ಸಾರಾಂಶ
ಶಿಗ್ಗಾಂವಿ: ಮನುಷ್ಯ ಉತ್ತಮ ಪ್ರಜೆಯಾದರೆ ಸಾಲದು. ಉತ್ತಮ ನಾಗರಿಕನಾಗಬೇಕು ಎಂದು ಹುಬ್ಬಳ್ಳಿ ಮೂರುಸಾವಿರಮಠದ ಗುರುಸಿದ್ದರಾಜಯೋಗೀಂದ್ರ ಸ್ವಾಮಿಗಳು ತಿಳಿಸಿದರು.ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ಉದಯಕುಮಾರ ದ್ಯಾಮನಕೊಪ್ಪ ಅವರ ಜನ್ಮದಿನದ ಪ್ರಯುಕ್ತ ಏರ್ಪಡಿಸಿದ್ದ ೨೫ ಜೋಡಿ ದಂಪತಿಗಳಿಗೆ ಆದರ್ಶ ಶರಣ ದಂಪತಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಜೀವನದಲ್ಲಿ ಒಳ್ಳೆಯ ಸಂಸ್ಕಾರ ಪಡೆದು ಬಾಳಿದಾಗ ಸಮಾಜಕ್ಕೆ ಆದರ್ಶವಾಗುತ್ತದೆ. ಅಂತಹ ಆದರ್ಶ ವ್ಯಕ್ತಿತ್ವ ರೂಪಿಸಿಕೊಳ್ಳುವ ಹೊಣೆಗಾರಿಕೆ ಮತ್ತು ಜವಾಬ್ದಾರಿ ಪ್ರತಿಯೊಬ್ಬರದಾಗಬೇಕು ಎಂದರು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ಮಾಜಿ ಸಂಸದ ಮಂಜುನಾಥ ಕುನ್ನೂರ ಅವರು, ಇದೊಂದು ವಿನೂತನ ಕಾರ್ಯಕ್ರಮ. ಮಾನವೀಯ ಸಂಬಂಧಗಳ ಕೊಂಡಿ ಕಳಚುತ್ತಿರುವ ಇವತ್ತಿನ ದಿನಗಳಲ್ಲಿ ಇಂಥ ಕಾರ್ಯಕ್ರಮಗಳು ಮನುಷ್ಯ ಸಂಬಂಧಗಳನ್ನು ಬೆಸೆಯುತ್ತವೆ ಎಂದರು.ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಅಶೋಕ ಶಾಸ್ತ್ರಿ ಮಾತನಾಡಿ, ಆಶೀರ್ವಾದ ಮತ್ತು ಆಶ್ರಯ ಸಿಗುವುದು ದುರ್ಲಭದ ಸಂಗತಿ. ಅದೃಷ್ಟವಶಾತ್ ಅವೆರಡು ದೊರೆತಾಗ ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.ಶಾಂತವ್ವ ಗೂಳಪ್ಪ ದ್ಯಾಮನಕೊಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಡಾ. ನಾಗರಾಜ ದ್ಯಾಮನಕೊಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ರೇಣುಕಾ ಕೊರಡೂರ, ಎಸ್.ಎಸ್. ನಿಶ್ಶಿಮಗೌಡರ, ಪ್ರಕಾಶ ಬಾರಕೇರ, ಸಾವಿತ್ರಿ ದ್ಯಾಮನಕೊಪ್ಪ ಡಾ. ಲತಾ ನಿಡಗುಂದಿ ಹಾಗೂ ಪ್ರತಿಭಾ ಗಾಂಜಿ ಮುಂತಾದವರು ಪಾಲ್ಗೊಂಡಿದ್ದರು. ಕಾಂಚನಾ ದ್ಯಾಮನಕೊಪ್ಪ ಸ್ವಾಗತಿಸಿದರು. ಅರ್ಪಿತಾ ಮರಗಿ ವಂದಿಸಿದರು. ಪ್ರೊ. ಶಿವಪ್ರಕಾಶ ಬಳಿಗಾರ ನಿರೂಪಿಸಿದರು.ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸಿ
ಶಿಗ್ಗಾಂವಿ: ನಿಜವಾದ ಸಾಧಕರನ್ನು ಗುರುತಿಸಿ, ಸನ್ಮಾನ ಮಾಡಿ ಪ್ರೋತ್ಸಾಹಿಸುವುದೆ ನಮ್ಮ ಸಂಸ್ಥೆಯ ಉದ್ದೇಶವಾಗಿದೆ ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ಕಲಾ ಸಂಸ್ಥೆಯ ಗೌರವಾಧ್ಯಕ್ಷ ಕೊಟ್ರೇಶ್ ಮಾಸ್ತರ ಬೆಳಗಲಿ ಹೇಳಿದರು.ನಗರದ ಖ್ಯಾತ ಜ್ಯೋತಿಷಿ ಹಾಗೂ ಕಲಾವಿದ ಎಸ್.ಬಿ. ಅಯ್ಯಣ್ಣವರ ಅವರ ಗೃಹ ಕಚೇರಿಯಲ್ಲಿ ಗಾನಯೋಗಿ ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಕಲಾ ಸಂಸ್ಥೆ ವತಿಯಿಂದ ಏರ್ಪಡಿಸಿದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶರೀಫ ಮಾಕಪ್ಪನವರ ಅವರಿಗೆ ಜನಪದ ಸಿರಿ ಪ್ರಶಸ್ತಿ ಸಿಕ್ಕಿದ್ದು, ಅದು ಅವರ ಶ್ರಮಕ್ಕೆ ಸಿಕ್ಕ ಪ್ರತಿಫಲ ಎಂದರು.ಕಲಾ ಸಂಸ್ಥೆಯ ಅಧ್ಯಕ್ಷ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಫಕ್ಕೀರೇಶ ಕೊಂಡಾಯಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಲಾ ಸಂಸ್ಥೆ ನಿರ್ದೇಶಕ, ಗ್ರಾಪಂ ಮಾಜಿ ಉಪಾಧ್ಯಕ್ಷ ರಮೇಶ್ ಸಾತಣ್ಣವರ ಮಾತನಾಡಿ, ನಮ್ಮ ಕಲಾ ಸಂಸ್ಥೆಯು ಪ್ರಾರಂಭವಾಗಿ ಸುಮಾರು ಹದಿನೈದು ವರ್ಷ ಕಳೆದಿದ್ದು, ಒಂದು ಸಾವಿರಕ್ಕೂ ಹೆಚ್ಚು ಕಲಾವಿದರನ್ನು ಸಾಧಕರನ್ನು ಗುರುತಿಸಿ ಸನ್ಮಾನ ಮಾಡಲಾಗಿದೆ ಎಂದರು.ಶರೀಫ ಮಾಕಪ್ಪನವರ, ಸಿ.ಡಿ. ಯತ್ನಳ್ಳಿ, ಆರ್.ಸಿ. ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಶಶಿಕಾಂತ ರಾಠೋಡ್, ಕೇದಾರೆಪ್ಪ ಭಗಾಡೆ, ಪಿ.ವಿ. ತೆಂಬದಮನಿ, ನಿಂಗಣ್ಣ ಎಲಿಗಾರ್ ಹಾಗೂ ಕಲಾ ಸಂಸ್ಥೆಯ ನಿರ್ದೇಶಕರಾದ ಶಂಕರ ಅರ್ಕಸಾಲಿ, ಶಿವಾನಂದ ಹೊಸಮನಿ, ಚಿನ್ನಪ್ಪ ಕುಂದಗೋಳ, ಶೇಕಪ್ಪ ಜೋಳದ, ಮಲ್ಲಿಕಾರ್ಜುನ ಗೊಬ್ಬರಗುಂಪಿ, ಎಸ್.ಬಿ. ಅಯ್ಯಣ್ಣವರ, ಬಿ.ಎಚ್. ಚಲವಾದಿ, ಎಸ್.ಕೆ. ಹೂಗಾರ್, ಕಲಾವಿದರಾದ ಚನ್ನಬಸಪ್ಪ ಬೆಂಡಿಗೇರಿ ಆರಾಧ್ಯಮಠ, ನಿಂಗಣ್ಣ ಕುರವತ್ತಿ, ನಿಂಗಪ್ಪ ಕುರುಬರ ಇದ್ದರು.