ಗ್ರಾಮೀಣ ವಿದ್ಯಾರ್ಥಿಗಳು ಕೀಳರಿಮೆ ಬಿಟ್ಟು ಆತ್ಮವಿಶ್ವಾಸದಿಂದ ಜ್ಞಾನ ಸಂಪಾದನೆಗೆ ಒತ್ತು ಕೊಡಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ.ಬಾಲಗುರುಮೂರ್ತಿ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಮಧುಗಿರಿ

ಗ್ರಾಮೀಣ ವಿದ್ಯಾರ್ಥಿಗಳು ಕೀಳರಿಮೆ ಬಿಟ್ಟು ಆತ್ಮವಿಶ್ವಾಸದಿಂದ ಜ್ಞಾನ ಸಂಪಾದನೆಗೆ ಒತ್ತು ಕೊಡಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ.ಬಾಲಗುರುಮೂರ್ತಿ ಕರೆ ನೀಡಿದರು.

ಇಲ್ಲಿನ ಕನ್ನಡ ಭವನದ ಕೆ.ಎನ್‌.ರಾಜಣ್ಣ ಸಭಾಂಗಣದಲ್ಲಿ 2025-26ನೇಸಾಲಿನ ಜ್ಞಾನಪ್ರಿಯ ಕಾಲೇಜು ವತಿಯಿಂದ ಏರ್ಪಡಿಸಿದ್ದ ಜ್ಞಾನ ಪ್ರಿಯ ಉತ್ಸವ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸರ್ಕಾರಿ ಕೆಲಸಗಳು ಸಿಗುವುದು ಕಷ್ಟ. ಅದನ್ನರಿತು ಓದಿ ಗುಣಾತ್ಮಕ ಶಿಕ್ಷಣ ಕಲಿತು ಎಲ್ಲ ವಿಷಯಗಳಲ್ಲೂ ಹೆಚ್ಚು ಅಂಕಗಳಿಸುವ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಶಕ್ತಿ ಸಾಮರ್ಥ್ಯವನ್ನು ಮಕ್ಕಳು ಬೆಳಸಿಕೊಂಡು ಉನ್ನತ ಹುದ್ದೆ ಪಡೆದು ಸಮಾಜಕ್ಕೆ, ಹೆತ್ತವರಿಗೆ ಅಕ್ಷರ ಕಲಿಸಿದ ಗುರುಗಳಿಗೆ ಕೀರ್ತಿ ತರಬೇಕು ಎಂದರು.

ಪಿಎಸ್‌ಐ ಚಂದ್ರಶೇಖರ್‌ ಮಾತನಾಡಿ, ವಿದ್ಯಾರ್ಥಿಗಳು ವಾಹನ ಚಾಲನೆ ಮಾಡಲು ಡಿಎಲ್‌, ಜೀವ ವಿಮೆ ಪತ್ರ, ಹಾಗೂ ಕಡ್ಡಾಯವಾಗಿ ಹೆಲ್ಮೆ ಟ್‌ ಧರಿಸಬೇಕು. ವಾಹನ ಸುರಕ್ಷಾ ಕ್ರಮಗಳನ್ನು ಮತ್ತು ಕಾನೂನು ಪಾಲನೆ ಮಾಡಬೇಕು ಎಂದರು.

ಈ ವೇಳೆ ಜಿ.ಆರ್‌.ರಮೇಶ್‌, ರಂಗಪ್ಪ, ರಂಗಧಾಮಯ್ಯ, ಸಿದ್ದಾಪುರ ರಂಗಶ್ಯಾಮಣ್ಣ, ಶಂಕರನಾರಾಯಣ್‌, ಜಿ.ಎಸ್‌.ಜಗದೀಶ್‌ ಕುಮಾರ್‌, ಮಹಾಲಿಂಗೇಶ್‌, ಪ್ರಾಂಶುಪಾಲ ವೇದಮೂರ್ತಿ, ಎಂ.ಎನ್‌.ರಾಜೇಂದ್ರಬಾಬು ಇತರರಿದ್ದರು.