ಗಾನಭಾರತಿ ಸಮಾಜಮುಖಿಯಾಗಲಿ: ಮಠಪತಿ

| Published : Nov 23 2024, 01:16 AM IST

ಸಾರಾಂಶ

ಕಲಿಯುವ ಆಸಕ್ತಿವಂತರು ಸಾಕಷ್ಟು ಜನರಿದ್ದಾರೆ. ಅವರಿಗೆ ಕಲಿಸಲು ಸೂಕ್ತ ವೇದಿಕೆಯಿಲ್ಲದಂತಾಗಿದೆ. ಗಾನಭಾರತಿ ಸಮಾಜಮುಖಿಯಾಗಿ ಬೆಳೆದು ಹೆಮ್ಮರವಾಗಲಿದೆ

ಮುಧೋಳ: ನೆಮ್ಮದಿಯಿಂದ ಇರಲು ಎಲ್ಲಾ ಶಾಲಾ-ಕಾಲೇಜುಗಳಲ್ಲಿಯೂ ಸಂಗೀತ ಕಲಿಸುವ ಪರಿಪಾಠ ಆಗಬೇಕೆಂದು ವಿಶ್ರಾಂತ ಪ್ರಾಧ್ಯಾಪಕ ಡಾ.ಸಿದ್ದರಾಮಯ್ಯ ಮಠಪತಿ ಹೇಳಿದರು.

ನಗರದ ಕಸಾಪ ಭವನದಲ್ಲಿ ಲೋಕಾಪೂರದ ಗಾನ ಭಾರತಿ ಮಹಿಳಾ ಸಂಗೀತ ಕಲಾಸಂಸ್ಥೆ ಹಾಗೂ ಕಸಾಪ ಸಹಯೋಗದಲ್ಲಿ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಲಿಯುವ ಆಸಕ್ತಿವಂತರು ಸಾಕಷ್ಟು ಜನರಿದ್ದಾರೆ. ಅವರಿಗೆ ಕಲಿಸಲು ಸೂಕ್ತ ವೇದಿಕೆಯಿಲ್ಲದಂತಾಗಿದೆ. ಗಾನಭಾರತಿ ಸಮಾಜಮುಖಿಯಾಗಿ ಬೆಳೆದು ಹೆಮ್ಮರವಾಗಲಿದೆ ಎಂದು ಆಶಿಸಿದರು. ಸಾಹಿತಿ ಚಂದ್ರಶೇಖರ ದೇಸಾಯಿ ಮಾತನಾಡಿ, ಪಾರಿಜಾತದ ಪರಿಮಳ ಸಂಗೀತ ಪರಂಪರೆಗೆ ಮೇಳೈಸಿದೆ. ಕೃಷ್ಣಾಜಿ ದೇಶಪಾಂಡೆ ಸಾವಿರಾರು ಅನಕ್ಷರಸ್ಥರಿಗೆ ಗ್ರಾಮೀಣ ಕಲಾವಿದರಿಗೆ ಸಂಗೀತದ ರಸದೌತನ ನೀಡಿದ್ದಾರೆ. ಸಂಗೀತ ಸಂಸ್ಥೆ ಲೋಕದಲ್ಲಿಯೂ ಖ್ಯಾತಿ ಪಡೆಯುವಂತಾಗಲಿ ಎಂದರು.

ಉದ್ಯಮಿ ಎಂ.ಎಂ.ವಿರಕ್ತಮಠ ಅಧ್ಯಕ್ಷತೆ ವಹಿಸಿ ಮಾತನಾಡಿ, ಮೊಬೈಲ್ ಕಾಲದಲ್ಲಿಯೂ ಸಂಗೀತಕ್ಕೆ ಅಪಾರವಾದ ಶಕ್ತಿಯಿದೆ. ಸಂಗೀತ ನಮ್ಮೆಲ್ಲರಿಗೆ ಸಂತಸ ಸಂಭ್ರಮ ತರುತ್ತದೆ ಎಂದರು. ಗಾನ ಭಾರತಿ ಸಂಸ್ಥೆ ಅಧ್ಯಕ್ಷೆ ಮಂಜುಳಾ ಎಂ.ಸಂಬಾಳದ,

ನ್ಯಾ. ಪ್ರಕಾಶ ವಸ್ತ್ರದ, ಕಸಾಪ ಅಧ್ಯಕ್ಷ ಆನಂದ ಪೂಜಾರಿ, ವಚನ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಸಿದ್ದಣ್ಣ ಬಾಡಗಿ, ಹಿರಿಯ ನಾಗರಿಕ ವೇದಿಕೆ ಅಧ್ಯಕ್ಷ ಕಲ್ಲಪ್ಪ ಸಬರದ, ಕಜಾಪ ಅಧ್ಯಕ್ಷ ರಮೇಶ ಅರಕೇರಿ, ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷೆ ವಿಜಯಲಕ್ಷ್ಮೀ ಕಗಲಗೊಂಬ, ಶಿಕ್ಷಕ ಗಂಗಾಧರ ಗಾಣಿಗೇರ ಇತರರು ಇದ್ದರು.