ಹಿರೇಕೆರೂರು: ಸಿಎಂ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಜನಸಾಮಾನ್ಯರಿಗೆ ಗ್ಯಾರಂಟಿ ಯೋಜನೆಗಳನ್ನು ನೀಡಿ ಜೀವನಕ್ಕೆ ಭದ್ರತೆ ನೀಡುವ ಜತೆಗೆ ಅಭಿವೃದ್ಧಿ ಕಾರ್ಯಗಳಿಗೂ ಮನ್ನಣೆ ನೀಡುತ್ತಿದೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.

ತಾಲೂಕಿನ ಅಬಲೂರು ಗ್ರಾಮದಲ್ಲಿ 2025-26ನೇ ಸಾಲಿನ ಮುಖ್ಯಮಂತ್ರಿಯವರ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಯಡಿ ರು. 2.5 ಕೋಟಿ ವೆಚ್ಚದಲ್ಲಿ ವಡೆಯನಪುರ ಸುತ್ತಕೋಟಿ ರಸ್ತೆ ಹಾಗೂ ಅಬಲೂರು ದೀವಿಗಿಹಳ್ಳಿ ರಸ್ತೆ ಆಯ್ದ ಭಾಗಗಳಲ್ಲಿ ರಸ್ತೆ ಅಭಿವೃದ್ಧಿಪಡಿಸುವ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.ಕಳೆದ ವರ್ಷ ಸಿಎಂ ಕ್ಷೇತ್ರದ ಅಭಿವೃದ್ಧಿಗೆ ರು. 50 ಕೋಟಿ ಅನುದಾನ ನೀಡಿದ್ದರು. ಅದರಲ್ಲಿ ರು. 25 ಕೋಟಿ ಲೋಕೋಪಯೋಗಿ ಇಲಾಖೆ, ರು. 12.5 ಕೋಟಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಹಾಗೂ 12.5 ಕೋಟಿ ಅನುದಾನದಲ್ಲಿ 103 ದೇವಸ್ಥಾನಗಳಿಗೆ ರು. 10 ಕೋಟಿ, ರು. 1.75 ಕೋಟಿ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಮತ್ತು ರು. 75 ಲಕ್ಷ ಮಾವಿನತೋಪ ಗ್ರಾಮದಲ್ಲಿ ಗೋದಾಮು ನಿರ್ಮಾಣಕ್ಕೆಅನುದಾನ ನೀಡಲಾಗಿದೆ ಎಂದರು.ಅಬಲೂರು- ದಿವಿಗೀಹಳ್ಳಿ ರಸ್ತೆ ಅಭಿವೃದ್ಧಿಪಡಿಸುವುದು ಬಹು ಅವಶ್ಯಕತೆ ಇತ್ತು, ಈ ರಸ್ತೆ ಅಭಿವೃದ್ಧಿಯಿಂದ ಭಾಗದ ಜನತೆಗೆ ಹಿರೇಕೆರೂರ ಮತ್ತು ಹಂಸಭಾವಿ ಹಾವೇರಿ ತೆರಳಲು ಇನ್ನು ಹೆಚ್ಚು ಅನಕೂಲವಾಗಲಿದೆ. ಗುತ್ತಿಗೆದಾರರು ನಿಗದಿತ ಕಾಲಮಿತಿಯಲ್ಲಿ ಗುಣಮಟ್ಟದ ಕಾಮಗಾರಿ ನಿರ್ವಹಿಸಿ ಸಾರ್ವಜನಿಕರಿಗೆ ಅನಕೂಲ ಕಲ್ಪಿಸಿಕೋಡಬೇಕು ಎಂದರು.ಈ ವರ್ಷದ ಶಾಸಕರ ಅನುದಾನದಲ್ಲಿ ಗ್ರಾಮದ ಬಿಲಸ್ತದೇವರ ದೇವಸ್ಥಾನ ಅಭಿವೃದ್ಧಿಗೆ ಅನುದಾನ ನೀಡುವ ಭರವಸೆ ನೀಡಿದರು. ಹಾವೇರಿ ಮತ್ತು ಕೋಡ ಗ್ರಾಮಕ್ಕೆ ತೆರಳಲು ಬಸ್ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಿ ಗ್ರಾಮಸ್ಥರಿಗೆ ಅನಕೂಲವಾಗುವಂತೆ ಬಸ್ ವ್ಯವಸ್ಥೆ ಮಾಡಲಾಗುವುದು. ಸರ್ವಜ್ಞ ಪ್ರಾಧಿಕಾರಕ್ಕೆರು.5 ಕೋಟಿ ಅನುದಾನ ನೀಡುವ ಭರವಸೆ ನೀಡಿದಂತೆ ಆ ಹಣ ಈಗ ಬಿಡುಗಡೆಯಾಗಿದೆ. ಅಬಲೂರು ಮತ್ತು ಮಸೂರು ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗೆ ತಲಾ 2.5 ಕೋಟಿ ಅನುದಾನ ಹಂಚಿಕೆ ಮಾಡಿ ಮಾ.17ರಂದು ಸರ್ಕಾರ ಆದೇಶ ಮಾಡಿದೆ. ಏನಾದರೂ ಪ್ರಸಾವನೆಗಳಲ್ಲಿ ಬದಲಾವಣೆ ಆಗಬೇಕಾದಲ್ಲಿ ಅಧಿಕಾರಿಗಳು ಗ್ರಾಮಸ್ಥರ ಸಭೆ ನಡೆಸಿ ಪ್ರಸ್ತಾವನೆ ಬದಲಾವಣೆ ಮಾಡುವ ಕಾರ್ಯ ಮಾಡಲಾಗುವುದು ಎಂದರು.ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಬುರಡೀಕಟ್ಟಿ, ಹಾವೇರಿ ಹಾಲು ಒಕ್ಕೂಟದ ಉಪಾಧ್ಯಕ್ಷ ಉಜ್ಜನಗೌಡ ಮಾವಿನತೋಪ, ಎಇಇ ಮಾಲತೇಶ ಕಲ್ಲಮ್ಮನವರ, ಗ್ರಾಪಂ ಕಾರ್ಯದರ್ಶಿ ಚನ್ನಬಸಪ್ಪ ಸಿಂಗ್ರೇರ, ಗುತ್ತೆಗೆದಾರ ಅಶೋಕ ಹೊಟ್ಟೇರ, ಮುಖಂಡರಾದ ಬಸವರಾಜ ಮಳವಳ್ಳಿ, ನಾಗೇಂದ್ರಪ್ಪ ಮುದಗೋಳ, ಸೋಮನಗೌಡ ಕಡೂರ, ಕೊಟ್ರೇಶಗೌಡ್ರ, ಕರಬಸಪ್ಪ ಕುರುವತ್ತೇರ, ಕರೇಗೌಡ ಕಡೂರ, ಉಜ್ಜನಗೌಡ ಮಳವಳ್ಳಿ, ಸುರೇಶ ಕುರುವತ್ತೇರ, ಪಾಲಾಕ್ಷಪ್ಪ ಗುಳಲಕಾಯಿ, ನಿಂಗಪ್ಪ ಪಾಟೀಲ, ರಾಜು ಪೂಜಾರ, ಪ್ರಕಾಶ ರಡ್ಡೇರ, ರುದ್ರೇಶ ಮುದಗೋಳ, ನಾಗರಾಜ ಭೋಗಾವಿ, ಚಂದ್ರು ಪೂಜಾರ, ವಿರೂಪಾಕ್ಷಪ್ಪ ಮಳವಳ್ಳಿ, ಈರಪ್ಪ ಗುಳಲಕಾಯಿ, ಹಾಲಪ್ಪಮಳವಳ್ಳಿ, ಮುರಡಪ್ಪ ಮಳವಳ್ಳಿ, ಬಸವರಾಜ ಮುದಗೋಳ, ಶಿವಾನಂದ ದೊಡ್ಮನಿ ಸೇರಿದಂತೆ ಗ್ರಾಮಸ್ಥರು ಇದ್ದರು.