ಬೀರೂರು: ಪಟ್ಟಣದ ಎಪಿಎಂಸಿ ಪಕ್ಕದ ಪುಟ್ಟಸ್ವಾಮಿ ಎಂಬುವರಿಗೆ ಸೇರಿದ ಕನಕ ಶುದ್ಧ ಕುಡಿಯುವ ನೀರಿನ ಘಟಕದ ಆವರಣಕ್ಕೆ ರಾತ್ರಿ 1ಗಂಟೆ ಸುಮಾರಿಗೆ ಚಿರತೆ ಬಂದಿರುವುದು ಸಿಸಿ ಟಿ.ವಿ ಕ್ಯಾಮೆರಾದಲ್ಲಿ ದಾಖಲಾಗಿದೆ.

ಬೀರೂರು: ಪಟ್ಟಣದ ಎಪಿಎಂಸಿ ಪಕ್ಕದ ಪುಟ್ಟಸ್ವಾಮಿ ಎಂಬುವರಿಗೆ ಸೇರಿದ ಕನಕ ಶುದ್ಧ ಕುಡಿಯುವ ನೀರಿನ ಘಟಕದ ಆವರಣಕ್ಕೆ ರಾತ್ರಿ 1ಗಂಟೆ ಸುಮಾರಿಗೆ ಚಿರತೆ ಬಂದಿರುವುದು ಸಿಸಿ ಟಿ.ವಿ ಕ್ಯಾಮೆರಾದಲ್ಲಿ ದಾಖಲಾಗಿದೆ.

ಚಿರತೆ ಪುಟ್ಟಸ್ವಾಮಿ ಅವರ ಮನೆ ಗೇಟ್ ಒಳಗಿದ್ದ ನಾಯಿಯನ್ನು ಗಮನಿಸಿದೆ. ಚಿರತೆಯನ್ನು ನೋಡಿ ನಾಯಿ ಬೊಗಳತೊಡ ಗಿದ್ದು, ಮನೆಯವರು ಎಚ್ಚರಗೊಂಡು ಸಿಸಿ ಟಿ.ವಿ ಕ್ಯಾಮೆರಾದಲ್ಲಿ ವೀಕ್ಷಿಸಿದಾಗ ಚಿರತೆ ಕಾಣಿಸಿದೆ. ಈ ಹಿಂದೆ ಇದೇಆವರಣದಲ್ಲಿ ಒಂದು ನಾಯಿ, ಒಂದು ಕುರಿ, 5 ಕೋಳಿಗಳನ್ನು ಚಿರತೆ ಬೇಟೆಯಾಡಿದೆ. ಯಾರೋ ಕದ್ದಿರಬಹುದು ಎಂದು ಸುಮ್ಮನಾಗಿದ್ದೆವು. ಇತ್ತೀಚೆಗೆ ಸಮೀಪದ ನಿಖಿಲ್ ಕಾಂಕ್ರೀಟ್ ಪ್ರಾಡಕ್ಟ್, ಕಾಳಿ ಕಾಂಕ್ರೀಟ್ ಪ್ರಾಡಕ್ಟ್ ಸಮೀಪದಲ್ಲಿ ನಾಯಿಯನ್ನು ಚಿರತೆಯೇ ಹೊತ್ತೊಯ್ದಿದೆ. ಸಮೀಪದಲ್ಲಿ ಅಮೃತಮಹಲ್ ಕಾವಲು, ಜಮೀನು ಇದೆ. ಬ್ಯಾಗಡೆಹಳ್ಳಿ ಗ್ರಾಮದಲ್ಲೂ ಚಿರತೆ ಓಡಾಡಿದೆ ಎಂದು ಹೇಳಲಾಗುತ್ತಿದೆ. ಹಿಂದೆ ಈ ಭಾಗದಲ್ಲಿ ಒಂದು ಚಿರತೆ ಸೆರೆ ಹಿಡಿಯಲಾಗಿತ್ತು. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಈ ವಿಷಯವಾಗಿ ದೂರು ನೀಡಲಾಗಿದೆ ಎಂದು ಪುಟ್ಟಸ್ವಾಮಿ ಪತ್ರಿಕೆಗೆ ತಿಳಿಸಿದರು.

ಘಟನೆ ಪರಿಶೀಲನೆಗೆ ಸಿಬ್ಬಂದಿ ಕಳಿಸಿದ್ದು ಚಿರತೆ ಸೆರೆಗೆ ಬೋನು ಇರಿಸಲಾಗುವುದು ಎಂದು ಕಡೂರು ವಲಯ ಉಪ ಅರಣ್ಯಾಧಿಕಾರಿ ಎನ್. ಅರ್, ಹರೀಶ್ ತಿಳಿಸಿದರು10 ಬೀರೂರು 1ಬೀರೂರು ಪಟ್ಟಣದಲ್ಲಿ ಗುರುವಾರ ರಾತ್ರಿ ಚಿರತೆ ಬಂದಿರುವುದು ಸಿಸಿ ಟಿ.ವಿ ಕ್ಯಾಮೆರಾದಲ್ಲಿ ದಾಖಲಾಗಿರುವ ಚಿತ್ರ