ಸಾರಾಂಶ
- ಬಜರಂಗದಳ ದಕ್ಷಿಣ ಪ್ರಾಂತ್ಯ ಮುಖಂಡ ಗೋವರ್ಧನ್ ಸಿಂಗ್ ಹೇಳಿಕೆ - - - ಕನ್ನಡಪ್ರಭ ವಾರ್ತೆ ಚನ್ನಗಿರಿ
ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣುಮಕ್ಕಳಿಗೆ ಪೂಜ್ಯನೀಯ ಸ್ಥಾನಮಾನ ನೀಡಲಾಗಿದೆ. ಆದರೆ ಜಿಹಾದಿಗಳು ಪ್ರೀತಿಯ ನೆಪದಲ್ಲಿ ಹಿಂದೂ ಹೆಣ್ಣುಮಕ್ಕಳನ್ನು ಮೋಸದಿಂದ ಮನವೂಲಿಸಿ, ವಿವಾಹವಾಗಿ ಅವರನ್ನು ಮತಾಂತರ ಮಾಡುವ ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗುತ್ತಿವೆ. ಅದರ ವಿರುದ್ಧ ಹಿಂದೂ ಸಮಾಜ ಎಚ್ಚೆತ್ತು, ಸಂಘಟಿತ ಆಗಬೇಕಾಗಿದೆ ಎಂದು ಬಜರಂಗದಳ ದಕ್ಷಿಣ ಪ್ರಾಂತ್ಯ ಸಹ ಸಂಯೋಜಕ ಗೋವರ್ಧನ್ ಸಿಂಗ್ ಹೇಳಿದರು. ಲೈಂಗಿಕ ದೌರ್ಜನ್ಯ ಆರೋಪಿ ಅಮ್ಜದ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ, ವಿಶ್ವ ಹಿಂದೂ ಪರಿಷತ್ತು- ಬಜರಂಗದಳ ಕರೆ ನೀಡಿದ್ದ ಚನ್ನಗಿರಿ ಬಂದ್‌ನಲ್ಲಿ ಅವರು ಮಾತನಾಡಿದರು. ಲಕ್ಷಾಂತರ ಹಿಂದೂ ಮಹಿಳೆಯರು ಮತಾಂತರ ಹೊಂದಿ, ಮುಸ್ಲಿಂ ಮಕ್ಕಳಿಗೆ ತಾಯಿಯಾಗಿ ಜೀವಿಸಲಾರದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮುಂಬೈ ರೆಡ್ ಲೈಟ್ ಏರಿಯಾದಲ್ಲಿ ಸಂಶೋಧನೆ ನಡೆಸಿದಾಗ ಬಹುತೇಕರು ಮುಸ್ಲಿಂ ಯುವಕರಿಂದ ಲವ್ ಜಿಹಾದ್‌ಗೆ ಬಲಿಯಾದ ಹೆಣ್ಣುಮಕ್ಕಳೇ ಹೆಚ್ಚಾಗಿದ್ದರು. ಇದನ್ನು ಹಿಂದೂ ಸಮಾಜ ಗಂಭೀರವಾಗಿ ಪರಿಗಣಿಸಬೇಕಿದೆ ಎಂದರು.ಮುಸ್ಲಿಂಮರು ತಮ್ಮ ಅಂಗಡಿಗಳಿಗೆ ಹಿಂದೂಗಳ ಹೆಸರುಗಳನ್ನು ಇಟ್ಟುಕೊಂಡು ವ್ಯಾಪಾರ ವ್ಯವಹಾರಗಳನ್ನು ನಡೆಸುತ್ತಾರೆ ಆದರೆ ಆ ಅಂಗಡಿಗಳ ಪೋನ್ ಪೇ, ಗೂಗಲ್ ಪೇಗಳಲ್ಲಿ ಮುಸ್ಲಿಮರ ಹೆಸರುಗಳು ಬರುತ್ತವೆ. ಹೀಗೆ ಹಿಂದುಳಿಗೆ ಮೋಸ ಮಾಡುತ್ತಿದ್ದಾರೆ. ಮುಸ್ಲಿಂಮರು ಅಂಗಡಿಗಳಿಗೆ ಹಿಂದೂ ಹೆಸರು ಇಟ್ಟಿರುವುದು ಕಂಡುಬಂದರೆ ಸ್ವಾಭಿಮಾನಿ ಹಿಂದೂಗಳು ಒಂದು ತಿಂಗಳೊಳಗಾಗಿ ಅಂತಹ ಅಂಗಡಿಗಳ ನಾಮಫಲಕ ಕಿತ್ತೊಗೆಯುವ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ಘೋಷಿಸಿದರು.
ಬಿಜೆಪಿ ಮುಖಂಡ ರಾಜನಹಳ್ಳಿ ಶಿವಕುಮಾರ್ ಮಾತನಾಡಿ, ಭಾರತದಲ್ಲಿ ಹಿಂದೂ ಧರ್ಮದ ಮೇಲೆ ಪಿತೂರಿ ನಡೆಯುತ್ತಿದೆ. ಅವರ ಉದ್ದೇಶ 2047ಕ್ಕೆ ಈ ದೇಶವನ್ನು ಇಸ್ಲಾಮೀಕಿರಣ ಮಾಡುವುದು. ಈ ಕನಸನ್ನು ನುಚ್ಚುನೂರು ಮಾಡುವ ಶಕ್ತಿ ಹಿಂದುಗಳಿಗಿದೆ ಎಂದರು.ದಾವಣಗೆರೆಯಲ್ಲಿ ಗಣಪತಿ ಮೆರವಣಿಗೆ, ಅಯೋಧ್ಯೆಯಲ್ಲಿ ರಾಮಜ್ಯೋತಿ ರಥಯಾತ್ರೆ ಸಂದರ್ಭ ಕಲ್ಲು ತೂರುತ್ತೀರಿ, ಗೋದ್ರಾದಲ್ಲಿ ಶ್ರೀರಾಮನ 58 ಕರ ಸೇವಕರನ್ನು ಸುಟ್ಟಿದ್ದೀರಿ. ಹಿಂದು ಎದ್ದರೆ ಸುನಾಮಿ ಏಳಲಿದೆ. ಹಿಂದೂಗಳು ಸಹನೆ ಉಳ್ಳವರಾಗಿದ್ದು, ಅದನ್ನು ದೌರ್ಬಲ್ಯ ಎಂದು ತಿಳಿಯದಂತೆ ಎಚ್ಚರಿಕೆ ನೀಡಿದರು. ನರೇಂದ್ರ ಮೋದಿ ನಾಯಕತ್ವದಲ್ಲಿ ಹಿಂದೂಗಳು ಸಂಘಟಿತರಾಗುತ್ತಿದ್ದು ನಿಮ್ಮಗಳ ನಿರ್ನಾಮ ಶತಸಿದ್ದ ಎಂದರು.
ತಾಲೂಕು ಬಿಜೆಪಿ ಮುಖಂಡ ಮಾಡಾಳು ಮಲ್ಲಿಕಾರ್ಜುನ್ ಮಾತನಾಡಿ, ನಮ್ಮ ಮನೆಯ ಮಕ್ಕಳು ಅಂಗಡಿಗೆ, ಶಾಲಾ, ಕಾಲೇಜಿಗೆ ಹೋಗುವುದಕ್ಕೆ ಕಷ್ಟದ ದಿನಗಳು ನಿರ್ಮಾಣವಾಗಿವೆ. ನಮ್ಮ ಸಮಾಜ ಯಾವ ದಿಕ್ಕಿನೆಡೆ ಸಾಗುತ್ತಿದೆ ಎಂಬುದೇ ತಿಳಿಯದಂತಾಗಿದೆ. ಹಿಂದೂ ಸಮಾಜ ಸಂಘಟಿತರಾಗಿ ಪ್ರತಿಯೊಬ್ಬ ಮಹಿಳೆಯರು ಕಿತ್ತೂರು ರಾಣಿ ಚನ್ನಮ್ಮ, ಒನಕೆ ಒಬವ್ವನಂತೆ ಧೈರ್ಯ ಮೆರೆಯಬೇಕಿದೆ ಎಂದರು.ಪ್ರತಿಭಟನಾ ಸಭೆಯಲ್ಲಿ ವಿ.ಎಚ್.ಪಿ -ಬಜರಂಗದಳದ ಮುಖಂಡರಾದ ಮಂಜುನಾಥ್, ರಾಜು ಕರಡೇರ್, ಕೆ.ಆರ್.ಗೋಪಿ, ವಿನಯ್ ಪವಾರ್, ಅಂಕಿತ್, ನಾಗರಾಜ್, ಪಟ್ಲಿ ನಾಗರಾಜ್, ನೇತಾಜಿ, ತರಕಾರಿ ಮಂಜುನಾಥ್, ರಾಕೇಶ್, ದಿಲೀಪ್, ವಿವಿಧ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರಾದ ನೀತಿಗೆರೆ ಮಂಜಪ್ಪ, ಮಾಚನಾಯ್ಕನಹಳ್ಳಿ ಮಂಜುನಾಥ್, ಬಸವಾಪುರ ರಂಗನಾಥ್, ಚಿತ್ರಲಿಂಗಪ್ಪ ಸೇರಿದಂತೆ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.
- - - -3ಕೆಸಿಎನ್‌ಜಿ1.ಜೆಪಿಜಿ: ಪ್ರತಿಭಟನಾ ಸಭೆಯಲ್ಲಿ ಬಜರಂಗದಳದ ದಕ್ಷಿಣ ಪ್ರಾಂತ್ಯ ಸಹ ಸಂಚಾಲಕ ಗೋವರ್ಧನ್ ಸಿಂಗ್ ಮಾತನಾಡಿದರು.-3ಕೆಸಿಎನ್‌ಜಿ2.ಜೆಪಿಜಿ: ಪ್ರತಿಭಟನೆಯಲ್ಲಿ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.