಿಗಳಾಗಿ ಎಂದು ಎಂಎಲ್‌ಸಿ ಇಂಚರ ಗೋವಿಂದರಾಜು ತಿಳಿಸಿದರು.ನಗರದ ಸ್ಕೌಟ್ ಭವನದಲ್ಲಿ ಜಿಲ್ಲಾ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಅನಿತಾ ಕೌಲ್-ಸಾವಿತ್ರಿಬಾಯಿ ಫುಲೆ ವಿದ್ಯಾರ್ಥಿ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಓದುವ ಅಭ್ಯಾಸ ಬೆಳೆಸಿಕೊಳ್ಳಿ
ಮೊಬೈಲ್ ದೂರದರ್ಶನಗಳನ್ನು ನೋಡುವುದಕ್ಕಿಂತ ಪ್ರತಿದಿನ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಓದುವ ಹವ್ಯಾಸದಿಂದ ಜ್ಞಾನ ವೃದ್ಧಿಯಾಗುತ್ತದೆ, ಕಲಿಕೆ ದೃಢವಾಗುತ್ತದೆ ಜೀವನದ ಮುಂದಿನ ಕನಸು ನನಸಾಗಲು ಸಾಧ್ಯ ಎಂದರು.ಶಿಕ್ಷಕರಿಗೆ ಸಾವಿತ್ರಿಬಾಯಿ ಪುಲೆ ಪ್ರಶಸ್ತಿ ವಿತರಿಸಿದ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ.ಅಜಯ್ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಕಲಿಸುತ್ತಿರುವ ಶಿಕ್ಷಕರು ಮೊದಲು ಜ್ಞಾನ ದಾಸೋಹಿಗಳಾಗಬೇಕು, ಕಲಿಕೆ ವಿದ್ಯಾರ್ಥಿಗಳಲ್ಲಿ ದೃಢಪಡಿಸಲು ಸತತ ಪರಿಶ್ರಮ ಮತ್ತು ಪ್ರಯತ್ನದಿಂದ ಮಾತ್ರ ಉತ್ತಮ ಶಿಕ್ಷಕರಾಗಲು ಸಾಧ್ಯ ಎಂದರು.ಆದರ್ಶಗಳು ಸ್ಫೂರ್ತಿ ನೀಡಲಿಕ್ಷೇತ್ರ ಶಿಕ್ಷಣಾಧಿಕಾರಿ ಉಮಾ ಭಾವಚಿತ್ರಕ್ಕೆ ಪುಷ್ಠ ನಮನ ಅರ್ಪಿಸಿ ಮಾತನಾಡಿ , ಅನಿತಾ ಕೌಲ್ ರವರ ಆದರ್ಶಗಳು ಎಂದೆಂದಿಗೂ ಶಿಕ್ಷಕರಿಗೆ ಮಾರ್ಗದರ್ಶನ ನೀಡಲಿದೆ ಅವರ ಆದರ್ಶಗಳು ಅವರ ಆದರ್ಶಗಳು ಇಂದಿನ ಯುವ ಪೀಳಿಗೆಗೆ ಸ್ಫೂರ್ತಿಯಾಗಲಿ ಎಂದರು . ಜಿಲ್ಲಾ ಸರ್ಕಾರಿ ನೌಕರರ ಸಂಘದ ಕೋಶ್ಯಾಧ್ಯಕ್ಷ ಮುರಳಿ ಮೋಹನ್, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಜಿ.ಶ್ರೀನಿವಾಸ್, ಜ್ಞಾನ-ವಿಜ್ಞಾನ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಈ.ಬಸವರಾಜು, ಶಾಲಾ ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕ ಕೆ.ಶ್ರೀನಿವಾಸ್, ಜಿಲ್ಲಾ ಸಮಿತಿಯ ಮುಖಂಡರಾದ ಕೆ.ಸಿ.ಪದ್ಮಾವತಿ, ಶರಣಪ್ಪ ಜಮಾದಾರ್, ಸುರೇಶ್, ಗೋಪಿನಾಥ್, ಮಯೂನ್, ತಾಯಿಯೂರಪ್ಪ, ಪ್ರಶಾಂತ್ ಪ್ರಶಾಂತ್, ಶ್ರೀನಿವಾಸ ಯಾದವ್, ಮಂಜುಳಾ, ಶರಣಪ್ಪ ಜಮಾದಾರ್, ಕೆ.ವಿ.ಜಗನ್ನಾಥ್ ಇದ್ದರು.