ಸಾರಾಂಶ
- ಭಿನ್ನಾಭಿಪ್ರಾಯಗಳಿದ್ದರೆ ಸಂಘ ಪರಿವಾರ, ಬಿಜೆಪಿ ಮುಖಂಡರ ಭೇಟಿ ಮಾಡಲು ರೇಣುಕಾಚಾರ್ಯ ತಾಕೀತು
- - - ಕನ್ನಡಪ್ರಭ ವಾರ್ತೆ ದಾವಣಗೆರೆ ಬಿ.ವೈ.ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾದ ಮೇಲೆ ಬಿಜೆಪಿಗೆ ಹೊಸತನ ಬಂದಿದೆ. ಅವರ ಬಗ್ಗೆ ಗೊಂದಲ ಸೃಷ್ಠಿಸಿ, ಹಾದಿ ಬೀದಿಯಲ್ಲಿ ಮಾತನಾಡುವುದು ಸರಿಯಲ್ಲ. ಬಿಜೆಪಿ ಸ್ವಚ್ಛ ಮಾಡಲು ನೀವು ಯಾವ ಪಕ್ಷದಿಂದ ಬಂದಿದ್ದೀರಿ? ರಮೇಶ ಜಾರಕಿಹೊಳೆ ಅವರೇ ವಿಕೃತ ಮನಸ್ಸಿನಿಂದ ಹೊರಬನ್ನಿ. ನಿಮಗೆ ಭಿನ್ನಾಭಿಪ್ರಾಯಗಳಿದ್ದರೆ ಸಂಘ ಪರಿವಾರ ಹಾಗೂ ಬಿಜೆಪಿ ಮುಖಂಡರನ್ನು ಭೇಟಿ ಮಾಡಿ. ಪಕ್ಷ ಹಾಗೂ ನಾಯಕರ ಕುರಿತು ಬಾಯಿಗೆ ಬಂದಂತೆ ಮಾತನಾಡಬಾರದು ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.ನಗರದ ಶಿರಮಗೊಂಡನಹಳ್ಳಿಯಲ್ಲಿ ಮಾಜಿ ಸಚಿವ ಎಸ್.ಎ.ರವೀಂದ್ರನಾಥ ನಿವಾಸದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ನಾವು ಎಲ್ಲರೂ ಒಗ್ಗೂಡಿ ಕಾಂಗ್ರೆಸ್ ವಿರುದ್ಧ ಹೋರಾಟ ಮಾಡೋಣ. ಬಿಜೆಪಿ ವಿರೋಧ ಪಕ್ಷವಾಗಿ ಕೆಲಸ ಮಾಡಬಾರದು ಎಂದರು.
ನಮ್ಮ ಹೋರಾಟ ಕಾಂಗ್ರೆಸ್ ವಿರುದ್ಧ:ದಾವಣಗೆರೆ ಲೋಕಸಭಾ ಮಾಜಿ ಸದಸ್ಯರ ಧರ್ಮಪತ್ನಿ ಪರವಾಗಿ ಚುನಾವಣಾ ಪ್ರಚಾರಕ್ಕೆ ಯಾವ ಹಳ್ಳಿಗೂ ಬರಲಿಲ್ಲ. ಕಾರ್ಯಕರ್ತರ ಜೊತೆ ಸರಿಯಾಗಿ ವರ್ತನೆ ಮಾಡಲಿಲ್ಲ. ನಿಮ್ಮ ನಡವಳಿಕೆಯಿಂದ ನೀವು ಸೋಲು ಕಂಡಿದ್ದೀರಿ. ಚಿಕ್ಕೋಡಿಯಲ್ಲಿ ಬಿಜೆಪಿ ಸೋಲಿಗೆ ರಮೇಶ್ ಜಾರಕಿಹೊಳಿ ನೀವು ಕಾರಣ. ಕುಮಾರ ಬಂಗಾರಪ್ಪ ಅವರು ಮೂಲೆಗುಂಪು ಆಗಿದ್ದರು. ವಿಜಯೇಂದ್ರ ವರ್ಚಸ್ಸು ಕುಗ್ಗಿಸಲು ಪ್ರಯತ್ನ ಮಾಡುತ್ತಿದ್ದಾರೆ. ನಮ್ಮ ಹೋರಾಟ ಕಾಂಗ್ರೆಸ್ ವಿರುದ್ಧ. ಕಾಂಗ್ರೆಸ್ ಏಜೆಂಟ್ ಆಗಬೇಡಿ. ನಾವು ಎಲ್ಲರೂ ಬಿಜೆಪಿ ಪರ. ಪಕ್ಷ ಸಬಲ ಮಾಡಲು ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದೇವೆ. ನೀವು ಮಾಡುತ್ತಿರುವುದು ಒಳ್ಳೆಯದಲ್ಲ. ಮೈಸೂರು ಪಾದಯಾತ್ರೆ ಯಶಸ್ಸಿನ ವರ್ಚಸ್ಸು ಕುಗ್ಗಿಸಲು ಹುನ್ನಾರ ಮಾಡುತ್ತಿದ್ದೀರಿ. ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಮಾಜಿ ಸಚಿವ ಎಸ್.ಎ. ರವೀಂದ್ರನಾಥ, ಮಾಜಿ ಎಂಎಲ್‌ಸಿ ಡಾ. ಎ.ಎಚ್. ಶಿವಯೋಗಿ ಸ್ವಾಮಿ, ಚನ್ನಗಿರಿ ಮಾಜಿ ಶಾಸಕ ಮಾಡಾಳ ವಿರೂಪಾಕ್ಷಪ್ಪ, ಮಾಜಿ ಮೇಯರ್ ಬಿ.ಜಿ. ಅಜಯಕುಮಾರ, ಪಾಲಿಕೆ ಸದಸ್ಯ ಕೆ.ಎಂ.ಸುರೇಶ, ಮುಖಂಡರಾದ ಮಾಡಾಳ ಮಲ್ಲಿಕಾರ್ಜುನ, ಲೋಕಿಕೆರೆ ನಾಗರಾಜ, ಚಂದ್ರಶೇಖರ ಪೂಜಾರ, ಪಕ್ಷದ ಕಾರ್ಯಕರ್ತರು, ಇತರರು ಇದ್ದರು.- - -
ಟಾಪ್ ಕೊಟ್ ಬೆಂಗಳೂರಿನಲ್ಲಿ ಶಾಸಕ ಹಾಗೂ ಮಾಜಿ ಶಾಸಕರು ಸೇರಿ ಸಭೆ ಮಾಡಲು ತೀರ್ಮಾನಿಸಿದ್ದೇವೆ. ವಿಜಯೇಂದ್ರ ಪರವಾಗಿ ನಿಲ್ಲುತ್ತೇವೆ. ಯತ್ನಾಳ ಅವರನ್ನು ಪಕ್ಷದಂದ ಉಚ್ಛಾಟನೆ ಮಾಡಬೇಕು. ಪಂಚಮಸಾಲಿ ಸಮುದಾಯ ಸೇರಿದಂತೆ ಹಲವರಿಗೆ 2 ಎ ಮೀಸಲಾತಿ ನೀಡುವ ಬಗ್ಗೆ ಚರ್ಚೆ ಆಗಿತ್ತು. ಯಡಿಯೂರಪ್ಪ ಸಾಮಾಜಿಕ ನ್ಯಾಯ ನೀಡಿದ್ದಾರೆ. ಯತ್ನಾಳ ಹಾಗೂ ಇತರರ ಬಗ್ಗೆ ವರಿಷ್ಠರಿಗೆ ಮತ್ತೆ ದೂರು ಕೊಡುತ್ತೇವೆ- ಎಂ.ಪಿ. ರೇಣುಕಾಚಾರ್ಯ, ಮಾಜಿ ಸಚಿವ
- - - -1ಕೆಡಿವಿಜಿ38ಃ:ದಾವಣಗೆರೆಯ ಶಿರಮಗೊಂಡನಹಳ್ಳಿಯ ಮಾಜಿ ಸಚಿವ ಎಸ್.ಎ. ರವೀಂದ್ರನಾಥ ನಿವಾಸದಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸುದ್ದಿಗೋಷ್ಠಿ ನಡೆಸಿದರು.