ಸಾರಾಂಶ
ಬಸವಾಪಟ್ಟಣ ಗ್ರಾಮದ ಕೆಪಿಎಸ್ ಕಾಲೇಜಿನಲ್ಲಿ ಕಾನೂನು ಸೇವಾ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ ಅರಕಲಗೂಡು ಹಾಗೂ ವಕೀಲರ ಸಂಘ ಅರಕಲಗೂಡು ಇವರ ಸಂಯುಕ್ತ ಆಶ್ರಯದಲ್ಲಿ ಕೆಪಿಎಸ್ ಕಾಲೇಜಿನಲ್ಲಿ ಕಾನೂನು ಅರಿವು ಕಾರ್ಯಕ್ರಮ ನಡೆಯಿತು. ಹಿರಿಯ ವಕೀಲರಾದ ಅರಕಲಗೂಡು ತಾಲೂಕು ಕಾನೂನು ಸಲಹೆಗಾರರಾದ ಪ್ರಕಾಶ್ ಎಚ್.ಜೆ ಅವರು ಮಾತನಾಡಿ, ಪೋಕ್ಸೋ ಕಾಯಿದೆ ಕುರಿತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳ ಬಗ್ಗೆ ತಿಳಿಸಿದರು. ೨೦೧೨ರಲ್ಲಿ ಪೋಕ್ಸೋ ಜಾರಿಯಾಗಿದ್ದು, ಲೈಂಗಿಕ ದೌರ್ಜನ್ಯ ಒಳಗಾದ ಮಕ್ಕಳು ಹೇಗೆ ಎಲ್ಲಾ ಕಾನೂನು ನೆರವು ಪಡೆಯಬಹುದು. ಇಂತಹ ಪ್ರಕರಣದಲ್ಲಿ ಭಾಗಿಯಾಗಿರುವ ಮಕ್ಕಳಿಗೆ ಶಿಕ್ಷಣ ಪ್ರಮಾಣ ಇತ್ಯಾದಿಗಳ ಬಗ್ಗೆ ವಕೀಲ ಪ್ರಕಾಶ್ ಅವರು ವಿಸ್ತೃತವಾಗಿ ವಿದ್ಯಾರ್ಥಿಗಳಿಗೆ ತಿಳಿಸಿದರು.
ಕನ್ನಡಪ್ರಭ ವಾರ್ತೆ ಬಸವಾಪಟ್ಟಣ
ಗ್ರಾಮದ ಕೆಪಿಎಸ್ ಕಾಲೇಜಿನಲ್ಲಿ ಕಾನೂನು ಸೇವಾ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ ಅರಕಲಗೂಡು ಹಾಗೂ ವಕೀಲರ ಸಂಘ ಅರಕಲಗೂಡು ಇವರ ಸಂಯುಕ್ತ ಆಶ್ರಯದಲ್ಲಿ ಕೆಪಿಎಸ್ ಕಾಲೇಜಿನಲ್ಲಿ ಕಾನೂನು ಅರಿವು ಕಾರ್ಯಕ್ರಮ ನಡೆಯಿತು.ಹಿರಿಯ ವಕೀಲರಾದ ಅರಕಲಗೂಡು ತಾಲೂಕು ಕಾನೂನು ಸಲಹೆಗಾರರಾದ ಪ್ರಕಾಶ್ ಎಚ್.ಜೆ ಅವರು ಮಾತನಾಡಿ, ಪೋಕ್ಸೋ ಕಾಯಿದೆ ಕುರಿತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳ ಬಗ್ಗೆ ತಿಳಿಸಿದರು. ೨೦೧೨ರಲ್ಲಿ ಪೋಕ್ಸೋ ಜಾರಿಯಾಗಿದ್ದು, ಲೈಂಗಿಕ ದೌರ್ಜನ್ಯ ಒಳಗಾದ ಮಕ್ಕಳು ಹೇಗೆ ಎಲ್ಲಾ ಕಾನೂನು ನೆರವು ಪಡೆಯಬಹುದು. ಇಂತಹ ಪ್ರಕರಣದಲ್ಲಿ ಭಾಗಿಯಾಗಿರುವ ಮಕ್ಕಳಿಗೆ ಶಿಕ್ಷಣ ಪ್ರಮಾಣ ಇತ್ಯಾದಿಗಳ ಬಗ್ಗೆ ವಕೀಲ ಪ್ರಕಾಶ್ ಅವರು ವಿಸ್ತೃತವಾಗಿ ವಿದ್ಯಾರ್ಥಿಗಳಿಗೆ ತಿಳಿಸಿದರು.
ಇದೇ ವೇಳೆ ಬಾಲ್ಯವಿವಾಹದ ಬಗ್ಗೆ ವಕೀಲರಾದ ಅನ್ವರ್ ಅಹಮದ್ ಮತನಾಡಿ, ಬಾಲ್ಯವಿವಾಹ ಎಷ್ಟು ಮಾರಕವಾದದು ಇದಕ್ಕೆ ಪರಿಹಾರೋಪಾಯವೇನು. ಬಾಲ್ಯವಿವಾಹ ತಡೆಗಟ್ಟಲು ಅನುಸರಿಸಬೇಕಾದ ಕಾರ್ಯಗಳ ಬಗ್ಗೆ ತಿಳಿಸಿದರು.ಹಿರಿಯ ವಕೀಲರಾದ ಶಂಕರಯ್ಯರವರು ಸಾಮಾನ್ಯವಾಗಿ ನಾಗರೀಕರು ಪಾಲಿಸಬೇಕಾದ ಕಾನೂನುಗಳ ಬಗ್ಗೆ ತಿಳಿಸಿದರು. ಕೆಪಿಎಸ್ ಕಾಲೇಜು ಪ್ರಾಂಶುಪಾಲರಾದ ಹರೀಶ್ ರಾಮನಾಥಪುರ, ಪ್ರೌಢಶಾಲೆ ಶಿಕ್ಷರಾದ ಬಿ ಬಿ ರಾಜಣ್ಣ, ಬಸವಾಪಟ್ಟಣ ಗ್ರಾಪಂ ಮಾಜಿ ಅಧ್ಯಕ್ಷ ಮಹೇಂದ್ರ ಕುಮಾರ್, ಕಾಲೇಜು ಉನ್ಯಾಸಕ ವರ್ಗ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.