ಸಾರಾಂಶ
ಕನ್ನಡಪ್ರಭ ವಾರ್ತೆ ಹಲಗೂರು
ಸರ್ಕಾರಿ ಶಾಲೆಗಳನ್ನು ಉಳಿಸಲು ಹಿರಿಯ ವಿದ್ಯಾರ್ಥಿಗಳು ಸಹಕಾರ ನೀಡಬೇಕು ಎಂದು ಸರ್ಕಾರಿ ಪ್ರೌಢಶಾಲೆ ಸರ್ ಎಂ. ವಿಶ್ವೇಶ್ವರಯ್ಯ ಹಳೆಯ ವಿದ್ಯಾರ್ಥಿಗಳ ಸಂಘದ ಉಪಾಧ್ಯಕ್ಷ ಬೀರೇಶ್ ಕರೆ ನೀಡಿದರು.ಮಾರಗೌಡನಹಳ್ಳಿಯಲ್ಲಿ ಹಳೆ ವಿದ್ಯಾರ್ಥಿ ಬೀರೇಶ್ ಸಂಘದಿಂದ ಕ್ಯಾಲೆಂಡರ್‌ಗಳನ್ನು ಶಾಲೆ ಎಸ್ಡಿಎಂಸಿ ಸದಸ್ಯರು, ಶಾಲೆ ಶಿಕ್ಷಕ ವೃಂದಕ್ಕೆ ಹಾಗೂ ಪೋಷಕರಿಗೆ ವಿತರಿಸಿ ಮಾತನಾಡಿ, ತಾವು ವ್ಯಾಸಂಗ ಮಾಡಿದ ಪ್ರತಿಯೊಬ್ಬ ವಿದ್ಯಾರ್ಥಿಗಳು ನಮಗೆ ಉನ್ನತ ಶಿಕ್ಷಣ ನೀಡಿ ನಮ್ಮನ್ನು ಸಮಾಜದಲ್ಲಿ ಒಂದು ಸತ್ಪ್ರಜೆಯಾಗಿ ಮಾಡಿದ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಾವೆಲ್ಲ ಮುಂದಾಗಬೇಕು ಎಂದರು.
ಶಾಲೆಯನ್ನು ಅಭಿವೃದ್ಧಿಪಡಿಸಲು ಹಳೆಯ ವಿದ್ಯಾರ್ಥಿಗಳ ಸೇರಿ ಸಂಘ ಸ್ಥಾಪಿಸಿಕೊಂಡಿದ್ದೇವೆ. ಪ್ರತಿಯೊಬ್ಬ ವಿದ್ಯಾರ್ಥಿಗಳು ನೀವು ವ್ಯಾಸಂಗ ಮಾಡಿದ ಶಾಲೆ ಋಣ ತೀರಿಸೋ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದರು.ಈ ವೇಳೆ ಸರ್ ಎಂ.ವಿ.ವಿಶ್ವೇಶ್ವರಯ್ಯ ವಿದ್ಯಾರ್ಥಿ ಬಳಗ, ಸರ್ಕಾರಿ ಪ್ರೌಢಶಾಲೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ಶಿಕ್ಷಕರಾದ ಕೆ.ಎಂ.ಬಸವರಾಜು, ಕೃಷ್ಣಸ್ವಾಮಿ ಹಾಗೂ ಹಿರಿಯ ವಿದ್ಯಾರ್ಥಿ ಸಂಘಟನೆ ಬೀರೇಶ್, ಮಾದೇಶ್, ಧರ್ಮೇಶ್, ಜಗದೀಶ್, ಸಂತೋಷ್, ಪ್ರದೀಪ್, ಪುಟ್ಟಸ್ವಾಮಿ, ಆನಂದ , ಅಭಿಷೇಕ್ . ಸೇರಿದಂತೆ ಇತರರು ಇದ್ದರು.
ಜ.೧೭ರಿಂದ ಮೈಸೂರಿನಲ್ಲಿ ವೀರಶೈವ ಲಿಂಗಾಯತ ಬ್ಯುಸಿನೆಸ್ ಕಾನ್ಕ್ಲೇವ್ಕನ್ನಡಪ್ರಭ ವಾರ್ತೆ ಮಂಡ್ಯ
ಅಂತಾರಾಷ್ಟ್ರೀಯ ಲಿಂಗಾಯತ ಯೂತ್ ಫೋರಂ ವತಿಯಿಂದ ಮೈಸೂರಿನಲ್ಲಿ ಜ.೧೭ರಿಂದ ಮೂರು ದಿನಗಳ ಕಾಲ ವೀರಶೈವ ಲಿಂಗಾಯತ ಗ್ಲೋಬಲ್ ಬ್ಯುಸಿನೆಸ್ ಕಾನ್‌ಕ್ಲೇವ್ ಏರ್ಪಡಿಸಲಾಗಿದೆ ಎಂದು ಮೈಸೂರು ಚಾಪ್ಟರ್ ಅಧ್ಯಕ್ಷ ಕೆ.ಎಸ್.ಮಹದೇವ ಪ್ರಸಾದ್ ಹೇಳಿದರು.ಈ ಸಮಾವೇಶವು ಎಲ್ಲಾ ವೀರಶೈವ ಲಿಂಗಾಯತ ಸಮುದಾಯದ ಉದ್ಯಮಿಗಳನ್ನು, ವೃತ್ತಿಪರರನ್ನು ಒಂದೇ ವೇದಿಕೆಗೆ ತರುವ ಮತ್ತು ಆರ್ಥಿಕ, ಕೈಗಾರಿಕೆ, ವ್ಯಾಪಾರ ಚಟುವಟಿಕೆಗಳನ್ನು ಉತ್ತಮಗೊಳಿಸುವ ಉದ್ದೇಶವನ್ನು ಹೊಂದಿದೆ. ಮೂರು ದಿನಗಳ ಕಾಲ ಮೈಸೂರಿನ ಮಹಾರಾಜ ಗ್ರೌಂಡ್ಸ್‌ನಲ್ಲಿ ಕಾನ್‌ಕ್ಲೇವ್ ನಡೆಯಲಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜ.೧೭ರಂದು ಸುತ್ತೂರು ಮಠದ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಉದ್ಘಾಟನೆ ನೆರವೇರಿಸಲಿದ್ದು, ಜ.೧೯ರಂದು ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ. ದೇಶದ ವಿವಿಧ ಭಾಗಗಳಿಂದ ಬರುವ ಹಲವಾರು ಜನರನ್ನು, ವೃತ್ತಿಪರರನ್ನು ಹಾಗೂ ಉದ್ಯಮಿಗಳನ್ನು ಭೇಟಿ ಮಾಡಲು ಸಹಾಯವಾಗುವ ಕಾರ್ಯಕ್ರಮ ಇದಾಗಿದೆ ಎಂದರು.ಕಾನ್ ಕ್ಲೇವ್‌ನಲ್ಲಿ ಮೂರು ದಿನವೂ ಖ್ಯಾತ ಗಾಯಕರಾದ ರಾಜೇಶ್ ಕೃಷ್ಣನ್, ಅರ್ಚನಾ ಉಡುಪ, ಅನನ್ಯ ಭಟ್, ವಾಸುಕಿ ವೈಭವ್ ಸಂಗೀತ ಸಂಜೆ ನಡೆಯಲಿದೆ. ಆಹಾರ ಮೇಳ, ಚರ್ಚಾ ಕಾರ್ಯಕ್ರಮಗಳು, ಇತರೆ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಮೈಸೂರಿನತ್ತ ಹೂಡಿಕೆದಾರರನ್ನು ಆಕರ್ಷಿಸುವುದು, ವ್ಯಾಪಾರ-ವಹಿವಾಟು ಹೆಚ್ಚಾಗುವಂತೆ ಮಾಡುಉವುದು ಹಾಗೂ ನಗರದ ಒಟ್ಟಾರೆ ಉನ್ನತೀಕರಣ ಈ ಸಮಾವೇಶದ ಮುಖ್ಯ ಉದ್ದೇಶವಾಗಿದೆ. ಈ ಸಮಾವೇಶವು ಮುಖ್ಯವಾಗಿ ಮಹಿಳಾ ಉದ್ಯಮಶೀಲತೆ, ಮೈಕ್ರೋ ಎಂಟರ್‌ಪ್ರೈಸಸ್ ಮತ್ತು ಮೈಸೂರಿನ ಸಾಂಸ್ಕೃತಿಕತೆಯ ಮೇಲೆ ಕೇಂದ್ರೀಕೃತವಾಗಿರುತ್ತದೆ ಎಂದು ನುಡಿದರು.ಸ್ಟಾರ್ಟ್ ಅಪ್‌ಗಳ ಬಲಪಡಿಸುವಿಕೆ, ಜಿಲ್ಲಾಮಟ್ಟದಲ್ಲಿ ಮಹಿಳಾ ಹಾಗೂ ಯುವ ಉದ್ಯಮಶೀಲತೆ, ಹೆಚ್ಚಿಸುವ ನಿಟ್ಟಿನಲ್ಲಿ ಮಾರ್ಗದರ್ಶನ ನೀಡುವುದು. ವಿವಿಧ ಉತ್ಪನ್ನಗಳು ಹಾಗೂ ಸೇವೆಗಳನ್ನು ಮಳಿಗೆಗಳಲ್ಲಿ ಪ್ರದರ್ಶಿಸುವ ಮೂಲಕ ಹಾಗೂ ವಿವಿಧ ಕಾರ್ಯಕ್ರಮಗಳ ಮೂಲಕ ಮೈಸೂರಿನ ಸಾಮರ್ಥ್ಯವನ್ನು ಪ್ರದರ್ಶಿಸುವುದು. ಅನುಭವಿ ಉದ್ಯಮಿಗಳು, ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ಉದ್ಯಮಿಗಳು, ಅಧಿಕಾರಿಗಳು ಮತ್ತಿತರರನ್ನು ಒಳಗೊಂಡ ಉಪಯುಕ್ತ ಚರ್ಚೆಗಳನ್ನು ನಡೆಸಲಾಗುವುದು ಎಂದರು.
ಗೋಷ್ಠಿಯಲ್ಲಿ ಬಿ.ಎಸ್.ಪ್ರಶಾಂತ್, ಆನಂದ್, ಸ್ವಾಮಿ, ಮೋಹನ್, ಎಚ್.ಎಸ್.ವೀರೇಶ್ ಇದ್ದರು.