ಭಟ್ಕಳದಲ್ಲಿ ಬ್ಲಾಕ್ ಬೆಲ್ಟ್ ವಿತರಣಾ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಭಟ್ಕಳಇಲ್ಲಿಯ ಇಲ್ಲಿನ ಆಸರಕೇರಿಯ ಶ್ರೀ ನಿಚ್ಚಲಮಕ್ಕಿ ತಿರುಮಲ ವೆಂಕಟರಮಣ ಸಭಾಭವನದಲ್ಲಿ ನಾಗಶ್ರೀ ಮಾರ್ಷಲ್ ಆರ್ಟ್ಸ್ ಆ್ಯಂಡ್ ಫಿಟ್ನೆಸ್ ಹಾಗೂ ಶೋಟೋಕಾನ್ ಇಂಡಿಯಾ ಆರ್ಗನೈಸೇಶನ್ ಬೆಂಗಳೂರು ಇವರ ಸಹಯೋಗದಲ್ಲಿ ಬ್ಲಾಕ್ ಬೆಲ್ಟ್ ವಿತರಣಾ ಕಾರ್ಯಕ್ರಮವನ್ನು ಸೋಡಿಗದ್ದೆ ಶ್ರೀ ಮಹಾಸತಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ, ನಿವೃತ್ತ ಶಿಕ್ಷಣಾಧಿಕಾರಿ ದೇವಿದಾಸ ಮೊಗೇರ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಕರಾಟೆ ಒಂದು ಉತ್ತಮ ಕಲೆಯಾಗಿದ್ದು, ಹೆಣ್ಣು ಮಕ್ಕಳು ಅಗತ್ಯ ಕರಾಟೆ ಕಲಿಯಬೇಕು. ಅನೇಕ ಸಂದರ್ಭದಲ್ಲಿ ದುಷ್ಟರಿಂದ ರಕ್ಷಿಸಿಕೊಳ್ಳಲು ಇದು ಸಹಕಾರಿಯಾವುದು. ಇಂತಹ ಕಲೆ ತಿಳಿದಿದ್ದರೆ ಅವರ ಆತ್ಮವಿಶ್ವಾಸವೂ ಹೆಚ್ಚುತ್ತದೆ. ಕರಾಟೆ ಸದಾ ಆತ್ಮವಿಶ್ವಾಸ ಹೆಚ್ಚಿಸುವ ಕಲೆಯಾಗಿದ್ದು ಮಕ್ಕಳಿಗೆ ಕರಾಟೆಯನ್ನು ಕಲಿಸುವುದರಿಂದ ಕೌಶಲ್ಯವೂ ಹೆಚ್ಚುತ್ತದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಶೋಟೋಕಾನ್ ಇಂಡಿಯಾ ಆರ್ಗನೈಸೇಶನ್ ಸಂಸ್ಥಾಪಕ ಮತ್ತು ತಾಂತ್ರಿಕ ನಿರ್ದೇಶಕ ಭಾರ್ಗವ ರೆಡ್ಡಿ ಮಾತನಾಡಿ, ಕರಾಟೆ ಕಲಿಕೆಯಿಂದ ಮಕ್ಕಳು ಮುಂದೆ ಕ್ರೀಡಾ ಕೋಟಾದಲ್ಲಿ ತಮಗೆ ಉತ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯಲು ಅನುಕೂಲವಾಗುತ್ತದೆ. ಅನೇಕ ಮಕ್ಕಳಿಗೆ ಶೈಕ್ಷಣಿಕ ಅರ್ಹತೆಯೊಂದಿಗೆ ಕ್ರೀಡಾ ಕೋಟಾ ಇದ್ದಲ್ಲಿ ಮುಂದೆ ಅವರಿಗೆ ಇಷ್ಟವಾದ ಕೋರ್ಸ್‌ಗೆ ಪ್ರವೇಶ ಪಡೆಯಲು ಅನುಕೂಲ ಎಂದರು.
ನಾಮಧಾರಿ ಸಮಾಜದ ಅಧ್ಯಕ್ಷ ಅರುಣ ನಾಯ್ಕ ಮಾತನಾಡಿ, ಭಟ್ಕಳದಲ್ಲಿ ಪ್ರಥಮವಾಗಿ ಕರಾಟೆ ಆರಂಭ ಮಾಡಿದ ವಾಸು ನಾಯ್ಕ ಅವರನ್ನು ಸ್ಮರಿಸಿದರು. ವಿದ್ಯಾಭಾರತಿ ಶಾಲೆಯ ಮುಖ್ಯಾಧ್ಯಾಪಕಿ ರೂಪಾ ರಮೇಶ ಖಾರ್ವಿ ಮಾತನಾಡಿದರು.
ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ರಾಧಾಕೃಷ್ಣ ಭಟ್ಟ, ಕಾನೂನು ಸಲಹೆಗಾರ ಮನೋಜ ನಾಯ್ಕ, ಸರ್ಪನಕಟ್ಟೆ ವೀರ ಸಾವರಕರ್ ಸೇವಾ ಸಮಿತಿ ಅಧ್ಯಕ್ಷ ಸತೀಶ ನಾಯ್ಕ, ಶೋಟೋಕಾನ್ ಇಂಡಿಯಾ ಆರ್ಗನೈಸೇಶನ್ ಜಿಲ್ಲಾಧ್ಯಕ್ಷ ಈಶ್ವರ ನಾಯ್ಕ ಉಪಸ್ಥಿತರಿದ್ದರು. ಪವನ ವೆಂಕಟೇಶ ನಾಯ್ಕ, ರೋಹಿಪ್ರಸಾದ ಸಂತೋಷ ನಾಯ್ಕ, ಧನ್ವಿತಾ ವಾಸು ಮೊಗೇರ, ಸಾನ್ವಿ ಚಂದ್ರ ನಾಯ್ಕ, ಅಖಿಲಾ ಚಂದ್ರಕಾಂತ ನಾಯ್ಕ, ಯಶಸ್ ವಾಮನ ಮೊಗೇರ, ಯಶಸ್ ಶ್ರೀಧರ ಮೊಗೇರ, ರತನ ಲಕ್ಷ್ಮಣ ಪಾವಸ್ಕರ್, ಶ್ರೇಯಸ್ ಭಾಸ್ಕರ ಮೊಗೇರ ಮತ್ತು ಸುರೇಶ ನಾಯ್ಕ ಇವರುಗಳಿಗೆ ಬ್ಲಾಕ್ ಬೆಲ್ಟ್ ಹಾಗೂ ಡಿಗ್ರಿ ವಿತರಣೆ ಮಾಡಲಾಯಿತು.
ಪತ್ರಕರ್ತ ಈಶ್ವರ ನಾಯ್ಕ ನಿರೂಪಿಸಿದರು. ನಾಗಶ್ರೀ ಸ್ವಾಗತಿಸಿ, ವಂದಿಸಿದರು.