ಸಾರಾಂಶ
ಶರಣ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವ ಕಾಯಕ ತತ್ವವನ್ನು ಪ್ರತಿಯೊಬ್ಬರು ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ಸಾಗಬೇಕೆಂದು ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಡೆಕೆರೆ ಚರಪಟ್ಟಾಧ್ಯಕ್ಷರಾದ ಮೃತ್ಯಂಜಯದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.
ಚರಪಟ್ಟಾಧ್ಯಕ್ಷ ಶ್ರೀ ಮೃತ್ಯಂಜಯ ದೇಶಿಕೇಂದ್ರ ಸ್ವಾಮೀಜಿ ಸಲಹೆಕನ್ನಡಪ್ರಭ ವಾರ್ತೆ ತಿಪಟೂರುಶರಣ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವ ಕಾಯಕ ತತ್ವವನ್ನು ಪ್ರತಿಯೊಬ್ಬರು ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ಸಾಗಬೇಕೆಂದು ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಡೆಕೆರೆ ಚರಪಟ್ಟಾಧ್ಯಕ್ಷರಾದ ಮೃತ್ಯಂಜಯದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಶ್ರೀ ಸಿದ್ದರಾಮೇಶ್ವರಸ್ವಾಮಿ ತಪೋವನ ದೊಣೆಗಂಗಾ ಕ್ಷೇತ್ರದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕ, ಕದಳಿ ಮಹಿಳಾ ವೇದಿಕೆ, ಯುವ ಘಟಕದ ವತಿಯಿಂದ ನಡೆದ ವಚನ ಗಾಯನ, ದತ್ತಿ ಉಪನ್ಯಾಸ, ಶರಣ ಚಿಂತನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಶ್ರಮ ಸಂಸ್ಕೃತಿ ಮೂಲಕ ದುಡಿದು ತಿನ್ನಬೇಕು. ಸೋಮಾರಿಗ ಳಾಗಿ ಸಮಾಜ ಹಾಗೂ ದೇಶಕ್ಕೆ ಹೊರೆಯಾಗಬಾರದು. ಯೋಗಿಯಾದರೆ ನನ್ನಂತೆ ಆಗಬೇಕು ಎಂಬ ಶ್ರೀ ಗುರುಸಿದ್ದರಾಮರ ವಾಣಿಯನ್ನು ಸ್ಮರಿಸಿದರು. ಸಿದ್ದರಾಮರ ಕಾಯಕ ನಿಷ್ಠೆಯನ್ನು ಅಳವಡಿಸಿಕೊಂಡರೆ ನೆಮ್ಮದಿಯ ಜೀವನ ನಡೆಸಬಹುದು ಎಂದರು.ಸಿದ್ದರಾಮರ ವಚನಗಳಲ್ಲಿ ವೈಚಾರಿಕ ಚಿಂತನೆಗಳು ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದ ಕವಯತ್ರಿ ಸುಶೀಲಾ ಸದಾಶಿವಯ್ಯ ಅವರು ಅಂದು ಸಮಾಜದಲ್ಲಿ ಬೇರೂರಿದ್ದ ಮೌಢ್ಯ, ಕಂದಾಚಾರ, ತಾರತಮ್ಯಗಳನ್ನು ಸಿದ್ದರಾಮರು ಖಂಡಿಸಿದರು ಎಂದರು. ಸಿದ್ದರಾಮರ ಕೈಲಾಸದ ಕಲ್ಪನೆ, ಹೆಣ್ಣು ಮಾಯೆಯಲ್ಲ ಆಕೆಯನ್ನು ಸಾಕ್ಷತ್ ಕಪಿಲಸಿದ್ದ ಮಲ್ಲಿಕಾರ್ಜುನ ಎಂದು ದೈವತ್ವಕ್ಕೆ ಹೋಲಿಸಿದ್ದರು. ಲಿಂಗ, ವರ್ಗ, ವರ್ಣ ಸಮಾನತೆಯ ಬಗ್ಗೆ ತಮ್ಮ ವಚನಗಳಲ್ಲಿ ಬಿಂಬಿಸಿರುವುದನ್ನು ಎಳೆ ಎಳೆಯಾಗಿ ವಿವರಿಸಿದರು.ದತ್ತಿದಾನಿಗಳು ಹಾಗೂ ಶಸಾಪ ತಾ.ಅಧ್ಯಕ್ಷ ಕೆ.ಎಂ. ಪರಮೇಶ್ವರಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ದನಗಾಹಿಯಾಗಿದ್ದ ಸಿದ್ದರಾಮರು ಬಸವಣ್ಣನವರು ಸ್ಥಾಪಿಸಿದ ಶೂನ್ಯ ಪೀಠದ ಮೂರನೇ ಅಧ್ಯಕ್ಷರಾದರು. ರಾಜಗುರುವಾಗದೆ ಲೋಕಗುರುವಾದ ಸನ್ನಿವೇಶ, ಅವನತಿಯ ಅಂಚಿನಲ್ಲಿದ್ದ ನೊಳಂಬ ರಾಜವಂಶಕ್ಕೆ ಚಾಲುಕ್ಯ ರಾಣಿ ಚಾಲಮದೇವಿಯ ಬಯಕೆಯಂತೆ ಕಾಯಕಲ್ಪ ನೀಡಿದ್ದನ್ನು ತಿಳಿಸಿದರು. ಕಲ್ಯಾಣ ಕ್ರಾಂತಿಯ ನಂತರ ಕರ್ನಾಟಕದ ದಕ್ಷಿಣ ಪ್ರಾಂತ್ಯಕ್ಕೆ ಬಂದು ಶರಣರ ವಿಚಾರಧಾರೆಯನ್ನು ಜನಮಾನಸಕ್ಕೆ ಉಣಬಡಿಸಿದ್ದನ್ನು ವಿವರಿಸಿದ ಅವರು, ದೊಣೆಗಂಗಾ ಪುಣ್ಯ ಕ್ಷೇತ್ರಕ್ಕೂ ದಯಮಾಡಿಸಿ ಅನುಷ್ಠಾನ ಮಾಡಿರುವುದರ ಕುರಿತು ಇಲ್ಲಿನ ಐತಿಹಾಸಿಕ ಮಹತ್ವದ ಬಗ್ಗೆ ತಿಳಿಸಿದರು.ಶಸಾಪ ಜಿಲ್ಲಾಧ್ಯಕ್ಷ ವಿದ್ವಾನ್ ಎಂ.ಸಿದ್ದರಾಮಯ್ಯ ಮಾತನಾಡಿ, ಕರ್ಮಯೋಗಿ ಸಿದ್ದರಾಮರು ಶಿವಯೋಗಿಯಾದ ರೀತಿಯನ್ನು ವಿವರಿಸಿದರು.ಕಾರ್ಯಕ್ರಮದಲ್ಲಿ ದತ್ತಿದಾನಿ ಟಿ.ಎನ್. ಪರಮಶಿವಯ್ಯ, ವಕೀಲರಾದ ಶೋಭಾ, ಕದಳಿ ಮಹಿಳಾ ವೇದಿಕೆ ತಾ.ಅಧ್ಯಕ್ಷೆ ಸ್ವರ್ಣಗೌರಿ, ಶಸಾಪ ಗೌರವಾಧ್ಯಕ್ಷ ಎಚ್.ಎಸ್.ಜಗದೀಶ್, ದೊಣೆಗಂಗಾ ಕ್ಷೇತರ ಮಾಜಿ ಅಧ್ಯಕ್ಷ ಕೆ.ಬಿ.ಸಿದ್ದರಾಮಯ್ಯ, ನಿವೃತ್ತ ಶಿಕ್ಷಕ ಸೋಮಶೇಖರ್, ಕದಳಿಯ ವಿಮಲಾ, ಪ್ರಭಾ, ತುಮಕೂರಿನ ಭಾವನ, ಗುರುಮಲ್ಲಪ್ಪ, ಕುಮಾರಸ್ವಾಮಿ, ಸತೀಶ್, ಸಿಡ್ಲೇಹಳ್ಳಿ ಗಂಗಾಧರ್ ಮತ್ತಿತರರಿದ್ದರು. ನಂತರ ವೇದಮೂರ್ತಿ ಶಿವಕುಮಾರಯ್ಯನವರಿಗೆ ಶರಣ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.