ರಾಜ್ಯದಲ್ಲಿ ವ್ಯವಹಾರಿಕ ಭಾಷೆ ಕನ್ನಡವಾಗಿರಲಿ

| Published : Nov 02 2024, 01:28 AM IST

ಸಾರಾಂಶ

ಕೋಲಾರ ಜಿಲ್ಲೆಯು ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಗಡಿಪ್ರದೇಶದಿಂದ ಕೂಡಿದೆ, ಕನ್ನಡ ತೆಲುಗು ಮತ್ತು ತಮಿಳು ಭಾಷೆಗಳ ಮಿಶ್ರಣ ಇಲ್ಲಿದೆ. ನಾವು ಇಲ್ಲಿನ ಮಣ್ಣಿನಲ್ಲಿ ಹುಟ್ಟಿ ನೀರು ಕುಡಿದಿದ್ದೇವೆ. ಕನ್ನಡಕ್ಕೆ ಮತ್ತು ನೆಲಕ್ಕೆ ಪ್ರೀತಿ, ಗೌರವದಿಂದ ಕಾಣುವಂತೆ ಮಾಡುವುದು ನಮ್ಮ ಜವಾಬ್ದಾರಿಯಾಗಬೇಕು.

ಕನ್ನಡಪ್ರಭ ವಾರ್ತೆ ಕೋಲಾರಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಇಂದು ನಗರದ ಗಾಂಧಿ ವನದಲ್ಲಿ ಮಾನ್ಯ ನಾಗರಾಭಿವೃದ್ಧಿ ಹಾಗೂ ನಗರಯೋಜನೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್.ಸುರೇಶ ರಾಷ್ಟ್ರ ಧ್ವಜಾರೋಹಣ ಹಾಗೂ ನಾಡ ಧ್ವಜಾರೋಹಣ ನೆರವೇರಿಸಿ ಜನತೆಗೆ ಕನ್ನಡ ರಾಜ್ಯೋತ್ಸವದ ಸಂದೇಶ ನೀಡಿದರು.ಕೋಲಾರ ಜಿಲ್ಲೆಯು ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಗಡಿಪ್ರದೇಶದಿಂದ ಕೂಡಿದೆ, ಕನ್ನಡ ತೆಲುಗು ಮತ್ತು ತಮಿಳು ಭಾಷೆಗಳ ಮಿಶ್ರಣ ಇಲ್ಲಿದೆ. ನಾವು ಇಲ್ಲಿನ ಮಣ್ಣಿನಲ್ಲಿ ಹುಟ್ಟಿ ನೀರು ಕುಡಿದಿದ್ದೇವೆ. ಕನ್ನಡಕ್ಕೆ ಮತ್ತು ನೆಲಕ್ಕೆ ಪ್ರೀತಿ, ಗೌರವದಿಂದ ಕಾಣುವಂತೆ ಮಾಡುವುದು ನಮ್ಮ ಜವಾಬ್ದಾರಿಯಾಗಬೇಕು ಎಂದರು.ಜಿಲ್ಲೆಯಲ್ಲಿ ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲಿ ನೀಡಬೇಕು ಪ್ರತಿಯೊಂದು ಭಾಷೆಯನ್ನೂ ಕಲಿಯಲಿ ಆದರೆ ಆಡಳಿತ ಭಾಷೆಯಾಗಿ ಮಾತ್ರ ಕನ್ನಡ ಆಗಿರಲಿ ಎಂದರು.ವಿಶೇಷ ಪ್ರೋತ್ಸಾಹ ನೀಡಬೇಕು

ಸಂಸದ ಎಂ.ಮಲ್ಲೇಶ್ ಬಾಬು ಮಾತನಾಡಿ, ಕನ್ನಡ ರಾಜ್ಯೋತ್ಸವು ಹಬ್ಬದ ರೀತಿಯಲ್ಲಿ ಆಚರಣೆ ಮಾಡಬೇಕು, ಮುಂದಿನ ವರ್ಷ ಕನಿಷ್ಠ ಒಂದು ತಿಂಗಳ ಕಾಲ ತಯಾರಿ ಮಾಡಿ ಅದ್ದೂರಿಯಾಗಿ ಆಚರಿಸೋಣ. ಬಂಗಾರಪೇಟೆ ಕನ್ನಡ ಸಂಘವು ಪ್ರತಿ ತಿಂಗಳು ಒಂದನೇ ತಾರೀಖು ಕನ್ನಡ ರಾಜ್ಯೋತ್ಸವ ಆಚರಣೆ ಮಾಡುತ್ತಿದೆ. ಇದರ ಬಗ್ಗೆ ಸರ್ಕಾರದ ಗಮನಕ್ಕೆ ತಂದು ವಿಶೇಷ ಪ್ರೋತ್ಸಾಹ ನೀಡುವಂತೆ ಸಲಹೆ ನೀಡಿದರು.ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ, ಕೋಲಾರ ಜಿಲ್ಲೆಗೆ ತಮ್ಮದೇ ಆದ ಇತಿಹಾಸವಿದೆ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಡಿವಿಜಿ, ಎಂ.ವಿ ಕೃಷ್ಣಪ್ಪ, ಪಟ್ಟಾಭಿರಾಮನ್, ಚನ್ನಯ್ಯ, ಸೇರಿದಂತೆ ಅನೇಕ ಮಹನೀಯರನ್ನು ಕೊಡುಗೆಯಾಗಿ ನೀಡಿದೆ. ಇವತ್ತಿನ ಆಚರಣೆ ನೀರಸವೂ ಅಲ್ಲದ ಅದ್ದೂರಿಯೂ ಅಲ್ಲದ ಸಮಾರಂಭವಾಗಿದೆ. ಮುಂದಿನ ವರ್ಷ ಗಡಿ ಜಿಲ್ಲೆಯಲ್ಲಿ ಅದ್ದೂರಿಯಾಗಿ ರಾಜ್ಯಕ್ಕೆ ಮಾದರಿಯಾದ ರಾಜ್ಯೋತ್ಸವ ಮಾಡೋಣ ಎಂದರುವಿಶ್ವ ಮಟ್ಟದಲ್ಲಿ ಆಚರಿಸುವ ಹಬ್ಬ

ಎಂಎಲ್‌ಸಿ ಅನಿಲ್ ಕುಮಾರ್ ಮಾತನಾಡಿ, ಕನ್ನಡ ರಾಜ್ಯೋತ್ಸವವನ್ನು ಕೇವಲ ಕರ್ನಾಟಕ ರಾಜ್ಯಕ್ಕೆ ಸೀಮಿತವಾಗಿಲ್ಲ ದೇಶಾದ್ಯಂತ ಸೇರಿದಂತೆ ವಿಶ್ವದಲ್ಲಿ ಸಹ ಆಚರಣೆ ಮಾಡುವ ದೊಡ್ಡ ಹಬ್ಬವಾಗಿದೆ ಯುಪಿಎ ಸರ್ಕಾರದಲ್ಲಿ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನವನ್ನು ನೀಡಲಾಗಿದೆ ಕನ್ನಡ ಭಾಷೆ ಉಳಿಸಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದರು.‘ಹಲ್ಮಿಡಿ ಶಾಸನ’ ಪ್ರತಿಕೃತಿ

ಜಿಲ್ಲಾಡಳಿತ ಭವನ ಆವರಣದಲ್ಲಿ ಹಲ್ಮಿಡಿ ಶಾಸನ ಪ್ರತಿಕೃತಿ ಅನಾವರಣ ಮಾಡಿದ ಉಸ್ತುವಾರಿ ಸಚಿವರು ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ಹೊರವಲಯದಲ್ಲಿರುವ ಜಿಲ್ಲಾಡಳಿತ ಭವನದ ಆವರಣದಲ್ಲಿ ಕನ್ನಡದ ಮೊಟ್ಟಮೊದಲ ಹಲ್ಮಿಡಿ ಶಾಸನದ ಪ್ರತಿಕೃತಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್.ಸುರೇಶ್ ಉದ್ಘಾಟಿಸಿ, ಪುಷ್ಪಾರ್ಚನೆ ನೆರವೇರಿಸಿದರು.ಎಂಎಲ್‌ಸಿ ಇಂಚರ ಗೋವಿಂದರಾಜು, ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಉಪಾಧ್ಯಕ್ಷೆ ಸಂಗೀತಾ, ಮಾಜಿ ಜಿಪಂ ಅಧ್ಯಕ್ಷ ಸಿ.ಎಸ್. ವೆಂಕಟೇಶ್, ಗ್ಯಾರಂಟಿ ಅನುಷ್ಠಾನ ಅಧ್ಯಕ್ಷ ವೈ ಶಿವಕುಮಾರ್, ಕೋಮುಲ್ ನಿರ್ದೇಶಕ ಷಂಷೀರ್, ಜಿಲ್ಲಾಧಿಕಾರಿ ಅಕ್ರಂ ಪಾಷ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್, ಡಿಎಫ್‌ಒ ಏಡುಕೊಂಡಲು, ಕಸಾಪ ಅಧ್ಯಕ್ಷ ಗೋಪಾಲಗೌಡ, ಸಹಾಯಕ ಕಮಿಷನರ್ ಡಾ.ಮೈತ್ರಿ, ಕೋಲಾರ ತಹಸೀಲ್ದಾರ್ ನಯನ, ಭುವನೇಶ್ವರಿ ಕನ್ನಡ ಸಂಘದ ಅಧ್ಯಕ್ಷ ತ್ಯಾಗರಾಜ್ ಮತ್ತಿತರರು ಇದ್ದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು ಕೋಲಾರಮ್ಮ ನನ್ನು ಹೊತ್ತ ಆನೆಯ ಅಂಬಾರಿಯೊಂದಿಗೆ ಕನ್ನಡ ರಾಜ್ಯೋತ್ಸವದ ಸ್ತಬ್ದ ಚಿತ್ರಗಳು, ಪಲ್ಲಕ್ಕಿಗಳು ನೋಡುಗರ ಗಮನ ಸೆಳೆಯಿತು.