ಸಾರಾಂಶ
ಕನ್ನಡಪ್ರಭ ವಾರ್ತೆ ಕವಿತಾಳ
ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಗಳು ಸೌಹಾರ್ದ ಕೇಂದ್ರಗಳಾಗಿ ಪರಿವರ್ತನೆ ಆಗಬೇಕಾದರೆ ಸಾಮೂಹಿಕ ವಿವಾಹದಂತಹ ಸಮಾಜಮುಖಿ ಕಾರ್ಯಕ್ರಮ ಹೆಚ್ಚೆಚ್ಚು ನಡೆಸಬೇಕು ಎಂದು ಆರೂಢ ಅಯ್ಯಪ್ಪ ತಾತ ಹೇಳಿದರು.ಸಮೀಪದ ಮಲದಗುಡ್ಡ ಗ್ರಾಮದಲ್ಲಿ ಕರಿಬಸವ ತಾತನವರ 8ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮಾತನಾಡಿದ ಅವರು, ಸಾಮೂಹಿಕ ವಿವಾಹಗಳಿಂದ ಸಮಾಜದಲ್ಲಿ ಶಾಂತಿ, ನೆಮ್ಮದಿಯ ಬದುಕು ಪರಸ್ಪರ ಪ್ರೀತಿ, ವಿಶ್ವಾಸ ವೃದ್ಧಿಸುತ್ತದೆ. ಮನುಷ್ಯ ಜೀವನದಲ್ಲಿ ಸರಳತೆ ಪಾಲಿಸಬೇಕು ಅಂದಾಗ ಮಾತ್ರ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ಕಾಣಲು ಸಾಧ್ಯ ಎಂದರು.
ಇಂದಿನ ದಿನಮಾನಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಮದುವೆ ವೆಚ್ಚ ಭರಿಸಲು ಕಷ್ಟವಾಗುತ್ತಿದ್ದು ಆರ್ಥಿಕವಾಗಿ ಸಬಲರಾದವರು ಸಾಮೂಹಿಕ ವಿವಾಹದಂತಹ ಸತ್ಕಾರ್ಯಕ್ಕೆ ಮುಂದಾಗಬೇಕು. ಬಡವ, ಶ್ರೀಮಂತ, ಮೇಲು, ಕೀಳು ಎನ್ನದೆ ಎಲ್ಲರೂ ಒಂದೇ ಎನ್ನುವ ಭಾವನೆಯೊಂದಿಗೆ ನಡೆಸುವ ಎಲ್ಲ ಸತ್ಕಾರ್ಯಗಳಿಗೆ ಖಂಡಿತ ಜಯ ಸಿಗುತ್ತದೆ ಎಂದರು.ಶರಣಯ್ಯ ತಾತ ಹುನಕುಂಟಿ ಮಾತನಾಡಿದರು. ಆರೂಢ ಕರಿಬಸವ ಸ್ವಾಮಿಗಳ ನೂತನ ಶಿಲಾ ಮಂಟಪವನ್ನು ಲೋಕಾರ್ಪಣೆ ಮಾಡಲಾಯಿತು. ಪುರವಂತಿಕೆ ಸೇವೆ, ನಂದಿ ಕೋಲು ಸೇವೆ ಹಾಗೂ ಜೋಡು ಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ಜರುಗಿತು. ಈ ಸಂದರ್ಭದಲ್ಲಿ 9 ಜೋಡಿಗೆ ಸಾಮೂಹಿಕ ವಿವಾಹ ನೆರವೇರಿಸಲಾಯಿತು. ವೃಷಬೆಂದ್ರ ಸ್ವಾಮಿ ಮಹಲಿಮಠ ಕೊಡೇಕಲ್ ಅವರು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು.
ವೃಷಭೇಬೆಂದ್ರ ಮಹಾಸ್ವಾಮಿಗಳು ಮಹಲಿಮಠ ಕೊಡೇಕಲ್ ಅವರಿಗೆ ಗಂಗಮ್ಮ ಮಲ್ಲಯ್ಯ ಮರಕಮದಿನ್ನಿ ದಂಪತಿ ಹಾಗೂ ಮಲ್ಲದಗುಡ್ಡದ ಚನ್ನಮ್ಮ ನಿಂಗಯ್ಯ ದಂಪತಿ ಆರೂಢ ಅಯ್ಯಪ್ಪ ತಾತನವರಿಗೆ ನಾಣ್ಯಗಳಿಂದ ತುಲಾಭಾರ ನೆರವೇರಿಸಿದರು.ಈ ಸಂದರ್ಭದಲ್ಲಿ ಸಂಗಯ್ಯ ಸ್ವಾಮಿಗಳು ಕೊಡೇಕಲ್ ಮಠ ನಂದಿಹಾಳ, ಕಲಿಗಣನಾಥ ಸ್ವಾಮಿಗಳು ಯರಮರಸ್ ಹೆಗ್ಗಡದಿನ್ನಿ, ಅಯ್ಯಣ್ಣ ತಾತಾ ಹಾಲಭಾವಿ, ಗಂಗಾಧರ ಸ್ವಾಮಿಗಳು ದೇವರಭೂಪುರ, ಅಮರಯ್ಯ ಸ್ವಾಮಿ ಜಾಲಿಬೆಂಚಿ ಸುರಪುರ, ಆರೋಗ್ಯ ನಿರೀಕ್ಷಣಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಮತ್ತು ಆಶಾ ಕಾರ್ಯಕರ್ತರು ಹಾಗೂ ಮಠದ ಭಕ್ತಾದಿಗಳು ಭಾಗವಹಿಸಿದ್ದರು.