ಬೈಕ್‌ ಡಿಕ್ಕಿಯಾಗಿ ಚಿರತೆ ಸಾವು: ಸವಾರ ಗಂಭೀರ

| Published : Oct 24 2025, 01:00 AM IST

ಸಾರಾಂಶ

ಚಲಿಸುತ್ತಿದ್ದ ಬೈಕ್‌ಗೆ ಅಡ್ಡ ಬಂದ ಚಿರತೆಯೊಂದು ಸಾವನ್ನಪ್ಪಿ, ಸವಾರ ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ ಇಲ್ಲಿನ ನಾಲ್ಕೂರು ಗ್ರಾಮದ ನಂಚಾರು ಎಂಬಲ್ಲಿ ಬುಧವಾರ ರಾತ್ರಿ ನಡೆದಿದೆ. ನಂಚಾರು ನಿವಾಸಿ ಭಾಸ್ಕರ್ ಶೆಟ್ಟಿ ಗಂಭೀರ ಗಾಯಗೊಂಡ ಬೈಕ್ ಸವಾರ.

ಬ್ರಹ್ಮಾವರ: ಚಲಿಸುತ್ತಿದ್ದ ಬೈಕ್‌ಗೆ ಅಡ್ಡ ಬಂದ ಚಿರತೆಯೊಂದು ಸಾವನ್ನಪ್ಪಿ, ಸವಾರ ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ ಇಲ್ಲಿನ ನಾಲ್ಕೂರು ಗ್ರಾಮದ ನಂಚಾರು ಎಂಬಲ್ಲಿ ಬುಧವಾರ ರಾತ್ರಿ ನಡೆದಿದೆ.

ನಂಚಾರು ನಿವಾಸಿ ಭಾಸ್ಕರ್ ಶೆಟ್ಟಿ ಗಂಭೀರ ಗಾಯಗೊಂಡ ಬೈಕ್ ಸವಾರ.ಅವರು ರಾತ್ರಿ ತನ್ನ ಬೈಕ್‌ನಲ್ಲಿ ಮನೆಗೆ ಬರುತ್ತಿದ್ದಾಗ ಕಾಡಿನ ಅಂಚಿನಲ್ಲಿ ಒಮ್ಮೆಲೇ ಚಿರತೆಯೊಂದು ರಸ್ತೆ ನಡುವೆ ಬಂತು. ಇದರಿಂದ ಗಾಬರಿಗೊಂಡ ಭಾಸ್ಕರ ಅವರು ಬೈಕ್‌ ನಿಯಂತ್ರಣ ತಪ್ಪಿ ಚಿರತೆಗೆ ಡಿಕ್ಕಿಯಾಯಿತು. ಪರಿಣಾಮ ಬೈಕ್ ಪಲ್ಟಿಯಾಗಿ, ರಸ್ತೆಗೆ ಬಿದ್ದ ಅವರಿಗೆ ಗಂಭೀರ ಗಾಯಗಳ‍ಾದವು. ಬಲವಾದ ಡಿಕ್ಕಿಯಿಂದಾಗಿ ಚಿರತೆ ಕೂಡ ಗಂಭೀರವಾಗಿ ಗಾಯಗೊಂಡು ರಸ್ತೆಯಲ್ಲೇ ಪ್ರಾಣ ಬಿಟ್ಟಿತು. ತಕ್ಷಣ ಆ ದಾರಿಯಲ್ಲಿ ಬಂದ ಇತರ ಸವಾರರು ಗಾಯಗೊಂಡಿದ್ದ ಭಾಸ್ಕರ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯವರು ಆಗಮಿಸಿ ಮೃತಪಟ್ಟ ಚಿರತೆಯನ್ನು ಪರಿಶೀಲಿಸಿ ಅಲ್ಲಿಂದ ತೆರವು ಮಾಡಿದ್ದಾರೆ. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.