ಸಾರಾಂಶ
ಪೊಲೀಸರೆಂದರೆ ಭಯ ಬೇಡ. ಸಾರ್ವಜನಿಕರ ಸಹಕಾರಿಂದ ಕಾನೂನು ರಕ್ಷಣೆ ಮಾಡಲು ಸಾಧ್ಯ ಎಂದು ಹುನಗುಂದ ಸಿಪಿಐ ಸುನೀಲ ಸವದಿ ಹೇಳಿದರು.
ಕನ್ನಡಪ್ರಭ ವಾರ್ತೆ ಹುನಗುಂದ
ಪೊಲೀಸರೆಂದರೆ ಭಯ ಬೇಡ. ಸಾರ್ವಜನಿಕರ ಸಹಕಾರಿಂದ ಕಾನೂನು ರಕ್ಷಣೆ ಮಾಡಲು ಸಾಧ್ಯ. ಮಕ್ಕಳಲ್ಲಿ ಪೊಲೀಸರೆಂದರೆ ಸಾಮಾನ್ಯವಾಗಿ ಭಯವಿರುತ್ತದೆ, ಇಂಥ ಭಯ ಹೋಗಲಾಡಿಸಿ, ಮಕ್ಕಳ ಹಕ್ಕುಗಳಿಗೆ ಚ್ಯುತಿ ಬಂದಾಗ ಅಥವಾ ರಕ್ಷಣೆಯ ಅವಶ್ಯಕತೆ ಇದ್ದಾಗ ಪೊಲೀಸರ ಸಹಾಯ ಪಡೆಯಲು ಮಕ್ಕಳ ಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಲು ಇಲಾಖೆ ಸದಾ ಕಾಲ ಸನ್ನದ್ದವಾಗಿದೆ ಎಂದು ಹುನಗುಂದ ಸಿಪಿಐ ಸುನೀಲ ಸವದಿ ಹೇಳಿದರು.ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಕ್ಕಳಿಗಾಗಿ ತೆರೆದ ಮನೆ ಕಾರ್ಯಕ್ರಮದಲ್ಲಿ ಪೋಲಿಸ್ ಇಲಾಖೆಯ ಕರ್ತವ್ಯ, ಜವಾಬ್ದಾರಿ, ಕಾನೂನು ಮತ್ತಿತರ ವಿಷಯಗಳ ಕುರಿತು ಮಾತನಾಡಿದ ಅವರು, ಶಾಲಾ ಮಕ್ಕಳಲ್ಲಿ ಕಾನೂನು ಜಾಗೃತಿ, ಸಂಚಾರ ನಿಯಮಗಳ ಪಾಲನೆ, ಅವುಗಳ ಉಲ್ಲಂಘನೆಯಿಂದ ಎದುರಿಸಬೇಕಾದ ದಂಡ ಹಾಗೂ ಶಿಕ್ಷೆ ಬಗ್ಗೆ ಮಾಹಿತಿ, ಮಕ್ಕಳ ಮೇಲಿನ ದೌರ್ಜನ್ಯ, ಬಾಲಕಾರ್ಮಿಕ ಪದ್ಧತಿ, ಬಾಲ್ಯವಿವಾಹ, ಸರಗಳ್ಳತನ, ಸೈಬರ್ ಕ್ರೈಂ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಪೊಲೀಸರ ಕುರಿತು ಶಾಲಾ ಮಕ್ಕಳಲ್ಲಿ ಜಾಗೃತಿ ಮೂಡಿಸಿದರು. ಯಾವುದೇ ಅಪಾಯಕಾರಿ ಸಂದರ್ಭದಲ್ಲಿ ಪೊಲೀಸ್ ಸಹಾಯವಾಣಿಗೆ ಕರೆ ಮಾಡಬಹುದು ಎಂದು ಪೊಲೀಸರು ತಿಳಿಸಿದರು.