ಪ್ರತಿಯೊಬ್ಬರೂ ಕಾಯಕದಲ್ಲಿ ತೊಡಗಲಿ: ಜೀವನ ರೂಪಿಸಿಕೊಳ್ಳಲಿ

| Published : Aug 20 2024, 12:46 AM IST

ಪ್ರತಿಯೊಬ್ಬರೂ ಕಾಯಕದಲ್ಲಿ ತೊಡಗಲಿ: ಜೀವನ ರೂಪಿಸಿಕೊಳ್ಳಲಿ
Share this Article
  • FB
  • TW
  • Linkdin
  • Email

ಸಾರಾಂಶ

ಇತಿಹಾಸ ಓದದವರು ಇತಿಹಾಸ ನಿರ್ಮಿಸಲಾರರು. ಬಸವಣ್ಣನವರ ಕಾಲದಲ್ಲಿ ಕಾಯಕದಲ್ಲಿ ಮಗ್ನರಾಗಿರುವ ಮಹಾನ್ ವ್ಯಕ್ತಿಯಾಗಿದ್ದು, ಅವರ ಕಾಯಕವನ್ನು ಮೆಚ್ಚಿ ಶಿವ ಕೂಡ ಆಶೀರ್ವದಿಸಿದಂತಹ ವ್ಯಕ್ತಿ ನುಲಿಯ್ಯ ಚಂದಯ್ಯ ಅವರು.

ಕಾರವಾರ: ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಮತ್ತು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ನುಲಿಯ್ಯ ಚಂದಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ನುಲಿಯ ಚಂದಯ್ಯ ಜಯಂತಿ ಉದ್ಘಾಟಿಸಿದರು.

ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ಮಾತನಾಡಿ, 12ನೇ ಶತಮಾನನದಲ್ಲಿ ಅಕ್ಕಮಹಾದೇವಿ, ಬಸವಣ್ಣ ಸೇರಿದಂತೆ ಅನೇಕ ಶಿವ ಶರಣರು ಕ್ರಾಂತಿಯನ್ನೇ ಸೃಷ್ಟಿಸಿವರು ಅಂತಹ ಮಹಾನ್ ವ್ಯಕ್ತಿಗಳಲ್ಲಿ ಕಾಯಕಯೋಗಿ ನುಲಿಯ್ಯ ಚಂದಯ್ಯಕೂಡ ಒಬ್ಬರು ಎಂದರು.

ಇತಿಹಾಸ ಓದದವರು ಇತಿಹಾಸ ನಿರ್ಮಿಸಲಾರರು. ಬಸವಣ್ಣನವರ ಕಾಲದಲ್ಲಿ ಕಾಯಕದಲ್ಲಿ ಮಗ್ನರಾಗಿರುವ ಮಹಾನ್ ವ್ಯಕ್ತಿಯಾಗಿದ್ದು, ಅವರ ಕಾಯಕವನ್ನು ಮೆಚ್ಚಿ ಶಿವ ಕೂಡ ಆಶೀರ್ವದಿಸಿದಂತಹ ವ್ಯಕ್ತಿ ನುಲಿಯ್ಯ ಚಂದಯ್ಯ ಅವರು. ಅವರ ಕಾಯಕದ ದಾರಿಯನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಕೊಳ್ಳಬೇಕು. ಕಾಯಕವೇ ಕೈಲಾಸ ಎಂಬ ಬಸವಣ್ಣನವರ ವಚನದಂತೆ, ನಿಜವಾದ ಕೈಲಾಸ ಕಾಣಬೇಕೆಂದರೆ ನಾವು ತಮ್ಮ ಕಾಯಕದಲ್ಲಿ ಮಗ್ನರಾಗಬೇಕು. ಪ್ರತಿಯೊಬ್ಬರೂ ಕಾಯಕದಲ್ಲಿ ತೊಡಗಿಸಿಕೊಂಡು ತಮ್ಮ ಜೀವನವನ್ನು ತಾವೇ ರೂಪಿಸಿಕೊಳ್ಳಬೇಕು ಎಂದರು.

ಕಲ್ಪನಾ ರಶ್ಮಿ ಕಲಾ ಲೋಕ ನೃತ್ಯ ಶಾಲೆಯ ಪ್ರಾಂಶುಪಾಲ ಬಿ.ಎನ್. ಸೂರ್ಯ ಪ್ರಕಾಶ, ನುಲಿಯ ಚಂದಯ್ಯ ಕುರಿತು ಉಪನ್ಯಾಸ ನೀಡಿ, ನುಲಿಯ್ಯ ಚಂದಯ್ಯನವರು ವಿಜಯಪುರದ ಶಿವಣಿಗೆ ಗ್ರಾಮದಲ್ಲಿ ಜನಿಸಿದವರು. ಅವರು ಪೂಜೆ ಮಾಡುವುದರಿಂದ ದೇವರನ್ನು ಕಾಣಲು ಸಾಧ್ಯವಿಲ್ಲ. ನಾವು ಮಾಡುವ ಕಾಯಕದಲ್ಲಿ ದೇವರನ್ನು ಕಾಣಬೇಕೆಂದು ತೋರಿಸಿಕೊಟ್ಟವರು. ಹಗ್ಗ ಹೊಸೆದು ಮಾರಾಟ ಮಾಡುತ್ತಿದ್ದರು. ಇದರಿಂದ ಬಂದ ಹಣವನ್ನು ತಮ್ಮಗೆ ಎಷ್ಟು ಬೇಕು ಅಷ್ಟು ಮಾತ್ರ ಇಟ್ಟುಕೊಂಡು ಉಳಿದ ಹಣವನ್ನು ದಾಸೋಹಕ್ಕೆ ದಾನ ಮಾಡುತ್ತಿದ್ದರು. ಎಲ್ಲ ವರ್ಗದ ಸಮುದಾಯದವರಿಗೂ ಒಳ್ಳೆಯ ಸಂದೇಶವನ್ನು ನೀಡಿದ್ದಾರೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಲಾ ನಾಯ್ಕ, ಜಿಲ್ಲಾಮಟ್ಟದ ಅಧಿಕಾರಿಗಳು, ವಿದ್ಯಾರ್ಥಿಗಳು ಮತ್ತಿತರರು ಇದ್ದರು. ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.