ಸಾರಾಂಶ
ಮಕ್ಕಳು ಅಧಿಕ ಸಮಯ ಮೊಬೈಲ್ ಬಳಕೆ ಮಾಡುವುದರ ಮೂಲಕ ಸಮಯ ವ್ಯರ್ಥ ಮಾಡುತ್ತಿದ್ದಾರೆ. ಇದೆ ರೀತಿ ಮುಂದುವರೆದರೆ ಶಿಕ್ಷಣ ವ್ಯವಸ್ಥೆಯ ಸಾಧನೆಯು ಕುಂಠಿತವಾಗುತ್ತದೆ
ನರಗುಂದ: ಪ್ರತಿಯೊಬ್ಬ ವಿದ್ಯಾರ್ಥಿಗಳು ಕಲಿಕೆ ಸಮಯದಲ್ಲಿ ತಮ್ಮ ಜವಾಬ್ದಾರಿ ಅರಿತು ಅಭ್ಯಾಸ ಮಾಡಿ ಶಾಲೆಗೆ ಕೀರ್ತಿ ತರಬೇಕು ಎಂದು ರೋಟರ್ಯಾಕ್ಟ ಶಾಲೆಯ ನಿರ್ದೇಶಕ ರಾಜು ಕಲಾಲ ಹೇಳಿದರು.
ಅವರು ಸೋಮವಾರ ಪಟ್ಟಣದ ಬಾಬಾಸಾಹೇಬ್ ಶಿಕ್ಷಣ ಸಂಸ್ಥೆಯ ರೋಟರ್ಯಾಕ್ಟ್ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ತಾಯಂದಿರ ಸಭೆ ಉದ್ಘಾಟಿಸಿ ಮಾತನಾಡಿದರು.ಪ್ರಸ್ತುತ ಸಮಾಜದಲ್ಲಿ ಮಕ್ಕಳು ತಮ್ಮ ಜವಾಬ್ದಾರಿ ಅರಿತುಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ. ಹಾಗಾಗಿ ಹತ್ತನೇ ತರಗತಿಯು ಮಾನವನ ಜೀವನದಲ್ಲಿ ಬದಲಾವಣೆ ತರುವಲ್ಲಿ ಪ್ರಮುಖ ಮೆಟ್ಟಿಲಾಗಿದೆ ಎಂದರು.
ತಾಲೂಕಿನ ದೈಹಿಕ ಶಿಕ್ಷಣ ವಿಷಯದ ಪರಿವೀಕ್ಷಕ ಎನ್. ಆರ್.ನಿಡಗುಂದಿ ಮಾತನಾಡಿ, ಮಕ್ಕಳು ಅಧಿಕ ಸಮಯ ಮೊಬೈಲ್ ಬಳಕೆ ಮಾಡುವುದರ ಮೂಲಕ ಸಮಯ ವ್ಯರ್ಥ ಮಾಡುತ್ತಿದ್ದಾರೆ. ಇದೆ ರೀತಿ ಮುಂದುವರೆದರೆ ಶಿಕ್ಷಣ ವ್ಯವಸ್ಥೆಯ ಸಾಧನೆಯು ಕುಂಠಿತವಾಗುತ್ತದೆ ಎಂದರು.ಬನಟ್ಟಿ ಪಬ್ಲಿಕ್ ಶಾಲೆಯ ಮುಖ್ಯೋಪಾಧ್ಯಾಯ ಎಸ್.ವೈ.ಪಾಟೀಲ್ ಮಾತನಾಡಿ, ಹತ್ತನೇ ತರಗತಿಯು ಪ್ರತಿಯೊಬ್ಬರ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಾವು ಗುರಿ ಮುಟ್ಟಲು 10ನೇ ತರಗತಿ ತುಂಭಾ ಸಹಕಾರಿಯಾಗಿದೆ. ಹಾಗಾಗಿ 10ನೇ ತರಗತಿಯನ್ನು ನಾವು ಶ್ರದ್ಧೆ, ಪ್ರಾಮಾಣಿಕ ಪ್ರಯತ್ನದೊಂದಿಗೆ ಅಭ್ಯಾಸ ಮಾಡುತ್ತಾ ಧೈರ್ಯವಾಗಿ ಪರೀಕ್ಷೆ ಎದುರಿಸಬೇಕು ಎಂದರು.
ಶಾಲೆಯ ಪ್ರಧಾನ ಗುರು ಪಿ.ವಿ. ಕೆಂಚನಗೌಡ್ರ, ಗುರುವೃಂದ ಹಾಗೂ 10 ನೇಯ ತರಗತಿಯ ವಿದ್ಯಾರ್ಥಿಗಳ ತಾಯಂದಿರು ಇದ್ದರು.ಎಂ.ಆರ್. ಜವಳಿ ಸ್ವಾಗತಿಸಿದರು, ಪಿ.ಎಸ್. ದಂಡಿನ ನಿರೂಪಿಸಿದರು. ಎಸ್.ಎಂ. ಹೂಗಾರ ವಂದಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))