ಕನಕಪುರದಲ್ಲಿ ಬೋನಿಗೆ ಬಿದ್ದ ಚಿರತೆ

| Published : Nov 12 2025, 01:30 AM IST

ಸಾರಾಂಶ

ಅರಣ್ಯ ಇಲಾಖೆ ಅಧಿಕಾರಿಗಳು ಸುದ್ದಿ ತಿಳಿದ ತಕ್ಷಣ ವೆಂಕಟರಾಯನದೊಡ್ಡಿ ರಸ್ತೆಯ ದೊಡ್ಡ ತಾಂಡ್ಯದ ಬಳಿಯಿರುವ ಗೋ ಶಾಲೆಯಲ್ಲಿ ಬೋನ್ ಇಟ್ಟಿದ್ದರು ಎಂದು ತಿಳಿದು ಬಂದಿದೆ.

ಕನಕಪುರ: ಕಳೆದ ಮೂರು ದಿನಗಳಿಂದ ನಗರದ ಸಾರ್ವಜನಿಕ ನಿದ್ದೆಗೆಡಿಸಿದ್ದ ಚಿರತೆಮರಿ (03) ಯನ್ನು ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಕನಕಪುರ ನಗರದ ಬೈ ಪಾಸ್ ಹಾದು ಹೋಗುವ ಮಹಾರಾಜ ಕಟ್ಟೆ ರಸ್ತೆ ಹಾಗೂ ಸುತ್ತ- ಮುತ್ತಲಿನ ಪ್ರದೇಶದಲ್ಲಿ ರಾತ್ರಿ ವೇಳೆ ಚಿರತೆಯೊಂದು ಸಂಚಾರ ಮಾಡುತ್ತಿರುವುದು ಸಿಸಿಟಿವಿ ದೃಶ್ಯಗಳಿಂದ ಕಂಡು ನಗರದ ಸಾರ್ವಜನಿಕರು ಭಯಭೀತರಾಗಿದ್ದರು.

ಅರಣ್ಯ ಇಲಾಖೆ ಅಧಿಕಾರಿಗಳು ಸುದ್ದಿ ತಿಳಿದ ತಕ್ಷಣ ವೆಂಕಟರಾಯನದೊಡ್ಡಿ ರಸ್ತೆಯ ದೊಡ್ಡ ತಾಂಡ್ಯದ ಬಳಿಯಿರುವ ಗೋ ಶಾಲೆಯಲ್ಲಿ ಬೋನ್ ಇಟ್ಟಿದ್ದರು ಎಂದು ತಿಳಿದು ಬಂದಿದೆ. ಮಂಗಳವಾರ ಬೆಳಗಿನ ಜಾವದ ವೇಳೆ ಆಹಾರ ಅರಸಿ ಬಂದ ಚಿರತೆ ಬೋನಿಗೆ ಬಿದ್ದಿದೆ.

ಈ ಕಾರ್ಯಾಚರಣೆಯಲ್ಲಿ ಡಿಆರ್‌ಎಫ್‌ಒ ಶಿವಕುಮಾರ್, ಗಾರ್ಡ್‌ ಅಣ್ಣಯಪ್ಪ, ವಾಚರ್ ದಾಸೇಗೌಡ, ರಾಹುಲ್ ಸೇರಿದಂತೆ ಸಿಬ್ಬಂದಿ ಪಾಲ್ಗೊಂಡಿದ್ದರು.

ಕೆ ಕೆ ಪಿ ಸುದ್ದಿ 03: