ಸಾರಾಂಶ
ಕಾಡುಹಂದಿಯ ಬೇಟೆಗಾಗಿ ದುಷ್ಕರ್ಮಿಗಳು ಉರುಳು ಹಾಕಿದ್ದಾರೆಂದು ತಿಳಿದುಬಂದಿದೆ. ಚಿರತೆ ಆಹಾರ ಅರಸಿ ಬಂದು ನುಸುಳಿದಾಗ ಈ ದುರ್ಘಟನೆ ಸಂಭವಿಸಿದೆ.
ಬೇಲೂರು: ತಂತಿ ಬೇಲಿಯ ನಡುವೆ ಹಾಕಲಾಗಿದ್ದ ಉರುಳಿಗೆ ಸಿಲುಕಿ ಚಿರತೆಯೊಂದು ಸಾವನ್ನಪ್ಪಿರುವ ಘಟನೆ ನಡೆದಿದೆ. ತಾಲೂಕಿನ ಹಳೆಬೀಡು ಹೋಬಳಿಯ ಚೀಲನಾಯಕನಹಳ್ಳಿ ಗ್ರಾಮದ ಮೋಹನ್ ರಾಜ್ ಅವರಿಗೆ ಸೇರಿದ ಫಾರಂ ಸರ್ವೇ ನಂಬರ್ 113 ರ ಜಾಗದ ತಂತಿ ಬೇಲಿಗೆ ಸಿಕ್ಕಿಹಾಕಿಕೊಂಡು ಚಿರತೆ ಮೃತಪಟ್ಟಿದೆ. '
ಕಾಡುಹಂದಿಯ ಬೇಟೆಗಾಗಿ ದುಷ್ಕರ್ಮಿಗಳು ಉರುಳು ಹಾಕಿದ್ದಾರೆಂದು ತಿಳಿದುಬಂದಿದೆ. ಚಿರತೆ ಆಹಾರ ಅರಸಿ ಬಂದು ನುಸುಳಿದಾಗ ಈ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇತ್ತೀಚಿಗೆ ಈ ಭಾಗದಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದ್ದು, ಜನರು ಪ್ರಾಣಭಯದಿಂದ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ, ಕೂಡಲೇ ಅವುಗಳನ್ನು ಹಿಡಿದು ಬೇರೆಡೆಗೆ ಸ್ಥಳಾಂತರಿಸುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಯವರನ್ನು ಒತ್ತಾಯಿಸಿದ್ದಾರೆ.