ಸಾರಾಂಶ
Let every sunrise be accompanied by a resolution: Dr. Chennamallikarjuna
-ಶ್ರೀಮರಡಿ ಮಲ್ಲಿಕಾರ್ಜುನ ದೇವಸ್ಥಾನದ ಮೌನಯೋಗಿ ಸುಶೀಲ ಗೋಶಾಲೆಯ ದಿನದರ್ಶಿಕೆ ಬಿಡುಗಡೆ
----ಕನ್ನಡಪ್ರಭ ವಾರ್ತೆ ಸುರಪುರ
ಪ್ರತಿದಿನ ಸೂರ್ಯೋದಯ ಒಂದು ನೂತನ ಸಂಕಲ್ಪದಿಂದ ಗೋ ಮಾತೆಯ ನಮಸ್ಕಾರದೊಂದಿಗೆ ಕೂಡಿರುವಂತಾದರೆ, ಆ ದಿನ ಅರ್ಥಪೂರ್ಣವಾಗಿ ಪೂರೈಸಿಕೊಳ್ಳಲು ಸಾಧ್ಯವಾಗುತ್ತದೆ. ಸಂಕಲ್ಪವಿಲ್ಲದ ದಿನ ನಮ್ಮ ಬದುಕಿನಿಂದ ಜಾರಿ ಹೋಗದಂತೆ ಜಾಗೃತಿ ವಹಿಸುವುದು ಅವಶ್ಯಕ ಎಂದು ಶ್ರೀಗಿರಿ ಸಂಸ್ಥಾನ ಮಠದ ಡಾ. ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯ ನುಡಿದರು.ಶ್ರೀಮರಡಿ ಮಲ್ಲಿಕಾರ್ಜುನ ದೇವಸ್ಥಾನದ ಮೌನಯೋಗಿ ಸುಶೀಲ ಗೋಶಾಲೆಯ 2025ನೇ ವರ್ಷದ ದಿನದರ್ಶಿಕೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಶ್ರೀಗಳು, ಪ್ರತಿದಿನ ಗೋ ಮಾತೆ ನಮಸ್ಕಾರದೊಂದಿಗೆ ಪ್ರಾರಂಭಿಸಿ ಎಂದರು.
ವಿಶ್ವರಾಧ್ಯ ದೇವರು ಚಟ್ನಳ್ಳಿ ಮಾತನಾಡಿ, ಮಹಿಳೆಯರು, ರೈತರು, ಯುವಕರು ಹೈನುಗಾರಿಕೆ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಕಾರ್ಯನಿರ್ವಹಿಸುವ ಮೂಲಕ ಗ್ರಾಮಾಂತರ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿಸಿಕೊಳ್ಳಬೇಕು. ಕುಟುಂಬಗಳು ಆರ್ಥಿಕ ಅಭಿವೃದ್ಧಿಯಾಗುವುದರ ಜೊತೆಗೆ ಗ್ರಾಮಾಭಿವೃದ್ಧಿಗೆ ಪೂರಕ ವಾತಾವರಣ ಎಲ್ಲಿಡೆ ಸೃಷ್ಟಿಯಾಗಿಬೇಕು ಎಂದರು.ಶ್ರೀಗುರು ಪುಟ್ಟರಾಜನ ಕಲ್ಯಾಣ ಸೇವಾ ಸಮಿತಿಯ ಅಧ್ಯಕ್ಷ ಕ್ಷೀರಲಿಂಗಯ್ಯ ಹಿರೇಮಠ ಬೋನ್ಹಾಳ, ತ್ರಿಮೂರ್ತಿ ಸೇವಾ ಸಮಿತಿ ಅಧ್ಯಕ್ಷ ಶ್ರೀನಾಥ್ ಪಾಣಿಬಾತೆ, ರವಿಚಂದ್ರನ ಕುಂಬಾರ, ಬಸವರಾಜ ಸಿದ್ರಾ, ಹನುಮಂತರಾಯ ಮಠದ ಭಕ್ತರು ಇದ್ದರು.
---------ಫೋಟೊ....ಸುರಪುರ ಸಮೀಪದ ಶ್ರೀಮರಡಿ ಮಲ್ಲಿಕಾರ್ಜುನ ದೇವಸ್ಥಾನದ ಮೌನಯೋಗಿ ಸುಶೀಲ ಗೋಶಾಲೆಯ 2025ನೇ ವರ್ಷದ ದಿನದರ್ಶಿಕೆ ಬಿಡುಗಡೆ ಸಮಾರಂಭ ಜರುಗಿತು.
3ವೈಡಿಆರ್21: