ಸಾರಾಂಶ
ಆಯುಧಪೂಜೆಯ ಹಬ್ಬದ ಹಿನ್ನೆಲೆಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ನಗರದ ಮಹಾವೀರ ವೃತ್ತ ಹಾಗೂ ಸುತ್ತಮುತ್ತ ವ್ಯಾಪಾರ ಜೋರಾಗಿಯೇ ನಡೆದರೂ ಪ್ರಮುಖವಾಗಿ ಖರೀದಿ ಮಾಡುವ ಬೂದಕುಂಬಳ, ನಿಂಬೆಹಣ್ಣು, ಹೂವು ಸೇವಂತಿಗೆ, ಬಾಳೆದೆಲೆಗೆ ಭಾರಿ ಬೇಡಿಕೆ ಕಂಡು ಬಂದಿತು. ಸೇವಂತಿಗೆ ಮಾರಿಗೆ ೧೦೦ರಿಂದ ೧೫೦ ರು.ಗಳಿದ್ದರೆ, ನಿಂಬೆಹಣ್ಣು ಎರಡಕ್ಕೆ ೧೦ರಿಂದ ೨೦ ರು., ಮಾವಿನಕಟ್ಟು ಒಂದಕ್ಕೆ ೨೦ ರು.ಗಳಿತ್ತು. ಸೇಬು ಒಂದು ಕೆಜಿಗೆ ೧೦೦ರಿಂದ ೧೫೦ ರು.ಗಳಿತ್ತು. ಈ ಬಾರಿ ಬೂದಕುಂಬಳಕಾಯಿ ಕೆ.ಜಿಗೆ ೩೦, ೨೦ ಇದ್ದರೆ ಇನ್ನು ಕೆಲ ವ್ಯಾಪಾರಸ್ಥರು ೩೦ ರು.ಗಳಿಗೆ ಚಿಕ್ಕದಾದ ಬೂದಕುಂಬಳಕಾಯಿ ಮಾರಾಟ ಮಾಡುತ್ತಿದ್ದರು.
ಕನ್ನಡಪ್ರಭ ವಾರ್ತೆ ಹಾಸನ
ಆಯುಧಪೂಜೆಯ ಹಬ್ಬದ ಹಿನ್ನೆಲೆಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ನಗರದ ಮಹಾವೀರ ವೃತ್ತ ಹಾಗೂ ಸುತ್ತಮುತ್ತ ವ್ಯಾಪಾರ ಜೋರಾಗಿಯೇ ನಡೆದರೂ ಪ್ರಮುಖವಾಗಿ ಖರೀದಿ ಮಾಡುವ ಬೂದಕುಂಬಳ, ನಿಂಬೆಹಣ್ಣು, ಹೂವು ಸೇವಂತಿಗೆ, ಬಾಳೆದೆಲೆಗೆ ಭಾರಿ ಬೇಡಿಕೆ ಕಂಡು ಬಂದಿತು.ಸೇವಂತಿಗೆ ಮಾರಿಗೆ ೧೦೦ರಿಂದ ೧೫೦ ರು.ಗಳಿದ್ದರೆ, ನಿಂಬೆಹಣ್ಣು ಎರಡಕ್ಕೆ ೧೦ರಿಂದ ೨೦ ರು., ಮಾವಿನಕಟ್ಟು ಒಂದಕ್ಕೆ ೨೦ ರು.ಗಳಿತ್ತು. ಸೇಬು ಒಂದು ಕೆಜಿಗೆ ೧೦೦ರಿಂದ ೧೫೦ ರು.ಗಳಿತ್ತು. ಈ ಬಾರಿ ಬೂದಕುಂಬಳಕಾಯಿ ಕೆ.ಜಿಗೆ ೩೦, ೨೦ ಇದ್ದರೆ ಇನ್ನು ಕೆಲ ವ್ಯಾಪಾರಸ್ಥರು ೩೦ ರು.ಗಳಿಗೆ ಚಿಕ್ಕದಾದ ಬೂದಕುಂಬಳಕಾಯಿ ಮಾರಾಟ ಮಾಡುತ್ತಿದ್ದರು. ಕುಂಬಳಕಾಯಿಗಳು ಹೆಚ್ಚಾಗಿ ಮಾರುಕಟ್ಟೆಗೆ ಬಂದು ಈ ಬೆಲೆ ಕುಸಿತ ಕಂಡು ಬೆಳೆಗಾರರು ಆತಂಕದಲ್ಲಿದ್ದರು. ಇನ್ನು ಪುಟ್ಟಬಾಳೆ ಕೆ.ಜಿಗೆ ೧೦೦ ರಿಂದ ೧೫೦ ರು.ಗಳಿತ್ತು. ಬೆಲೆಗಳಲ್ಲಿ ಎಷ್ಟೇ ವ್ಯತ್ಯಾಸವಿದ್ದರೂ ಉಳಿದಂತೆ ಹಬ್ಬದ ವ್ಯಾಪಾರ ಜೋರಾಗಿಯೇ ನಡೆಯಿತು.