ಉಪಪಂಗಡ ಬಿಟ್ಟು ರೆಡ್ಡಿ ಎಂದೇ ನಮೂದಿಸಿ

| Published : Aug 31 2025, 01:07 AM IST

ಸಾರಾಂಶ

ರಾಜ್ಯದಲ್ಲಿ ರೆಡ್ಡಿ ಸಮುದಾಯದಲ್ಲಿ ಕೇವಲ ಮೂರು ಪಂಗಡಗಳಿವೆ. ರಡ್ಡಿ, ರೆಡ್ಡಿ, ರೆಡ್ಡಿ(ಒಕ್ಕಲಿಗ) ಎಂದು ವಿಂಗಡಿಸಲಾಗಿದೆ. ಈ ಪಟ್ಟಿಯಲ್ಲಿ ೧೧೦೫-ರೆಡ್ಡಿ, ೧೧೦೬-ರೆಡ್ಡಿ ಕ್ರಿಶ್ಚಿಯನ್, ೧೧೦೭-ರೆಡ್ಡಿ ಲಿಂಗಾಯಿತ, ೧೦೭೦-ರೆಡ್ಡಿ ಲಿಂಗಾಯಿತ, ೧೧೦೯ ರೆಡ್ಡಿ ಬಲಿಜ, ೧೧೧೦ ರೆಡ್ಡಿ ದಾಸರ, ೧೧೧೧ ರೆಡ್ಡಿ ಗೌಂಡರ್, ಹಾಗೂ ೧೦೭೮ ಶೈವರೆಡ್ಡಿ ಉಪಪಂಗಡದಿಂದ ಗೊಂದಲ.

ಕನ್ನಡಪ್ರಭ ವಾರ್ತೆ ಕೋಲಾರರಾಜ್ಯದಲ್ಲಿ ರೆಡ್ಡಿ ಸಮುದಾಯದವರು ಜಾತಿ ಗಣತಿಯಲ್ಲಿ ಬೇರೆ ಉಪಪಂಗಡಗಳನ್ನು ಕೈಬಿಟ್ಟು ೧೧೦೫ ರೆಡ್ಡಿಯಡಿ ಸೇರ್ಪಡೆ ಮಾಡಬೇಕೆಂದು ಕರ್ನಾಟಕ ರೆಡ್ಡಿ ಜನ ಸಂಘದ ಸಂಘಟನಾ ಅಧ್ಯಕ್ಷ ಎಂ.ಸಿ.ಪ್ರಭಾಕರರೆಡ್ಡಿ ತಿಳಿಸಿದರು. ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆ.೧೯ರಂದು ಕರ್ನಾಟಕ ಹಿಂದುಳಿದ ಆಯೋಗದಿಂದ ಜಾತಿ ಸಮೀಕ್ಷಾ ವರದಿಯ ಮೀಸಲಾತಿ ಪ್ರಕಟಣೆಯು ರೆಡ್ಡಿ ಸಮುದಾಯದವರಿಗೆ ತೀರಾ ಅಸಮಾಧಾನ ಉಂಟು ಮಾಡಿದೆ ಎಂದರು. ಉಪಪಂಗಡ ದೂರವಿಡಿರಾಜ್ಯದಲ್ಲಿ ರೆಡ್ಡಿ ಸಮುದಾಯದಲ್ಲಿ ಕೇವಲ ಮೂರು ಪಂಗಡಗಳಿವೆ. ರಡ್ಡಿ, ರೆಡ್ಡಿ, ರೆಡ್ಡಿ(ಒಕ್ಕಲಿಗ) ಎಂದು ವಿಂಗಡಿಸಲಾಗಿದೆ. ಈ ಪಟ್ಟಿಯಲ್ಲಿ ೧೧೦೫-ರೆಡ್ಡಿ, ೧೧೦೬-ರೆಡ್ಡಿ ಕ್ರಿಶ್ಚಿಯನ್, ೧೧೦೭-ರೆಡ್ಡಿ ಲಿಂಗಾಯಿತ, ೧೦೭೦-ರೆಡ್ಡಿ ಲಿಂಗಾಯಿತ, ೧೧೦೯ ರೆಡ್ಡಿ ಬಲಿಜ, ೧೧೧೦ ರೆಡ್ಡಿ ದಾಸರ, ೧೧೧೧ ರೆಡ್ಡಿ ಗೌಂಡರ್, ಹಾಗೂ ೧೦೭೮ ಶೈವರೆಡ್ಡಿ ಎಂಬುವುದಾಗಿ ಹಲವು ವಿಧವಾದ ಉಪ ಪಂಗಡಗಳನ್ನು ಸೇರ್ಪಡೆ ಮಾಡಿರುವುದು ಗೊಂದಲಕ್ಕೆ ಕಾರಣವಾಗಿದೆ. ಇದರಿಂದಾಗಿ ಸೌಲಭ್ಯಗಳು ಸಿಗದಂತಾಗಿದೆ. ಎಲ್ಲರೂ ಉಪ ಪಂಗಡಗಳನ್ನು ದೂರವಿಟ್ಟು ರೆಡ್ಡಿ ಎಂದು ಮಾತ್ರ ಸಮೀಕ್ಷೆಯಲ್ಲಿ ನಮೂದಿಸುವಂತೆ ಮನವಿ ಮಾಡಿದರು.

ರೆಡ್ಡಿ ಜನಸಂಖ್ಯೆ 40 ಲಕ್ಷ

ರಾಜ್ಯದಲ್ಲಿ ನಮ್ಮ ಸಮುದಾಯದ ಜನಸಂಖ್ಯೆ ಸುಮಾರು ೩೦ ರಿಂದ ೪೦ ಲಕ್ಷ ಇದ್ದರೂ ಸಹ ಕಾಂತರಾಜ ವರದಿಯಲ್ಲಿ ಕೇವಲ ೭ ಲಕ್ಷ ಎಂದು ಸಮೀಕ್ಷೆಯಲ್ಲಿ ನಮೂದಿಸಿರುವುದನ್ನು ರೆಡ್ಡಿ ಸಮುದಾಯದವರು ಯಾರೂ ಸಹ ಒಪ್ಪುವುದಿಲ್ಲಾ ಇದು ಯಾವುದಾದರೂ ಒತ್ತಡವೂ ಅಥವಾ ತಾಂತ್ರಿಕ ದೋಷವು ಗೊತ್ತಿಲ್ಲ. ಬೀದರ್‌ನಿಂದ ಮುಳಬಾಗಿಲವರೆಗೆ ನಡೆಸಿರುವ ಸಮೀಕ್ಷೆಯಲ್ಲಿ ನಾವುಗಳು ನಡೆಸಿದ್ದು ೩೦ ಲಕ್ಷಕ್ಕೂ ಹೆಚ್ಚು ಮಂದಿ ಇದ್ದೇವೆ ಎಂದು ಹೇಳಿದರು.

ಈ ವೇಳೆ ರಾಜ್ಯ ನಿರ್ದೇಶಕರಾದ ರವೀಂದ್ರ ರೆಡ್ಡಿ, ಮುಖಂಡರಾದ ಶಾಂತರಾಜು, ಸುರೇಶ್, ವೇಮಣ್ಣ, ವಿಶ್ವನಾಥ್ ರೆಡ್ಡಿ, ಪ್ರಸಾದರೆಡ್ಡಿ, ಸುಬ್ಬಾರೆಡ್ಡಿ, ರಾಮಚಂದ್ರರೆಡ್ಡಿ, ಅನಿಲ್ ರೆಡ್ಡಿ, ಆನಂದ್ ರೆಡ್ಡಿ, ನಾಗರೆಡ್ಡಿ ಮತ್ತಿತರರು ಇದ್ದರು.