ಈಶ್ವರಪ್ಪ ಸ್ಪರ್ಧಿಸಲಿ, ಓಟು ಹಾಕುತ್ತೇನೆ: ಆಯನೂರು

| Published : Mar 15 2024, 01:16 AM IST

ಈಶ್ವರಪ್ಪ ಸ್ಪರ್ಧಿಸಲಿ, ಓಟು ಹಾಕುತ್ತೇನೆ: ಆಯನೂರು
Share this Article
  • FB
  • TW
  • Linkdin
  • Email

ಸಾರಾಂಶ

ಈಶ್ವರಪ್ಪ ಅವರಿಗೆ ಖಂಡಿತವಾಗಿ ಪಕ್ಷೇತರವಾಗಿ ಸ್ಪರ್ಧೆ ಮಾಡೋಲ್ಲ. ಅವರಿಗೆ ಖಂಡಿತವಾಗಿ ಅಂತಹ ಧೈರ್ಯ ಇಲ್ಲ. ಈಶ್ವರಪ್ಪ ಯಾವ ರಾಜ್ಯ ನಾಯಕನೂ ಅಲ್ಲ, ಕೇವಲ ಶಿವಮೊಗ್ಗ ನಗರದ ನಾಯಕ. ಈಶ್ವರಪ್ಪ ಧೈರ್ಯ ಶಾಲಿಯಾದರೆ, ಜನರಿಗೆ ಬೇಕಾದ ವ್ಯಕ್ತಿ ಆದರೆ, ಪಕ್ಷೇತರವಾಗಿ ಸ್ಪರ್ಧೆ ಮಾಡಲಿ. ಒಂದುವೇಳೆ ಪಕ್ಷೇತರವಾಗಿ ಸ್ಪರ್ಧೆ ಮಾಡಿದರೆ ನನ್ನ ಓಟು ಈಶ್ವರಪ್ಪ ಅವರಿಗೆ ಹಾಕ್ತೇನೆ. ಅವರಿಗೆ ಆ ಧಮ್ ಇಲ್ಲ. ರಾಜಕೀಯ ಗಂಡಸ್ತನ ಇಲ್ಲ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್‌ ಶಿವಮೊಗ್ಗದಲ್ಲಿ ಟೀಕಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಈಶ್ವರಪ್ಪ ಅವರಿಗೆ ಖಂಡಿತವಾಗಿ ಪಕ್ಷೇತರವಾಗಿ ಸ್ಪರ್ಧೆ ಮಾಡೋಲ್ಲ. ಅವರಿಗೆ ಖಂಡಿತವಾಗಿ ಅಂತಹ ಧೈರ್ಯ ಇಲ್ಲ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್‌ ಟೀಕಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈಶ್ವರಪ್ಪ ಯಾವ ರಾಜ್ಯ ನಾಯಕನೂ ಅಲ್ಲ, ಕೇವಲ ಶಿವಮೊಗ್ಗ ನಗರದ ನಾಯಕ. ಈಶ್ವರಪ್ಪ ಧೈರ್ಯ ಶಾಲಿಯಾದರೆ, ಜನರಿಗೆ ಬೇಕಾದ ವ್ಯಕ್ತಿ ಆದರೆ, ಪಕ್ಷೇತರವಾಗಿ ಸ್ಪರ್ಧೆ ಮಾಡಲಿ. ಒಂದುವೇಳೆ ಪಕ್ಷೇತರವಾಗಿ ಸ್ಪರ್ಧೆ ಮಾಡಿದರೆ ನನ್ನ ಓಟು ಈಶ್ವರಪ್ಪ ಅವರಿಗೆ ಹಾಕ್ತೇನೆ. ಅವರಿಗೆ ಆ ಧಮ್ ಇಲ್ಲ. ಅವರಿಗೆ ರಾಜಕೀಯ ಗಂಡಸ್ತನ ಇಲ್ಲ. ನಾಳೆ ಮೋದಿ ಬಂದಾಗ ಮೋದಿ ಕಾಲಿಗೆ ಬೀಳ್ತಾರೆ ಎಂದು ಟೀಕಿಸಿದರು.ಈಶ್ವರಪ್ಪನವರ ಪುತ್ರ ಕೆ.ಈ ಕಾಂತೇಶ್ ಗೆ ಯಾರು ಟಿಕೇಟ್ ತಪ್ಪಿಸಲಿಲ್ಲ, 40 ಪರ್ಸೆಂಟ್‌ ಕಮಿಷನ್ ಹಗರಣಕ್ಕೆ ಅವರೇ ಬಲಿದಾನ ಮಾಡಿಕೊಂಡಿದ್ದಾರೆ. ಅವರು ಹೇಳ್ತಿರೋದು ಎಲ್ಲಾ ಸುಳ್ಳು. ಈಶ್ವರಪ್ಪ ಬ್ಲ್ಯಾಕ್ ಮೇಲ್ ರಾಜಕಾರಣಿ. ಅವರಿಗೆ ಅಂತಹ ಧಮ್ಮು, ತಾಕತ್ತು ಇದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲಿ ಎಂದು ಸವಾಲು ಹಾಕಿದರು.ಕಳೆದ ಬಾರಿ ವಿಧಾನಸಭೆಗೆ ಟಿಕೆಟ್ ಕೇಳಿದ್ದರು, ಈಗ ಪುತ್ರನಿಗೆ ಲೋಕಸಭೆ ಕೇಳಿದ್ದರು,ಎರಡು ತಪ್ಪಿ ಹೋಯ್ತು. ಈಗ ಶಿಕ್ಷಕರ ಕ್ಷೇತ್ರ, ಪದವೀಧರ ಕ್ಷೇತ್ರ, ಇಲ್ಲ ಕೊನೆ ಪಕ್ಷ ಜಿಲ್ಲಾ ಪಂಚಾಯಿತಿ ಇದೆಯಲ್ಲಾ ಅದಕ್ಕಾದರೂ ಮಗನಿಗೆ ಟಿಕೆಟ್‌ ಸಿಗಲಿ ಎಂದು ಬಂಡಾಯದ ಮಾತುಗಳನ್ನು ಆಡುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯ ಯಾವ ತಾಲೂಕಿನಲ್ಲಿ ಈಶ್ವರಪ್ಪನವರ ಪ್ರಭಾವ ಇದೆ. ಈಶ್ವರಪ್ಪ ಅವರ ಕೈಯಲ್ಲಿ ಏನೇನು ಆಗಲ್ಲ. ಕೇವಲ ಬೋರ್ಡ್ ಅಧ್ಯಕ್ಷರ ಸ್ಥಾನ ಪಡೆಯಲು ಈ ರೀತಿ ಮಾಡ್ತಿದ್ದಾರೆ. ಈಶ್ವರಪ್ಪ ಯಾವುದೇ ರಾಷ್ಟ್ರಭಕ್ತ ಅಲ್ಲ, ಕಪಟ ರಾಷ್ಟ್ರಭಕ್ತ ಎಂದು ವ್ಯಂಗ್ಯವಾಡಿದರು.

ಮಾ.18ರಂದು ನಡೆಯುವ ಸಭೆಯಲ್ಲಿ ಯಾವುದೇ ಭೂಕಂಪ ಆಗಲ್ಲ. ಹೊರಗಿನವರನ್ನು ಕರೆದುಕೊಂಡು ಬಂದು ಸಭಾಂಗಣ ತುಂಬಿಸಬೇಕು ಅಷ್ಟೇ. ಈ ಬಾರಿ ನಾವು ಶಿವಮೊಗ್ಗ ಲೋಕಸಭಾ ಕ್ಷೇತ್ರ ಗೆಲ್ಲುತ್ತೇವೆ. ನಮ್ಮ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಗೆಲ್ಲುತ್ತಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು.ಪತ್ರಿಕಾಗೋಷ್ಠಿಯಲ್ಲಿ ಶಿ.ಜು.ಪಾಶ ಮತ್ತಿತರರು ಇದ್ದರು.

- - - -14ಎಸ್‌ಎಂಜಿಕೆಪಿ05: ಆಯನೂರು ಮಂಜುನಾಥ್‌