ಸತ್ವಭರಿತ ಸಾಹಿತ್ಯವುಳ್ಳ ಪುಸ್ತಕಗಳು ಹೊರಬರಲಿ

| Published : Jan 04 2025, 12:31 AM IST

ಸತ್ವಭರಿತ ಸಾಹಿತ್ಯವುಳ್ಳ ಪುಸ್ತಕಗಳು ಹೊರಬರಲಿ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಸತ್ವಭರಿತ ಸಾಹಿತ್ಯವುಳ್ಳ ಪುಸ್ತಕಗಳು ಲೇಖಕರಿಂದ ಹೊರಬರಬೇಕು. ಗಟ್ಟಿತನದ ವಿಷಯದ ಜ್ಞಾನವುಳ್ಳ ಪುಸ್ತಕ ಓದುಗರ ಮೆಚ್ಚುಗೆ ಪಡೆಯುತ್ತದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಡಾ.ಕುಶಾಲ ಬರಗೂರ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಸತ್ವಭರಿತ ಸಾಹಿತ್ಯವುಳ್ಳ ಪುಸ್ತಕಗಳು ಲೇಖಕರಿಂದ ಹೊರಬರಬೇಕು. ಗಟ್ಟಿತನದ ವಿಷಯದ ಜ್ಞಾನವುಳ್ಳ ಪುಸ್ತಕ ಓದುಗರ ಮೆಚ್ಚುಗೆ ಪಡೆಯುತ್ತದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಡಾ.ಕುಶಾಲ ಬರಗೂರ ಹೇಳಿದರು.

ನಗರದ ಪ್ರಗತಿ ಪ್ರೌಢಶಾಲೆಯಲ್ಲಿ ಬೆಂಗಳೂರು ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಪುಸ್ತಕ ಪರಿಷತ್ತು ವತಿಯಿಂದ- ೨೦೨೫ ಹೊಸ ವಷದ ಆಹ್ವಾನ ಪ್ರಯುಕ್ತ ಪುಸ್ತಕ ಜ್ಞಾನ-ಮನ ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿದರು. ಜ್ಞಾನ ಲೇಖಕನ ವಿದ್ವತ್‌ನ್ನು ಜಗತ್ತಿಗೆ ಪರಿಚಯಿಸುತ್ತದೆ. ಇವತ್ತು ಕನ್ನಡ ಪುಸ್ತಕ ಪ್ರಾಧಿಕಾರ ವಿಶಿಷ್ಠ ಆಡಳಿತ ನಿರ್ವಹಿಸುತ್ತದೆ, ಮನೆಮನೆಗೂ ಗ್ರಂಥಾಲಯ, ನಾ ಮೆಚ್ಚಿದ ಪುಸ್ತಕ ಓದು, ಇನ್ನು ಹತ್ತು ಹಲವು ಅರ್ಥಪೂರ್ಣವಾದ ಯೋಜನೆಗಳನ್ನು ಕನ್ನಡ ಪುಸ್ತಕ ಪ್ರಾಧಿಕಾರ ಹಾಕಿಕೊಂಡಿದೆ. ಪುಸ್ತಕ ಓದುಗರ ಹಾಗೂ ಬರಿಯುವವರ ಸಂಖ್ಯೆ ಜಾಸ್ತಿ ಆಗಬೇಕು. ಎಂದೆಂದಿಗೂ ಸೊರಗದೆ ಇರುವ ಸಾಹಿತ್ಯವನ್ನು ಲೇಖಕರು ಬರೆಯಬೇಕು. ಪುಸ್ತಕಗಳು ಎಂದೆಂದಿಗೂ ಕರಗದ ಆಸ್ತಿಗಳು ಎಂದರು.

ಹಿರಿಯ ಪತ್ರಕರ್ತ ಬಸವರಾಜ ಸಂಪಣಿ ಮಾತನಾಡಿ, ಹೊಸ ವರ್ಷ ಆಚರಿಸುವ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು. ಹೊಸ ವರ್ಷದ ಸಂಭ್ರಮದ ನೆಪದಲ್ಲಿ ಸಂಭ್ರಮಿಸುವ ಜನರ ಮಧ್ಯೆ ಕಥೆ, ಕವನ ರಚನೆ ಮಾಡಿ, ಓದುವುದು, ಸಂವಾದ ಮೂಲಕ ವಿಚಾರವನ್ನು ಹಂಚಿಕೊಳ್ಳುವುದು, ಹಳೆತನವನ್ನು ಮರೆತು ಹೊಸತನದ ವಿಚಾರವನ್ನು ಬಿತ್ತುವ ಕನ್ನಡ ಪುಸ್ತಕ ಪ್ರಾಧಿಕಾರದ ಈ ಕಾರ್ಯಕ್ರಮ ನಿಜಕ್ಕೂ ಮೆಚ್ಚುವಂಥದ್ದು. ಇಂತಹ ಕಾರ್ಯಕ್ರಮಗಳಿಂದ ಭಾರತದ ಸಂಸ್ಕೃತಿ, ಇತಿಹಾಸ ಉಳಿಯುತ್ತದೆ ಎಂದು ಅಭಿಪ್ರಾಯಿಸಿದರು.

ಸಾಹಿತಿ ಪ್ರೊ.ಎ.ಎಚ್.ಕೊಳಮಲಿ ಮಾತನಾಡಿ, ಪೆನ್ನು ಖಡ್ಗಕ್ಕಿಂತ ಹರಿತವಾದದ್ದು. ಸಮಾಜದ ಅಂಕು ಡೊಂಕನ್ನು ತಿದ್ದಿ, ಸಮಾಜವನ್ನು ಅಭಿವೃದ್ಧಿಪಡಿಸುವ ಶಕ್ತಿ ಸಾಹಿತ್ಯಕ್ಕಿದೆ. ಸಾಹಿತಿಗಳು ಯಾವುದೇ ಜಾತಿ, ಮತ ಧರ್ಮಕ್ಕೆ, ಅಂಟಿಕೊಳ್ಳದೆ ತಮ್ಮ ಜ್ಞಾನದಿಂದ ಸಮಾಜವನ್ನು ಜ್ಞಾನ ಸಂಪತ್ತು ಭರಿತವನ್ನಾಗಿ ಮಾಡಬೇಕು ಎಂದು ಹೇಳಿದರು.

ಕನ್ನಡ ಪುಸ್ತಕ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಶಂಕರ ಬೈಚಬಾಳ ಮಾತನಾಡಿ, ಸಾಹಿತ್ಯ ಕ್ಷೇತ್ರಕ್ಕೆಜಿಲ್ಲೆಯ ಕೊಡುಗೆ ಅಪಾರವಾಗಿದೆ. ಹಲಸಂಗಿ ಗೆಳೆಯರ ಬಳಗದವರು ಈ ನಾಡಿನಲ್ಲಿ ಸಾಹಿತ್ಯದ ಬೀಜವನ್ನ ಬಿತ್ತಿದ್ದಾರೆ, ಬಸವಾದಿ ಶರಣರು ತಮ್ಮ ಜ್ಞಾನದಿಂದ ನಾಡನ್ನು ಶ್ರೀಮಂತಗೊಳಿಸಿದ್ದಾರೆ, ಇಂದಿನ ಯುವ ಪೀಳಿಗೆ ಓದುವ ಹಾಗೂ ಬರೆಯುವ ಹವ್ಯಾಸವನ್ನು ರೂಢಿಸಿಕೊಳ್ಳುವಂತೆ ಹೇಳಿದರು.

ಚಿಂತಕ ಮಂಜುನಾಥ ಜುನಗೊಂಡ ಮಾತನಾಡಿದರು. ಸಾಹಿತಿ ಸಿದ್ದಲಿಂಗ ಮನಹಳ್ಳಿ, ಕಾರ್ಯದರ್ಶಿ ಸಿದ್ದರಾಮ ಬಿರಾದಾರ, ಸಾಹಿತಿ ಬಿ.ಆರ್.ಬನಸೋಡೆ, ಸುಭಾಷ ಕಣ್ಣೂರ್, ವಿಜುಗೌಡ ಕಾಳಶೆಟ್ಟಿ ಇದ್ದರು. ಸುಭಾಷ ಕನ್ನೂರ ಸ್ವಾಗತಿಸಿದರು. ಸಾಹಿತಿ ಡಾ.ಮುರುಗೇಶ ಸಂಗಮ ನಿರೂಪಿಸಿದರು.