ಬಿಸಿಯೂಟ ಹೊಣೆ ಸ್ಥಳೀಯ ಸಂಸ್ಥೆಗಳಿಗೆ ವಹಿಸಲಿ

| Published : Dec 02 2024, 01:20 AM IST

ಸಾರಾಂಶ

ಬಿಸಿಯೂಟ, ಮೊಟ್ಟೆ ವಿತರಣೆಗಾಗಿ ನಿತ್ಯ ಅಡುಗೆ ಅನಿಲ ಸರಬರಾಜು ಹಾಗೂ ಮೊಟ್ಟೆ ಬಾಳೆಹಣ್ಣು, ಚಿಕ್ಕಿ ಖರೀದಿ, ಸರಬರಾಜು, ವಿತರಣೆಯಿಂದ ಶಿಕ್ಷಕರು ಮಾನಸಿಕವಾಗಿ ಹಾಗೂ ದೈಹಿಕವಾಗಿ ಬಳಲುತ್ತಿದ್ದು ಶೈಕ್ಷಣಿಕವಾಗಿ ಪ್ರಗತಿ ಕಡೆ ಗಮನಹರಿಸಲು ಸಾಧ್ಯವಾಗುತ್ತಿಲ್ಲ.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಒತ್ತಾಯ । ಡಿಡಿಪಿಐ, ಬಿಇಒಗೆ ಮನವಿ ಸಲ್ಲಿಕೆ

ಬಿಸಿಯೂಟ ಕೆಲಸಕ್ಕೆ ಸಮಯ ವ್ಯಯ, ಬೋಧನೆ ಸಮಯದ ಅಭಾವ, ಶಿಕ್ಷಕರಿಗೆ ಅರ್ಥಿಕ ಹೊರೆ, ಕೋಲಾರ

ಬಿಸಿಯೂಟ, ಮೊಟ್ಟೆ ವಿತರಣೆಗಾಗಿ ನಿತ್ಯ ಅಡುಗೆ ಅನಿಲ ಸರಬರಾಜು ಹಾಗೂ ಮೊಟ್ಟೆ ಬಾಳೆಹಣ್ಣು, ಚಿಕ್ಕಿ ಖರೀದಿ, ಸರಬರಾಜು, ವಿತರಣೆಯಿಂದ ಶಿಕ್ಷಕರು ಮಾನಸಿಕವಾಗಿ ಹಾಗೂ ದೈಹಿಕವಾಗಿ ಬಳಲುತ್ತಿದ್ದು ಶೈಕ್ಷಣಿಕವಾಗಿ ಪ್ರಗತಿ ಕಡೆ ಗಮನಹರಿಸಲು ಸಾಧ್ಯವಾಗುತ್ತಿಲ್ಲ.ಕನ್ನಡಪ್ರಭ ವಾರ್ತೆ ಕೋಲಾರಪ್ರಾಥಮಿಕ ಶಾಲೆಗಳಲ್ಲಿ ಪ್ರತಿದಿನ ಸರ್ಕಾರದ ಪ್ರೋತ್ಸಾಹದಾಯಕ ಕಾರ್ಯಕ್ರಮಗಳಾದ ಅಕ್ಷರ ದಾಸೋಹ, ಮೊಟ್ಟೆ ವಿತರಣೆ ಕಾರ್ಯಗಳ ಒತ್ತಡದಿಂದಾಗಿ ಶೈಕ್ಷಣಿಕ ಬೆಳವಣಿಗೆ ಕುಂಠಿತಗೊಳ್ಳಲು ಕಾರಣವಾಗಿದೆ. ಈ ಕಾರ್ಯಕ್ರಮಗಳನ್ನು ಸ್ಥಳೀಯ ಸಂಸ್ಥೆಗಳಿಗೆ ವಹಿಸುವಂತೆ ಆಗ್ರಹಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರತಿನಿಧಿಗಳು ಡಿಡಿಪಿಐ, ಬಿಇಒ ಹಾಗೂ ಅಕ್ಷರದಾಸೋಹ ಸಹಾಯಕ ನಿರ್ದೇಶಕರ ಮೂಲಕ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರು, ಆಯುಕ್ತರಿಗೆ ಮನವಿ ಸಲ್ಲಿಸಿದರು.ಶಿಕ್ಷಕರಿಗೆ ಅನಗತ್ಯ ಹೊರೆ

ಬಿಸಿಯೂಟ, ಮೊಟ್ಟೆ ವಿತರಣೆಗಾಗಿ ನಿತ್ಯ ಅಡುಗೆ ಅನಿಲ ಸರಬರಾಜು ಹಾಗೂ ಮೊಟ್ಟೆ ಬಾಳೆಹಣ್ಣು, ಚಿಕ್ಕಿ ಖರೀದಿ, ಸರಬರಾಜು, ವಿತರಣೆಯಿಂದ ಶಿಕ್ಷಕರು ಮಾನಸಿಕವಾಗಿ ಹಾಗೂ ದೈಹಿಕವಾಗಿ ಬಳಲುತ್ತಿದ್ದು ಶೈಕ್ಷಣಿಕವಾಗಿ ಪ್ರಗತಿ ಕಡೆ ಗಮನಹರಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.ಈ ನಡುವೆ ಬೆಲೆ ಏರಿಕೆಯಿಂದ ಮೊಟ್ಟೆ ವಿತರಣೆ ಶಿಕ್ಷಕರಿಗೆ ಆರ್ಥಿಕವಾಗಿ ಹೊರೆಯಾಗುತ್ತಿದೆ. ಹಾಗಾಗಿ ಯೋಜನಾ ಅನುಷ್ಠಾನಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಡುವಂತೆ ಹಾಗೂ ಶಾಲಾ ಅನುದಾನ ಸೆಳೆಯುವ ಚಕ್ಕರ್ ಮೇಕರ್ ಸರಳಿಕರಣ ಮಾಡಬೇಕು. ಚುನಾವಣಾ ಕಾರ್ಯ, ಮತಪಟ್ಟಿ ತಯಾರಿಕೆ, ಗಣತಿ ಹೀಗೆ ಎಲ್ಲಾ ಕಾರ್ಯಕ್ರಮಗಳಿಗೂ ಪ್ರಾಥಮಿಕ ಶಾಲಾ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುತ್ತಿದೆ. ಈ ನಡುವೆ ಮೊಟ್ಟೆ ಖರೀದಿಸಿ ಅದನ್ನು ಬೇಯಿಸಿ ವಿತರಿಸಲು ತೊಂದರೆಯಾಗಿದೆ.

ಬಿಸಿಯೂಟಕ್ಕೆ ಸ್ವಂತ ಹಣ

ಮೊಟ್ಟೆ ಬೆಲೆ ಏರಿಕೆಯಿಂದಾಗಿ ಸರ್ಕಾರ ನೀಡುವ ಅನುದಾನ ಸಾಕಾಗುತ್ತಿಲ್ಲ, ಶಿಕ್ಷಕರಿಗೆ ಆರ್ಥಿಕ ಹೊರೆಯೂ ಆಗುತ್ತಿದೆ. ಕಡಿಮೆ ಮಕ್ಕಳಿರುವ ಶಾಲೆಗಳಲ್ಲಿ ಬಿಸಿಯೂಟ ಯೋಜನೆ ಸಾಧಿಲ್ವಾರು ತರಕಾರಿಗೂ ಸಾಕಾಗುವುದಿಲ್ಲ, ಇಲ್ಲಿ ಸಾಂಬಾರು ಪುಡಿ,ಈರುಳ್ಳಿ, ಬೆಳ್ಳುಳ್ಳಿ ಎಲ್ಲವನ್ನು ಖರೀದಿಸಲು ಕಷ್ಟವಾಗಿದೆ, ಶಿಕ್ಷಕರೇ ನಿತ್ಯ ಕೈಯಿಂದ ಹಣ ಹಾಕಿ ಖರೀದಿ ಮಾಡಬೇಕಾಗಿದೆ ಎಂದು ತಿಳಿಸಿದರು.

ಬೋಧನೆಗೆ ಹಿನ್ನಡೆ:

ಈ ಹಿನ್ನೆಲೆಯಲ್ಲಿ ಸರ್ಕಾರ ಬಿಸಿಯೂಟ ಯೋಜನೆಯನ್ನು ಸ್ಥಳೀಯ ಸಂಸ್ಥೆಗಳಿಗೆ ವಹಿಸಿದರೆ ಶಿಕ್ಷಕರು ಪೂರ್ಣ ಪ್ರಮಾಣದಲ್ಲಿ ಬೋಧನೆಯಲ್ಲಿ ತೊಡಗಲು ಸಹಕಾರಿಯಾಗಲಿದೆ ಎಂದ ಅವರು, ಮಕ್ಕಳ ಹಿತದೃಷ್ಟಿಯಿಂದ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಈ ಸಂದಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್ ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿ ಎನ್.ಚಂದ್ರಪ್ಪ, ಖಜಾಂಚಿ ಅಶ್ವಥ್ಥಪ್ಪ, ಸಂಘದ ಪದಾಧಿಕಾರಿಗಳಾಧ ಕೃಷ್ಣಪ್ಪ, ಭಾಗ್ಯಲಕ್ಷ್ಮಮ್ಮ, ಮಂಜುಳಾ, ಭಾಗ್ಯಮ್ಮ, ರುದ್ರಮ್ಮ, ರೇಷ್ಮಾ ತಲತ್ ಕಾನಂ, ಸೋಮಶೇಖರ್, ಪಾಪಣ್ಣ, ವೆಂಕಟರಾಮ್, ಇಬ್ರಾಹಿಂ ಖಾನ್ ಮತ್ತಿತರ ಪದಾಧಿಕಾರಿಗಳು, ಶಿಕ್ಷಕರು ಹಾಜರಿದ್ದರು.

೧ಕೆಎಲ್‌ಆರ್-೧೦........ಬಿಸಿಯೂಟ ವ್ಯವಸ್ಥೆಯ ಹೊಣೆಯನ್ನು ಸ್ಥಳೀಯ ಸಂಸ್ಥೆಗಳಿಗೆ ವಹಿಸುವಂತೆ ಆಗ್ರಹಿಸಿ ಕೋಲಾರದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಡಿಡಿಪಿಐಗೆ ಮನವಿ ಸಲ್ಲಿಸಿತು.