ಮಾಲೀಕನ ಸದ್ದುಕೇಳಿ ಕಾಲ್ಕಿತ್ತ ಚಿರತೆ । ಸೆರೆಗೆ ಆಗ್ರಹ

---

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ತಾಲೂಕಿನ ಶಿವಪುರ ಎಂಬಲ್ಲಿ ಚಿರತೆಯೊಂದು ಮನೆಗೆ ನುಗ್ಗಿ ನಾಯಿಯನ್ನು ಬೇಟೆಯಾಡಲು ಯತ್ನಿಸಿ, ವಿಫಲವಾಗಿ ಹೊರಟ ಘಟನೆಯು ಶುಕ್ರವಾರ ರಾತ್ರಿ ನಡೆದಿದೆ.

ಶಿವಪುರದ ಲೋಕೇಶ್‌ ಎಂಬುವರ ತೋಟದ ಮನೆಯ ಕಾಂಪೌಂಡ್‌ ಒಳಗೆ ಸುಮಾರು 2.45ರ ವೇಳೆಗೆ ಚಿರತೆ ಬಂದಿದೆ. ಈ ವೇಳೆ ಚಿರತೆಯ ಸದ್ದು ಕೇಳಿ ಲೋಕೇಶ್‌ ಅವರು ನಾಯಿಯನ್ನು ರಕ್ಷಿಸಲು ಸದ್ದು ಮಾಡಿದ್ದಾರೆ. ಈ ವೇಳೆ ಚಿರತೆಯು ಕಾಲ್ಕಿತ್ತಿದೆ. ನಾಯಿಯನ್ನು ಬೇಟೆಯಾಡದೆ ಹಾಗೆಯೇ ಬಿಟ್ಟು ಕಾಲ್ಕಿತ್ತಿದೆ.


ಈ ಎಲ್ಲ ಸನ್ನಿವೇಶವು ಸಿಸಿಟೀವಿಯಲ್ಲಿ ಸೆರೆಯಾಗಿದೆ.

ಸೆರೆಗೆ ಆಗ್ರಹ:

ಇತ್ತೀಚಿನ ದಿನಗಳಲ್ಲಿ ಚಿರತೆ ದಾಳಿಯು ಹೆಚ್ಚುತ್ತಿದ್ದು, ಕೂಡಲೇ ಅರಣ್ಯ ಇಲಾಖೆಯು ಚಿರತೆಯನ್ನು ಸೆರೆಹಿಡಿಯಬೇಕು ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಶಿವಪುರ ಮಹದೇವಪ್ಪ ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ.

---

೪ಜಿಪಿಟಿ೪

ಗುಂಡ್ಲುಪೇಟೆ ತಾಲೂಕಿನ ಶಿವಪುರ ಬಳಿಯ ಲೋಕೇಶ್‌ ತೋಟದ ಮನೆಯಲ್ಲಿ ಚಿರತೆ ಬಂದ ದೃಶ್ಯ.

೪ಜಿಪಿಟಿ೫ಗುಂಡ್ಲುಪೇಟೆ ತಾಲೂಕಿನ ಶಿವಪುರದ ಬಳಿಯ ಲೋಕೇಶ್‌ ಸೇರಿದ ನಾಯಿ ಹಿಡಿದ ಚಿರತೆ.