ರಂಗಭೂಮಿ ಕಲಾವಿದೆ ರೇಣುಕಾ ಬಾದಾಮಿ ಅವರು, ನಿಜಕ್ಕೂ ಕಲೆಗೆ ಜೀವ ತುಂಬುವ ಮೂಲಕ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ
ಯಲಬುರ್ಗಾ: ರಂಗಭೂಮಿ ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯವಾಗಬೇಕು ಎಂದು ಅಪರ ಸರ್ಕಾರಿ ವಕೀಲ ಹಾಗೂ ರಂಗಭೂಮಿ ಹಿರಿಯ ಕಲಾವಿದ ಮಲ್ಲನಗೌಡ ಪಾಟೀಲ್ ಹೇಳಿದರು.
ಪಟ್ಟಣದ ಖಾಸಗಿ ಮಿಲ್‌ನಲ್ಲಿ ತರಲಕಟ್ಟಿ ಜನನಿ ಗ್ರುಪ್ ಆಫ್ ಇನ್ಸ್ಟಿಟ್ಯೂಟ್ ವತಿಯಿಂದ ಹಮ್ಮಿಕೊಂಡಿದ್ದ ರಂಗಭೂಮಿ ಕಲಾವಿದೆ ರೇಣುಕಾ ಬಾದಾಮಿ ಅವರಿಗೆ ರಾಜ್ಯಮಟ್ಟದ ಚಾಲುಕ್ಯ ನಾಡಿನ ಕಲಾ ರತ್ನ ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿದರು.ರಂಗಭೂಮಿ ಕಲಾವಿದೆ ರೇಣುಕಾ ಬಾದಾಮಿ ಅವರು, ನಿಜಕ್ಕೂ ಕಲೆಗೆ ಜೀವ ತುಂಬುವ ಮೂಲಕ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ.ಈ ನಿಟ್ಟಿನಲ್ಲಿ ಇವರ ಕಲಾ ಸೇವೆ ಜನನಿ ಗ್ರುಪ್ ಆಫ್ ಇನ್ಸ್ಟಿಟ್ಯೂಟ್‌ನವರು ಗುರುತಿಸಿ ಚಾಲುಕ್ಯ ನಾಡಿನ ಕಲಾ ರತ್ನ ಪ್ರಶಸ್ತಿ ನೀಡಿರುವುದು ಶ್ಲಾಘನೀಯ ಎಂದರು.
ಕಲಾರತ್ನ ಪ್ರಶಸ್ತಿ ಸ್ವೀಕರಿಸಿ ರೇಣುಕಾ ಬಾದಾಮಿ ಮಾತನಾಡಿ, ನನ್ನಲ್ಲಿರುವ ಕಲಾ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸಿ ನೀಡಿರುವ ಕಲಾರತ್ನ ಪ್ರಶಸ್ತಿ ತುಂಬು ಹೃದಯದಿಂದ ಸ್ವೀಕರಿಸುತ್ತೇನೆ. ಕಲೆ ಉಳಿಸುವ ಜತೆಗೆ ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸ ಎಲ್ಲರಿಂದ ಆಗಬೇಕು ಎಂದರು.ಈ ಸಂದರ್ಭ ಸಂಸ್ಥೆಯ ಅಧ್ಯಕ್ಷ ರಂಗನಾಥ ವಲ್ಮಕೊಂಡಿ, ಪ್ರಾಣೇಶ ವಲ್ಮಕೊಂಡಿ, ಲೋಕೇಶ ಲಮಾಣಿ, ಶರಣಪ್ಪ ಅರಕೇರಿ, ಮಲ್ಲಿಕಾರ್ಜುನ ಶಾಸ್ತ್ರೀಮಠ, ಕಳಕೇಶ ಅರಕೇರಿ, ಸಂಗಪ್ಪ ರಾಮತ್ನಾಳ, ಮಂಜುನಾಥ ಅಧಿಕಾರಿ, ಮರಿಗೌಡ ಗೌಡ್ರ ಸೇರಿದಂತೆ ಅನೇಕ ಕಲಾವಿದರು ಇತರರು ಇದ್ದರು.