ಬೇಲೂರು, ಹಳೇಬೀಡು, ದೊಡ್ಡಗದವಳ್ಳಿ ಸೇರಿದಂತೆ ಹಾಸನ ಜಿಲ್ಲೆ ಶಿಲ್ಪಕಲೆಯ ತವರೂರಾಗಿದೆ. ಕನ್ಯಾಕುಮಾರಿಯಿಂದ ಕಾವೇರಿವರೆಗೆ ಹಾಗೂ ಉತ್ತರ ಭಾರತದಿಂದ ಆಗ್ರಾವರೆಗೆ ವಿಶ್ವಕರ್ಮ ಶಿಲ್ಪಿಗಳ ಕೊಡುಗೆಗಳಿವೆ. ಬೌದ್ಧ ವಿಹಾರಗಳು, ಕ್ರೈಸ್ತ ಚರ್ಚುಗಳೂ ಸಹ ವಿಶ್ವಕರ್ಮ ಶಿಲ್ಪಿಗಳ ಕೈಚಳಕದಿಂದಲೇ ರೂಪುಗೊಂಡಿವೆ ಎಂದು ಅವರು ಹೇಳಿದರು. ಅಮರಶಿಲ್ಪಿ ಜಕಣಾಚಾರ್ಯರ ಸ್ಮಾರಕ ನಿರ್ಮಾಣದಿಂದ ಸಮುದಾಯಕ್ಕೆ ಪುನರುಜ್ಜೀವನ ಸಿಗಲಿದೆ ಎಂದು ಆಶಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಶಿಲ್ಪಿಯು ತನ್ನ ಹೆಸರನ್ನು ಶಿಲ್ಪದ ಮೇಲೆ ಹಾಕಿಕೊಳ್ಳದೆ ಭಾವನಾತ್ಮಕವಾಗಿ ಕಲೆ ಕೆತ್ತುವುದು ವಿಶ್ವಕರ್ಮ ಪರಂಪರೆಯ ವಿಶೇಷತೆಯಾಗಿದೆ ಎಂದು ಅನಂತ ಶ್ರೀ ವಿಭೂಷಿತ ಶಿವ ಸುಜ್ಞಾನ ತೀರ್ಥ ಮಹಾಸ್ವಾಮಿ ತಿಳಿಸಿದರು.

ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರ್ಯರ ಸಂಸ್ಮರಣಾ ದಿನಾಚರಣೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿದ್ದ ಶ್ರೀಗಳು ಜಕಣಾಚಾರ್ಯರ ಬಾಲ್ಯ, ಶಿಲ್ಪಕಲೆ ಮತ್ತು ಅವರ ಮಹಾನ್ ಕೊಡುಗೆಗಳನ್ನು ಸ್ಮರಿಸಿದರು. ಶಿವ–ಪಾರ್ವತಿ ಶಿಲ್ಪತತ್ತ್ವವನ್ನು ಉದಾಹರಿಸಿ, “ಶಿಲ್ಪರೂಪವೇ ನನ್ನ ರೂಪ” ಎನ್ನುವ ತತ್ತ್ವವನ್ನು ವಿವರಿಸಿದರು. ಬೇಲೂರು, ಹಳೇಬೀಡು, ದೊಡ್ಡಗದವಳ್ಳಿ ಸೇರಿದಂತೆ ಹಾಸನ ಜಿಲ್ಲೆ ಶಿಲ್ಪಕಲೆಯ ತವರೂರಾಗಿದೆ. ಕನ್ಯಾಕುಮಾರಿಯಿಂದ ಕಾವೇರಿವರೆಗೆ ಹಾಗೂ ಉತ್ತರ ಭಾರತದಿಂದ ಆಗ್ರಾವರೆಗೆ ವಿಶ್ವಕರ್ಮ ಶಿಲ್ಪಿಗಳ ಕೊಡುಗೆಗಳಿವೆ. ಬೌದ್ಧ ವಿಹಾರಗಳು, ಕ್ರೈಸ್ತ ಚರ್ಚುಗಳೂ ಸಹ ವಿಶ್ವಕರ್ಮ ಶಿಲ್ಪಿಗಳ ಕೈಚಳಕದಿಂದಲೇ ರೂಪುಗೊಂಡಿವೆ ಎಂದು ಅವರು ಹೇಳಿದರು. ಅಮರಶಿಲ್ಪಿ ಜಕಣಾಚಾರ್ಯರ ಸ್ಮಾರಕ ನಿರ್ಮಾಣದಿಂದ ಸಮುದಾಯಕ್ಕೆ ಪುನರುಜ್ಜೀವನ ಸಿಗಲಿದೆ ಎಂದು ಆಶಿಸಿದರು.

ಉದ್ಘಾಟನಾ ನುಡಿಯಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್. ಎಲ್. ಮಲ್ಲೇಶ್ ಗೌಡ ಮಾತನಾಡಿ, “ಸರ್ವ ಜನಾಂಗದ ಶಾಂತಿಯ ತೋಟ” ಎನ್ನುವ ನಾಡಗೀತೆ ಈ ನಾಡಿನ ಭೌಗೋಳಿಕ, ಸಾಂಸ್ಕೃತಿಕ, ಧಾರ್ಮಿಕ ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತದೆ ಎಂದರು. ಜಡವನ್ನು ಜೀವಂತಗೊಳಿಸುವ ಶಿಲ್ಪಕಲೆ ಜಗತ್ತಿನ ಸೌಂದರ್ಯಕ್ಕೆ ಪ್ರಾಣ ತುಂಬುತ್ತದೆ. ವಿದೇಶಿಗರು ಇಲ್ಲಿಗೆ ಬಂದಾಗ ‘ಈ ಶಿಲ್ಪವನ್ನು ಕೆತ್ತಿದವರು ಯಾರು?’ ಎಂದು ಕೇಳುವಷ್ಟು ನಮ್ಮ ಕಲೆ ಸೊಗಸಾಗಿದೆ ಎಂದು ಶ್ಲಾಘಿಸಿದರು.ಆಕಾಶವಾಣಿ ನಿವೃತ್ತ ವಿಜಯ ಅಂಗಡಿ ಅವರು ಮಾತನಾಡಿ, ಜಕಣಾಚಾರ್ಯರ ಬಾಲ್ಯ, ಬೆಳವಣಿಗೆ ಹಾಗೂ 12ನೇ ಶತಮಾನದ ದಾಖಲೆಗಳಲ್ಲಿ ಲಭ್ಯವಿರುವ ಅವರ ಶಿಲ್ಪಪರಂಪರೆಯನ್ನು ಸವಿ ನೆನಪಿಸಿದರು. ಹಳೇಬೀಡು, ಬೇಲೂರು, ಸೋಮೇಶ್ವರ ದೇವಾಲಯಗಳು ಜಗತ್ತಿನ ಗಮನ ಸೆಳೆದಿವೆ ಎಂದು ಹೇಳಿದರು. ವಿಶ್ವಕರ್ಮ ಸಮಾಜವು ದಾಖಲೆಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕೆಂದು ಮನವಿ ಮಾಡಿದರು.ವಿಶ್ವ ಕರ್ಮ ಸಂಘದ ಅಧ್ಯಕ್ಷ ಎಚ್.ವಿ. ಹರೀಶ್ ಮಾತನಾಡಿ, ಅಮರಶಿಲ್ಪಿ ಜಕಣಾಚಾರ್ಯರ ಅಧ್ಯಯನವನ್ನು ಶಾಲೆ, ಕಾಲೇಜು ಪಠ್ಯಕ್ರಮದಲ್ಲಿ ಸೇರಿಸಬೇಕು, ಅವರ ಭವ್ಯ ಮೂರ್ತಿ ನಿರ್ಮಿಸಿ ಪ್ರತಿಯೊಂದು ತಲೆಮಾರಿಗೂ ಅವರ ಹೆಸರನ್ನು ಅಮರಗೊಳಿಸಬೇಕು ಎಂದು ಹೇಳಿದರು.ಇದೇ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ತಾರಾನಾಥ್ ಇತರರು ಉಪಸ್ಥಿತರಿದ್ದರು.