ಸಾರಾಂಶ
ತಾಲೂಕಿನ ತಗ್ಗಲೂರು ಗ್ರಾಮದ ನಾಗರಾಜು ತೋಟದಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗುಂಡ್ಲುಪೇಟೆ ಬಫರ್ ಜೋನ್ ವಲಯ ಸಿಬ್ಬಂದಿಗಳಿಂದ ಬೋನಿ ಇಡಲಾಗಿತ್ತು.
ಗುಂಡ್ಲುಪೇಟೆ:
ತಾಲೂಕಿನ ತಗ್ಗಲೂರು ಗ್ರಾಮದ ಬಳಿ ಚಿರತೆಯೊಂದು ಬೋನಿಗೆ ಬಿದ್ದಿದೆ.ತಾಲೂಕಿನ ತಗ್ಗಲೂರು ಗ್ರಾಮದ ನಾಗರಾಜು ತೋಟದಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗುಂಡ್ಲುಪೇಟೆ ಬಫರ್ ಜೋನ್ ವಲಯ ಸಿಬ್ಬಂದಿಗಳಿಂದ ಬೋನಿ ಇಡಲಾಗಿತ್ತು.ತಗ್ಗಲೂರು ಗ್ರಾಮದಲ್ಲಿ ಹತ್ತಾರು ರೈತರ ಜಾನುವಾರು, ಮೇಕೆ, ಕುರಿಗಳು ಬಲಿಯಾಗುತ್ತಿದ್ದ ಹಿನ್ನಲೆ ರೈತರ ದೂರಿನ ಮೇರೆಗೆ ಬಂಡೀಪುರ ಅರಣ್ಯ ಇಲಾಖೆಯ ಬಫರ್ ಜೋನ್ ವಲಯ ಸಿಬ್ಬಂದಿ ಬೋನು ಇಟ್ಟಿದ್ದರು.
ಶನಿವಾರ ರಾತ್ರಿ ಬೋನಿಗೆ ಸುಮಾರು 5 ವರ್ಷದ ಹೆಣ್ಣು ಚಿರತೆ ಬಂಧಿಯಾಗಿದೆ ಎಂದು ಗುಂಡ್ಲುಪೇಟೆ ಬಫರ್ ಜೋನ್ ವಲಯ ಅರಣ್ಯಾಧಿಕಾರಿ ಶಿವಕುಮಾರ್ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.ತಗ್ಗಲೂರು ಬಳಿ ಸೆರೆ ಸಿಕ್ಕ ಚಿರತೆಯನ್ನು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕೆಕ್ಕನಹಳ್ಳಿ ಬಳಿಯ ಗಡಿ ಭಾಗದ ಅರಣ್ಯದಲ್ಲಿ ಚಿರತೆಯನ್ನು ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕ್ಷೇತ್ರ ನಿರ್ದೇಶಕ ಎಸ್.ಪ್ರಭಾಕರನ್ ಸೂಚನೆ ಮೇರೆಗೆ ಬಿಡಲಾಗಿದೆ ಎಂದರು.23ಜಿಪಿಟಿ4
ಗುಂಡ್ಲುಪೇಟೆ ತಾಲೂಕಿನ ತಗ್ಗಲೂರು ಬಳಿಯ ನಾಗರಾಜು ತೋಟದಲ್ಲಿ ಬೋನಿಗೆ ಬಂಧಿಯಾದ ಚಿರತೆ.---------
;Resize=(128,128))
;Resize=(128,128))
;Resize=(128,128))