ಸಾರಾಂಶ
ಕಡೂರು ತಾಲೂಕಿನ ಬಳ್ಳೇಕೆರೆ ಸಮೀಪದ ಆಲಘಟ್ಟ ಬಳಿ ಕಳೆದ ಮೂರ್ನಾಲ್ಕು ದಿನಗಳಿಂದ ಚಿರತೆಯೊಂದು ಓಡಾಡುತ್ತಿದ್ದು, ಸುತ್ತಮುತ್ತಲ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಕಡೂರು: ತಾಲೂಕಿನ ಬಳ್ಳೇಕೆರೆ ಸಮೀಪದ ಆಲಘಟ್ಟ ಬಳಿ ಕಳೆದ ಮೂರ್ನಾಲ್ಕು ದಿನಗಳಿಂದ ಚಿರತೆಯೊಂದು ಓಡಾಡುತ್ತಿದ್ದು, ಸುತ್ತಮುತ್ತಲ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಆಲಘಟ್ಟ ಗ್ರಾಮದ ಸಮೀಪವಿರುವ ಅರಣ್ಯ ಇಲಾಖೆಯ ನರ್ಸರಿ ಬಳಿ ಈ ಚಿರತೆಯೊಂದು ಬೀಡುಬಿಟ್ಟಿದ್ದು, ನರ್ಸರಿ ಸಮೀಪವಿರುವ ಮಲ್ಲೇಶಪ್ಪ ಎಂಬುವವರ ಜಮೀನಿನ ಬಳಿ ಚಿರತೆ ಮಲಗಿರುವುದನ್ನು ಕಂಡ ಕೆಲವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.ಅರಣ್ಯ ಇಲಾಖಾ ಸಿಬ್ಬಂದಿಗೆ ಈ ಪ್ರದೇಶದಲ್ಲಿ ನಿರಂತರವಾಗಿ ಗಸ್ತು ತಿರುಗಲು ನಿಯೋಜಿಸಲಾಗಿದೆ. ಗ್ರಾಮ ಪಂಚಾಯಿತಿ ಪಿಡಿಓ ಅವರಿಗೆ ಈ ಕುರಿತು ಸಾರ್ವಜನಿಕರು ಹೊಲ ಗದ್ದೆಗಳಿಗೆ ಹೋಗುವಾಗ ಜಾಗರೂಕರಾಗಿರಬೇಕು ಎಂದು ಪ್ರಕಟಿಸಲು ಸ್ಥಳಿಯರು ಕೋರಿದ್ದಾರೆ. ಚಿರತೆ ಹಿಡಿಯಲು ಬೋನಿನ ವ್ಯವಸ್ಥೆ ಮಾಡಲಾಗುವುದು ಎಂದು ವಲಯ ಅರಣ್ಯಾಧಿಕಾರಿ ರಜಾಕ್ ಸಾಬ್ ನಧಾಫ್ ತಿಳಿಸಿದ್ದಾರೆ.5ಕೆಕೆಡಿಯು2.ನರ್ಸರಿ ಸಮೀಪದಲ್ಲಿ ಇರುವ ಚಿರತೆ.