ಕೊಪ್ಪಳ: ಆರ್ಯವೈಶ್ಯರ ಮೂಲ ಉದ್ಯೋಗವಾದ ವ್ಯಾಪಾರಕ್ಕೆ ಯುವಜನತೆ ಮರಳಿ ಬರಬೇಕು ಎಂದು ಕರ್ನಾಟಕ ಆರ್ಯವೈಶ್ಯ ಮಹಾಸಭೆ ಅಧ್ಯಕ್ಷ ಆರ್.ಪಿ. ರವಿಶಂಕರ ಅವರು ಹೇಳಿದರು.
ನಗರದ ವಾಸವಿ ಮಂಗಲ ಭವನದಲ್ಲಿ ಸೋಮವಾರ ನಡೆದ ಜಿಲ್ಲಾ ಆರ್ಯವೈಶ್ಯ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಆರ್ಯವೈಶ್ಯರ ಮೂಲಕ ಉದ್ಯೋಗ ವ್ಯಾಪಾರ ವಹಿವಾಟು ಆಗಿದೆ. ನಮ್ಮ ಸಮುದಾಯ ವ್ಯಾಪಾರದಲ್ಲಿ ಬದುಕು ಕಟ್ಟಿಕೊಂಡಿದೆ. ಹೀಗಾಗಿ ನಮ್ಮ ಯುವಜನರು ಮತ್ತೆ ನಮ್ಮ ಮೂಲವೃತ್ತಿಗೆ ಬರಬೇಕು ಎಂದರು. ಅಲ್ಲದೆ, ಮುಂಬರುವ ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದ ಆರ್ಯವೈಶ್ಯ ಸಮಾವೇಶವನ್ನು ಬೆಂಗಳೂರಿನಲ್ಲಿ ಆಯೋಜಿಸುವ ಕುರಿತು ಇದೇ ಸಂದರ್ಭದಲ್ಲಿ ಹೇಳಿದರು.ವಾಸವಿ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸಲು ಮತ್ತು ಆರ್ಯವೈಶ್ಯ ಜಾತಿಯನ್ನು ಒಬಿಸಿಗೆ ಸೇರಿಸಲು ಸರ್ಕಾರಕ್ಕೆ ಒತ್ತಾಯ ತರುವ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲಾ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಗುಪ್ತಾ ಹಾಗೂ ಕೊಪ್ಪಳ ಅವೋಪಾ ಘಟಕದ ಅಧ್ಯಕ್ಷ ರಾಘವೇಂದ್ರ ಪಾನಘಂಟಿ ಅವರು ರಾಜ್ಯಾಧ್ಯಕ್ಷರಿಗೆ ಇದೇ ಸಂದರ್ಭದಲ್ಲಿ ಮನವಿ ಸಲ್ಲಿಸಿದರು. ಆರ್ಯವೈಶ್ಯ ಮಹಾಸಭೆಯ ಯೋಜನೆಗಳ ಕುರಿತು ನಿರ್ದೇಶಕ ನಾರಾಯಣ ಕುರುಗೋಡು, ಸಂತೋಷ ಕೆಲೋಜಿ, ರಾಘವೇಂದ್ರ ಬೆಲ್ಲಂಕೊಂಡಿ ಮಾತನಾಡಿದರು. ಅಂತಾರಾಷ್ಟ್ರೀಯ ಆರ್ಯವೈಶ್ಯ ಸಮ್ಮೇಳನದ ಸಂಚಾಲಕ ಅನಿಲ್ ತಲ್ಲಮ್ಮ ಅವರು ಬೆಂಗಳೂರಿನಲ್ಲಿ ನಡೆಯುವ ಸಮಾವೇಶದ ಬಗ್ಗೆ ವಿವರಣೆಯನ್ನು ನೀಡಿದರು.
ಎಚ್.ಜೆ. ಹನುಮಂತಯ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಮ ನಾಗರಾಜ, ರಾಘವೇಂದ್ರ ಚಿತ್ರಾಲಿ, ರಾಕೇಶ್ ಪಾನಘಂಟಿ ಮತ್ತು ಶೋಭಾ ಮಾದಿನೂರು ಉಪಸ್ಥಿತರಿದ್ದರು. ಕೊಪ್ಪಳ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಡಿ. ಗುರುರಾಜ ವಂದಿಸಿದರು.