ಸಾರಾಂಶ
ಶಿಗ್ಗಾಂವಿ: ಸಮಾಜದ ಶ್ರೇಯೋಭಿವೃದ್ಧಿ ಆಗಬೇಕಾದರೆ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು. ಮಕ್ಕಳಿಗೆ ಶಿಕ್ಷಣವೇ ಅಸ್ತ್ರವಾಗಬೇಕು. ಸಮಾಜದ ವಿವಿಧ ಘಟಕಗಳಲ್ಲಿ ಮಹಿಳೆಯರಿಗೆ ಸೂಕ್ತ ಸ್ಥಾನ ನೀಡಬೇಕು ಎಂದು ಬಣಜಿಗ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ರೂಡಗಿ ತಿಳಿಸಿದರು.ಪಟ್ಟಣದ ಪಂಚಮಸಾಲಿ ಸಮುದಾಯ ಭವನದಲ್ಲಿ ನಡೆದ ಎಡೆಯೂರ ಸಿದ್ದಲಿಂಗೇಶ್ವರ ಸೌಹಾರ್ದ ಸಂಘದ ವಾರ್ಷಿಕ ಮಹಾಸಭೆ, ಬಣಜಿಗ ಸಮಾಜದ ತಾಲೂಕು ಘಟಕದ ದ್ವಿತೀಯ ವರ್ಷದ ಸಮಾವೇಶ ಹಾಗೂ ಎಸ್ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದವರಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಸಮಾಜದ ಸಂಘಟನೆಗಾಗಿ ಪ್ರತಿಯೊಬ್ಬರೂ ಒಗ್ಗಟ್ಟಿನಿಂದ ಶ್ರಮಿಸಬೇಕು. ಇದರಿಂದ ಬಣಜಿಗ ಸಮಾಜ ಇತರೆ ಸಮಾಜಗಳಿಗೆ ಮಾದರಿಯಾಗಲು ಸಾಧ್ಯವಿದೆ ಎಂದರು.ರಾಯಚೂರು ಸಿಡಿಪಿಒ ಗಿರಿಜವ್ವ ಮಾತನಾಡಿ, ೧೨ನೇ ಶತಮಾನದಲ್ಲಿ ಜಾತಿ- ಮತಗಳ ಹೆಸರಿನಲ್ಲಿ ಸಮಾಜದಲ್ಲಿದ್ದ ಕಂದಕ ದೂರ ಮಾಡಲು ಬಸವಣ್ಣನವರು ಶ್ರಮಿಸಿದರು. ನಮ್ಮಲ್ಲಿ ಮೂಢನಂಬಿಕೆ ದೂರವಾಗಬೇಕು. ಅದರಿಂದ ಸದೃಢ ಸಮಾಜ ನಿರ್ಮಿಸಲು ಸಾಧ್ಯವಿದೆ. ಕಾಯಕದಲ್ಲಿ ಮೇಲು- ಕೀಳು ಇಲ್ಲವೆಂಬ ಸತ್ಯ ಅರಿತು, ಆತ್ಮಶುದ್ಧಿ, ಮನಶುದ್ಧಿ, ಭಾವಶುದ್ಧಿಯಿಂದ ಕಾಯಕ ಮಾಡಬೇಕು ಎಂದು ಸಲಹೆ ನೀಡಿದರು.
ಸಾನ್ನಿಧ್ಯವನ್ನು ವಿಜಯಪುರದ ಜ್ಞಾನಯೋಗಾಶ್ರಮದ ಗುರುಲಿಂಗ ಸ್ವಾಮೀಜಿ, ಶಿಗ್ಗಾಂವಿ ವಿರಕ್ತಮಠದ ಸಂಗನಬಸವ ಸ್ವಾಮೀಜಿ ವಹಿಸಿದ್ದರು.ಸಂಘದ ತಾಲೂಕು ಘಟಕದ ಅಧ್ಯಕ್ಷ ವೀರೇಶ ಸೊಬರದ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಬಸವರಾಜ ಹೆಸರೂರ, ರಾಜ್ಯ ಘಟಕದ ಉಪಾಧ್ಯಕ್ಷ ಅಂದಪ್ಪ ಜವಳಿ, ಕಾರ್ಯದರ್ಶಿ ಶಿವಾನಂದ ಬಿಳೆಕುದರಿ, ಮುಖಂಡರಾದ ಶಿವಪುತ್ರಪ್ಪ ಜವಳಿ, ಬಸವರಾಜ ಚಿಗಳ್ಳಿಶೆಟ್ಟರ, ಶಿವಾನಂದ ಬಿಳೇಕುದರಿ, ಶರಣಪ್ಪ ಅತ್ತಿಗೇರಿ, ಗಂಗಾಧರ ಮಾಮ್ಲೆಪಟ್ಟಣಶೆಟ್ಟರ, ರಾಜಶೇಖರ ಅತ್ತಿಗೇರಿ, ಗಿರಿಜಾ ಹೆಸರೂರ, ಪೂಜಾ ಸೊಬರದ, ಪವಿತ್ರಾ ಪಟ್ಟಣಶೆಟ್ಟರ ಇತರರು ಇದ್ದರು.20ರಂದು ಸಾರಿಗೆ ಅದಾಲತ್ಹಾವೇರಿ: ಸಾರಿಗೆ ಅದಾಲತ್ ಕಾರ್ಯಕ್ರಮ ಸೆ. 20ರಂದು ಸಂಜೆ 4 ಗಂಟೆಗೆ ಹಾವೇರಿ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಆಯೋಜಿಸಲಾಗಿದೆ. ಸಾರ್ವಜನಿಕರು, ವಾಹನಗಳ ಮಾಲೀಕರು ಮತ್ತು ಚಾಲಕರು ಕಚೇರಿಗೆ ಸಂಬಂಧಿಸಿದಂತೆ ಕುಂದುಕೊರತೆಗಳಿದ್ದಲ್ಲಿ ಅಂದು ಕಚೇರಿಗೆ ಆಗಮಿಸಿ, ತಮ್ಮ ಸಮಸ್ಯೆಗಳನ್ನು ಇತ್ಯರ್ಥಪಡಿಸಕೊಳ್ಳಬಹುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.