ಸಾರಾಂಶ
ಸಂಶೋಧಕರಿಗೆ ಸಾಮಾಜಿಕ ಬದ್ಧತೆಯನ್ನು ಉತ್ತೇಜಿಸಲು ಮತ್ತು ವೈಜ್ಞಾನಿಕ ಮೂಲಸೌಕರ್ಯ ಹಾಗೂ ಪರಿಣಿತಿಯನ್ನು ಒದಗಿಸುವುದು ಅಗತ್ಯವಾಗಿದೆ ಎಂದು ಕವಿವಿ ಪ್ರಭಾರ ಕುಲಪತಿ ಪ್ರೊ. ಜಯಶ್ರೀ ಎಸ್. ಹೇಳಿದರು.
ಧಾರವಾಡ: ವೈಜ್ಞಾನಿಕ ಜೀವ ವಿಜ್ಞಾನದ ಸಂಶೋಧನೆಗಳಿಗೆ ಪ್ರಯೋಗಾಲಯಗಳೇ ಮೂಲ ಆಧಾರ. ಆದರೆ, ಸಮಾಜ ವಿಜ್ಞಾನ ಸಂಶೋಧನೆಗಳಿಗೆ ಇಡೀ ವಿಶ್ವವೇ ಪ್ರಯೋಗಾಲಯ ಎಂದು ಕವಿವಿ ಪ್ರಭಾರ ಕುಲಪತಿ ಪ್ರೊ. ಜಯಶ್ರೀ ಎಸ್. ಹೇಳಿದರು.
ಕರ್ನಾಟಕ ವಿಶ್ವವಿದ್ಯಾಲಯದ ಭೌತಶಾಸ್ತ್ರ ಅಧ್ಯಯನ ವಿಭಾಗ ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಹಯೋಗದಲ್ಲಿ ಪಾಲಿಮಾರ್ ಎಲ್ಕಟ್ರೊಲೈಟ್ಸ್ ಫಾರ್ ಎನರ್ಜಿ ಸ್ಟೋರೇಜ್ ಅಪ್ಲಿಕೇಶನಸ್ಸ್ ವಿಷಯದ ಕುರಿತು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಸಂಶೋಧಕರಿಗೆ ಸಾಮಾಜಿಕ ಬದ್ಧತೆಯನ್ನು ಉತ್ತೇಜಿಸಲು ಮತ್ತು ವೈಜ್ಞಾನಿಕ ಮೂಲಸೌಕರ್ಯ ಹಾಗೂ ಪರಿಣಿತಿಯನ್ನು ಒದಗಿಸುವುದು ಅಗತ್ಯವಾಗಿದೆ. ಸಂಶೋಧನೆಗಳನ್ನು ಸಮಾಜದ ಹಿತಕ್ಕಾಗಿ ಬಳಸುವ ಅವಶ್ಯಕತೆ ಇದೆ. ಆಗ ಮಾತ್ರ ಸಂಶೋಧನೆಯ ಗುರಿ ಈಡೇರಿದಂತಾಗುತ್ತದೆ ಎಂದರು.ಕವಿವಿ ಕುಲಸಚಿವ ಡಾ. ಎ. ಚೆನ್ನಪ್ಪ ಮಾತನಾಡಿ, ವೈಜ್ಞಾನಿಕ ಸಂಶೋಧನೆ ನೀತಿ ಅನುಗುಣವಾಗಿ ಪ್ರಯೋಗಾಲಯಗಳಲ್ಲಿ ನಡೆಯುವ ಸಂಶೋಧನೆಗಳು ಸಮಾಜದ ಒಳಿತಿಗಾಗಿ ಉಪಯೋಗವಾಗಬೇಕು. ವಿಶ್ವವಿದ್ಯಾಲಯಗಳಲ್ಲಿ ನಡೆಯುವ ಸಂಶೋಧನೆಗಳು, ಸಮಾಜಕ್ಕೆ, ಜನರಿಗೆ ಪ್ರಯೋಜನವಾಗುವ ನೀತಿಗಳನ್ನು ರೂಪಿಸಬೇಕಾಗಿದೆ ಎಂದರು.
ತಾಂತ್ರಿಕ ಗೋಷ್ಠಿಯಲ್ಲಿ ಮಂಗಳೂರು ವಿವಿ ಪ್ರಾಧ್ಯಾಪಕ ಡಾ. ವಿ. ರವೀಂದ್ರಾಚಾರಿ, ಗುಲ್ಬರ್ಗಾ ವಿವಿ ಪ್ರಾಧ್ಯಾಪಕ ಡಾ. ವಿ.ಎಂ. ಜಾಲಿ, ಕವಿವಿ ಡಾ. ಎಂ.ಕೆ. ರಬಿನಾಳ ಮಾತನಾಡಿದರು.ವಿವಿಧ ವಿವಿಗಳ ಸಂಶೋಧನಾ ವಿದ್ಯಾರ್ಥಿಗಳಿದ್ದರು. ಪ್ರೊ. ನಿರ್ಮಲ ಕುಮಾರ ತರಬೇತಿ ನೀಡಿದರು. ಮುಖ್ಯ ಸಂಶೋಧಕ ಡಾ. ಆರ್.ಎಫ್. ಭಜಂತ್ರಿ ಪ್ರಾಸ್ತಾವಿಕ ಮಾತನಾಡಿದರು. ಪ್ರೊ. ಎಲ್.ಆರ್. ನಾಯಕ್, ಪ್ರೊ. ಎಚ್.ಎಚ್. ಸಿದರಾಯಿ, ಪ್ರೊ. ಜೆ.ಜೆ. ಟೋನಣ್ಣವರ, ಡಾ. ಎ.ಎಸ್. ಬೆನ್ನಾಳ, ಪ್ರೊ. ಬ್ಲೇಸ್ ಲೋಬೋ, ಪ್ರೊ. ಎಸ್.ಎಸ್. ಕುಬಕಡ್ಡಿ ಇದ್ದರು.