ಸಾರಾಂಶ
ಕನ್ನಡಪ್ರಭ ವಾರ್ತೆ ಕೆಜಿಎಫ್ಭೂಮಿ, ಪರಿಸರ ನಮ್ಮೆಲ್ಲರ ಆಸ್ತಿ, ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕೋಣ, ಮುಂದಿನ ಪೀಳಿಗೆಗಾಗಿ ಪರಿಸರ ಸಂರಕ್ಷಿಸುವ ಕಾರ್ಯಕ್ಕೆ ಮುಂದಾಗೋಣವೆಂದು ೩ನೇ ಅಪರ ಜಿಲ್ಲಾ ಸತ್ರ ನ್ಯಾಯಾಧೀಶರಾದ ಗಣಪತಿ ಗುರುಸಿದ್ದ ಬಾದಾಮಿ ತಿಳಿಸಿದರು.ವಿಶ್ವಪರಿಸರ ದಿನದ ಅಂಗವಾಗಿ ಕೆಜಿಎಫ್ ಮೊರಾರ್ಜಿ ದೇಸಾಯಿ ವಸತಿ ಶಾಲಾ ಆವರಣದಲ್ಲಿ ಸಾಮಾಜಿಕ ಅರಣ್ಯ ಇಲಾಖೆ, ಅರಣ್ಯ ಇಲಾಖೆ, ನ್ಯಾಯಾಂಗ ಇಲಾಖೆ, ಶಿಕ್ಷಣ ಇಲಾಖೆ, ಚಿನ್ನದ ಗಣಿ ಇಲಾಖೆ, ವಕೀಲರ ಸಂಘದಿಂದ ಒಂದು ಸಾವಿರ ಗಿಡ ನೆಡುವ ಕಾರ್‍ಯಕ್ರಮಕ್ಕೆ ವಿಶ್ವಪರಿಸರ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.ಪ್ಲಾಸ್ಟಿಕ್ ಮನುಕುಲಕ್ಕೆ ಮಾರಕ
ಮುಂದಿನ ಪೀಳಿಗೆಗೆ ಪರಿಸರ ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ, ಉತ್ತಮ ಪರಿಸರಕಕ್ಕಾಗಿ ಔಷಧೀಯ, ಹೂ ಬಿಡುವ, ಹಣ್ಣು ಬಿಡುವ ಮರಗಳನ್ನು ಬೆಳೆಸಿದರೆ ಹೆಚ್ಚಾಗಿ ಆಮ್ಲಜನಕ ಉತ್ಪತ್ತಿ ಮಾಡುತ್ತವೆ. ಇದರಿಂದ ಉತ್ತಮ ಆಮ್ಲಜನಕ ದೊರಕುತ್ತದೆ. ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿದ್ದು, ಮನುಷ್ಯರಾದ ನಾವು ಪ್ಲಾಸ್ಟಿಕ್ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡುವ ಮೂಲಕ ಪರಿಸರದ ಮೇಲೆ ದಾಳಿ ಮಾಡುತ್ತಿದ್ದೇವೆ, ಪ್ಲಾಸ್ಟಿಕ್ ಮನುಕುಲಕ್ಕೆ ಮಾರಕ, ಮನುಷ್ಯರು ಪ್ಲಾಸ್ಟಿಕ್ ಉತ್ಪನ್ನಗಳನ್ನು ಉಪಯೋಗಿಸುವುದು ಕಡಿಮೆ ಮಾಡಿ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡುವಂತಹ ಕೆಲಸವನ್ನು ಮಾಡಬೇಕಿದೆ ಎಂದರು.ಪ್ರಧಾನ ಸಿವಿಲ್ ನ್ಯಾಯಾಧೀಶರಾದ ವಿನೋದ್‌ಕುಮಾರ್.ಎಂ. ಮಾತನಾಡಿ, ಪರಿಸರವನ್ನು ನಾವು ಉಳಿಸಿದರೆ ಪರಿಸರ ನಮ್ಮನ್ನು ಉಳಿಸುತ್ತದೆ ಎಂಬ ಸತ್ಯವನ್ನು ನಾವು ಮನವರಿಕೆ ಮಾಡಿಕೊಳ್ಳಬೇಕು. ಪ್ರತಿಯೊಬ್ಬರೂ ತಮ್ಮ ಮನೆಗಳ ಮುಂದೆ ಹಾಗೂ ಇತ್ತಲಲ್ಲಿ ಹೂವಿನ ಗಿಡ, ಹಣ್ಣಿನ ಗಿಡಗಳನ್ನು ಬೆಳೆಸುವ ಮೂಲಕ ಪಕ್ಷಿ ಸಂಕುಲವನ್ನು ನಾವು ಸಂರಕ್ಷಣೆ ಮಾಡುವ ಮೂಲಕ ನಮ್ಮ ಮುಂದಿನ ಪೀಳಿಗೆ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಲಿದೆ ಎಂದರು.ಪ್ರತಿಯೊಬ್ಬರೂ ಒಂದೊಂದು ಗಿಡ ಬೆಳೆಸಿಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ೪೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದು, ಪ್ರತಿಯೊಬ್ಬ ವಿದ್ಯಾರ್ಥಿ ಸಹ ಒಂದೊಂದು ಗಿಡವನ್ನು ದತ್ತು ಪಡೆದು ಸಂರಕ್ಷಣೆ ಮಾಡಿ, ಗಿಡವನ್ನು ಬೆಳೆಸುವ ವಿದ್ಯಾರ್ಥಿ ಹೆಸರನ್ನು ಗಿಡದ ಮೇಲೆ ಬರೆದು ಉತ್ತಮವಾಗಿ ಗಿಡ ಬೆಳೆಸುವ ವಿದ್ಯಾರ್ಥಿಗೆ ಮುಂದಿನ ವರ್ಷದ ಪರಿಸರದ ದಿನಂದು ಬಹುಮಾನ ನೀಡುವುದಾಗಿ ನ್ಯಾಯಾಧೀಶರು ಸಲಹೆ ನೀಡಿದರು.ಪ್ಲಾಸ್ಟಿಕ್ ಬಳಸಬೇಡಿ
ವಕೀಲರ ಸಂಘದ ಅಧ್ಯಕ್ಷ ರಾಜಗೋಪಾಲಗೌಡ ಮಾತನಾಡಿ, ಉತ್ತಮ ಪರಿಸರ ವೃದ್ಧಿಯಾಗಬೇಕಾದರೆ ಮೊದಲು ಪ್ಲಾಸ್ಟಿಕ್ ನಿಷೇಧಕ್ಕೆ ಪಣತೊಡಬೇಕು, ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ನಾಶವಾಗುತ್ತಿದೆ, ಪ್ರತಿ ಮನೆಯಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿದೆ, ಪ್ಲಾಸ್ಟಿಕ್ ಇಲ್ಲದೆ ಜೀವನವೇ ಇಲ್ಲವೇನು ಎಂಬ ಸ್ಥಿತಿಗೆ ನಾವು ಬಂದು ನಿಂತಿದ್ದವೇ, ಸರಕಾರ ಯಂತ್ರ ಮೊದಲು ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಿದಾಗ ಮಾತ್ರ ನಾವು ಉತ್ತಮ ಪರಿಸರ ಕಾಣಬಹುದು.ಮಳೆಯಲ್ಲೇ ಗಿಡ ನೆಟ್ಟ ನ್ಯಾಯಾಧೀಶರುಬುಧವಾರ ಬೆಳಗ್ಗೆ ಅರಣ್ಯ ಇಲಾಖೆ ಗಿಡ ನೆಡುವ ಸಮಯದಲ್ಲಿ ಜೋರು ಮಳೆಯಲ್ಲಿ ನೆನೆದು ನ್ಯಾಯಾಧೀಶರು ಗಿಡವನ್ನು ನೆಟ್ಟರು. ಮಳೆ ಬಂದಿರುವುದು ಶುಭ ಸೂಚಕ, ಎಲ್ಲ ಗಿಡಗಳು ಸಮೃದ್ಧವಾಗಿ ಬೆಳೆದು ಹೆಮ್ಮರವಾಗಲಿವೆ ಎಂದರು.ಈ ಸಂರ್ಭದಲ್ಲಿ ಬಿಇಒ ಮುನಿವೆಂಕಟರಾಮಚಾರಿ, ಸಾಮಾಜಿಕ ಅರಣ್ಯಧಿಕಾರಿ ಮಂಜುನಾಥ್, ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ನಾಗರಾಜ್, ವಕೀಲರ ಸಂಘದ ಉಪಾಧ್ಯಕ್ಷ ಮಣಿವಣ್ಣನ್, ಮಗೇಂದ್ರನ್ ಇದ್ದರು.
೫ಕೆಜಿಎಫ್೩..............ಕೆಜಿಎಫ್‌ನಲ್ಲಿ ಪರಿಸರ ದಿನಚಾರಣೆ ಅಂಗವಾಗಿ ಒಂದು ಸಾವಿರ ಸಸಿ ನೆಡುವ ಕಾರ್ಯಕ್ರಮಕ್ಕೆ ನ್ಯಾ.ಗಣಪತಿ ಗುರುಸಿದ್ದ ಬಾದಾಮಿ ಚಾಲನೆ ನೀಡಿದರು.;Resize=(128,128))
;Resize=(128,128))