ವಾಜ್ಯ ಮುಕ್ತ ಗ್ರಾಮ ನಿರ್ಮಿಸಿ, ಮಾದರಿ ಜಿಲ್ಲೆಯನ್ನಾಗಿಸೋಣ

| Published : Nov 17 2024, 01:15 AM IST

ಸಾರಾಂಶ

ನಾನು ಬೆಂಗಳೂರು ಅಥವಾ ನಿಮ್ಮೂರ ಇರಲಿ, ನಮ್ಮೂರಿನಲ್ಲಿ ೪ ಮಂದಿ ಶಾಸಕರೊಂದಿಗೆ ವಾಜ್ಯ ಮುಕ್ತ ಗ್ರಾಮದ ಕುರಿತು ಮಾತನಾಡಿದಾಗ ಅವರು ಎದುರಿಗೆ ಏನು ಹೇಳದಿದ್ದರೂ ಸಹ ಮನಸ್ಸಿನಲ್ಲಿ ಹುಚ್ಚು ಕನಸಿದು ಎಂದುಕೊಂಡಿರುತ್ತಾರೆ

ಗಜೇಂದ್ರಗಡ: ವಾಜ್ಯ ಮುಕ್ತ ಗ್ರಾಮಗಳನ್ನು ಜಿಲ್ಲೆಯಲ್ಲಿ ನಿರ್ಮಾಣ ಮಾಡುವ ಮೂಲಕ ಜಿಲ್ಲೆಯನ್ನು ದೇಶದಲ್ಲಿ ಮಾದರಿ ಜಿಲ್ಲೆಯನ್ನಾಗಿ ನಿರ್ಮಿಸಲು ಶ್ರಮಿಸೋಣ ಎಂದು ಕಾನೂನು, ನ್ಯಾಯ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಪಟ್ಟಣದ ಜಿ.ಕೆ. ಬಂಡಿ ಗಾರ್ಡನಲ್ಲಿ ಶನಿವಾರ ಜಿಲ್ಲಾ ನ್ಯಾಯಾಂಗ, ಲೋಕೋಪಯೋಗಿ ಇಲಾಖೆ, ಜಿಲ್ಲಾ ಮತ್ತು ರೋಣ ತಾಲೂಕು ವಕೀಲರ ಸಂಘದಿಂದ ದಿವಾಣಿ ಜೆಎಂಎಫ್‌ಸಿ ನ್ಯಾಯಾಲಯ ಕಟ್ಟಡ ಶಂಕು ಸ್ಥಾಪನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪಟ್ಟಣದಲ್ಲಿ ನ್ಯಾಯಾಲಯ ಕಟ್ಟಡ ಶಂಕು ಸ್ಥಾಪನೆ ಸಣ್ಣದಾತು ನನಗೆ, ವಾಜ್ಯ ಮುಕ್ತ ಗ್ರಾಮ ಊದಿದ ಆ ಕಹಳೆ ದೊಡ್ಡದಾಗಿದೆ. ನಾನು ಬೆಂಗಳೂರು ಅಥವಾ ನಿಮ್ಮೂರ ಇರಲಿ, ನಮ್ಮೂರಿನಲ್ಲಿ ೪ ಮಂದಿ ಶಾಸಕರೊಂದಿಗೆ ವಾಜ್ಯ ಮುಕ್ತ ಗ್ರಾಮದ ಕುರಿತು ಮಾತನಾಡಿದಾಗ ಅವರು ಎದುರಿಗೆ ಏನು ಹೇಳದಿದ್ದರೂ ಸಹ ಮನಸ್ಸಿನಲ್ಲಿ ಹುಚ್ಚು ಕನಸಿದು ಎಂದುಕೊಂಡಿರುತ್ತಾರೆ. ಆದರೆ ಇದು ಹುಚ್ಚು ಕನಸಲ್ಲ. ಪೆಡಂಭೂತದ ಜತೆಗೆ ಹೋರಾಡಿ ಅದನ್ನು ಸಾಧಿಸಿ ತೋರಿಸೋಣ. ನಾನು ಹಗಲು ರಾತ್ರಿ ಕೆಲಸ ಮಾಡಲು ತಯಾರಿದ್ದೇನೆ. ಇಂತಹ ಪ್ಲಾನ್ ಚೆಕ್ಕರ್ ನೀಡಿದ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿಗೆ ಸರ್ಕಾರ ಹಾಗು ವೈಯಕ್ತಿಕ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದ ಅವರು, ವಾಜ್ಯ ಮಾಡಲು ಶಕ್ತಿ, ಸಾಮರ್ಥ್ಯವಿಲ್ಲದವರೂ, ಬಡವರು, ಬಡತನ ಆದರೆ ಅನ್ಯಾಯವಾಗಿದೆ ಅವರಿಗೆ. ಆದರೆ ನ್ಯಾಯಾಲಕ್ಕೆ ಹೋಗುವ ಸಾಮರ್ಥ್ಯವಿಲ್ಲ. ಕೋರ್ಟಗೆ ಹೋಗಿದ್ದ ಪಕ್ಕದ ಮನೆಯವನಿಗೆ ಇನ್ನೂ ನ್ಯಾಯ ಸಿಕ್ಕಿಲ್ಲ. ಅತಂಹವರನ್ನು ನೋಡಿ ಹೋಗಲಿ ಬೀಡಿ ಎನ್ನುವ ಪರಿಸ್ಥಿತಿಗೆ ಬಂದಿರುತ್ತಾರೆ. ಅತಂಹ ವಾತಾವರಣದಿಂದ ಮುಕ್ತರಾಗಬೇಕು. ಬಡವರಿಗೆ ತೀವ್ರವಾಗಿ ನ್ಯಾಯ ಸಿಗಬೇಕು ಎಂದು ರಾಜ್ಯದಲ್ಲಿ ತಿದ್ದುಪಡಿ ಮಾಡಿ ಕಾನೂನಾಗಿದ್ದು ಬಡವರು, ಅತೀ ಸಣ್ಣ ರೈತರು ಪ್ರಕರಣಗಳು ನ್ಯಾಯಾಲಯದಲ್ಲಿ ೬ ತಿಂಗಳಲ್ಲಿ ಬಗೆಹರಿಬೇಕು, ಇದು ಇವತ್ತು ಕಾನೂನು. ನನಗೆ ವಿಶ್ವಾಸವಿದೆ. ನಮ್ಮ ಜಿಲ್ಲೆಯಲ್ಲಿ ಜನಪರ ನಿಲುವಿಟ್ಟಿರುವಕ್ಕಂತ ನ್ಯಾಯಾಧೀಶರುಗಳು ಇದನ್ನು ಮಾಡುತ್ತಾರೆ. ೬ ತಿಂಗಳಲ್ಲಿ ಬಡವರ ಕೇಸ್ ನಿಖಾಲಿ ಆಗುತ್ತವೆ, ಅಂದರೆ ದೇಶದ ಕಾನೂನು ವ್ಯವಸ್ಥೆಯಲ್ಲಿ ಇತಿಹಾಸ ಸೃಷ್ಟಿಸಲಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ವಿ. ಶ್ರೀಶಾನಂದ ಮಾತನಾಡಿ, ವ್ಯಾಜ್ಯಗಳಿಲ್ಲದ ಮಾದರಿ ಗ್ರಾಮವನ್ನಾಗಿ ನಿರ್ಮಿಸೋಣ. ಆ ಗ್ರಾಮದರನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಸಮ್ಮುಖದಲ್ಲಿ ಈ ಗ್ರಾಮದಲ್ಲಿ ಯಾವುದೇ ವಾಜ್ಯವಿಲ್ಲವೆಂದು ಹೇಳೋಣ. ನ್ಯಾಯಾಲಯ ಇರಬೇಕು ಆದರೆ ಅಕಸ್ಮಾತ್ ಆದರೆ ಅನ್ನುವುದಕ್ಕೋಸ್ಕರ ನ್ಯಾಯಾಲಯ ಇರಲಿ ಎನ್ನುವಂತಾಗಲಿ. ಅಂತಹ ದಿನಗಳು ಬಂದರೆ ಇಂತಹ ಕಾರ್ಯಕ್ರಮ ಮಾಡಿದಕ್ಕೂ ಸಾರ್ಥಕ. ಕಷ್ಟ ಒಪ್ಪೊಕ್ಕೊತ್ತೀನಿ, ಪೆಂಡಭೂತವಾಗಿದೆ. ಆದರೆ ಹಿಮಾಲಯ ದೊಡ್ಡದಿದೆ, ಇಂದು ನಾವು ಒಂದು ಹೆಜ್ಜೆಯಿಟ್ಟರೆ ಹಿಮಾಲಯಕ್ಕೆ ಒಂದು ಹೆಜ್ಜೆ ಕಡಿಮೆಯಾಗುತ್ತದೆ. ಆ ನಿಟ್ಟಿನಲ್ಲಿ ಎಲ್ಲರೂ ಪಣ ತೊಟ್ಟರೆ ಮುಂದಿನ ನನ್ನ ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ ಕನಿಷ್ಠ ಪಕ್ಷ ೧೦೦ ವಾಜ್ಯ ಮುಕ್ತ ಗ್ರಾಮಗಳಿವೆ ಎಂದು ಹೇಳುವದರಲ್ಲಿ ದೂರವಿಲ್ಲ ಎಂದ ಅವರು, ಶಾಲೆ, ಆಸ್ಪತ್ರೆ ಹಾಗೂ ನ್ಯಾಯಾಲಯಗಳನ್ನು ಅಚ್ಚುಕಟ್ಟಾಗಿ ನಿರ್ಮಿಸಿಕೊಡಿ ಎಂದು ಲೋಕೋಪಯೋಗಿ ಇಲಾಖೆಗೆ ತಿಳಿಸಿದರು.

ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಗಜೇಂದ್ರಗಡ ತಾಲೂಕಿನಲ್ಲಿ ಇಂದಿನ ಕಾರ್ಯಕ್ರಮ ಇತಿಹಾಸ ಪುಟ ಸೇರಿದೆ. ನ್ಯಾಯಾಲಯ ಕಟ್ಟಡ ನಿರ್ಮಾಣ ಬೇಗ ಪೂರ್ಣವಾಗಲಿ, ಅದಕ್ಕೆ ಬೇಕಾದ ಸಹಕಾರ ನೀಡುತ್ತೇನೆ ಎಂದರು.

ರಾಜ್ಯ ವಕೀಲರ ಪರಿಷತ್ ಸದಸ್ಯ ಎಸ್.ಎಸ್. ಮಿಟ್ಟಲಕೋಡ ಮಾತನಾಡಿ, ಸರ್ಕಾರ ಘೋಷಿಸಿದ ೪೮ ತಾಲೂಕು ಕೇಂದ್ರಗಳಲ್ಲಿ ನ್ಯಾಯಾಲಯದ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆಗೊಂಡ ಗಜೇಂದ್ರಗಡ ಪಟ್ಟಣವು ಮೊದಲ ತಾಲೂಕಾಗಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಬಿ.ಎ. ಸಜ್ಜನರ, ಪೂರ್ಣ ಪ್ರಮಾಣದ ನ್ಯಾಯಾಲಯ ಆರಂಭಕ್ಕೆ ಮನವಿ ಮಾಡಿದರೆ, ವಿ.ಡಿ. ಪವಾಸ್ಕಾರ ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ವಿ. ಶ್ರೀಶಾನಂದ ಪರಿಚಯ ಭಾಷಣ ಮಾಡಿದರು.

ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ರೋಣ ವಕೀಲರ ಸಂಘದ ಅಧ್ಯಕ್ಷ ವಿ.ಎಸ್. ಬಂಗಾರಿ, ಪ್ರಧಾನ ಕಾರ್ಯದರ್ಶೀ ಐ.ಎ. ಫಾರೂಕಿ, ಲೋಕೊಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ವಿ.ಎನ್. ಪಾಟೀಲ, ವಿ.ಡಿ. ಪವಾಸ್ಕರ, ಬಿ.ಎ. ಸಜ್ಜನರ, ವಿ.ಆರ್. ಗುಡಿಸಾಗರ, ಶ್ರೀಕಾಂತ ಸಜ್ಜನರ, ಎಂ.ಎಚ್. ಕೋಲಕಾರ, ಬಿ.ಎಂ. ಸಜ್ಜನರ, ಎಂ.ಎಸ್. ಹಡಪದ, ಎಚ್.ಎಸ್. ಸೋಂಪುರ ಸೇರಿ ಅನೇಕ ಗಣ್ಯರು ಇದ್ದರು.

ನಮ್ಮ ಜಿಲ್ಲೆಯಲ್ಲಿ ಪೊಲೀಸ್ ಸ್ಟೇಷನ್ ಉಪಯೋಗ ಮಾಡಿಕೊಂಡು ನಮ್ಮ ಪಾರ್ಟಿಯವರಾಗಲಿ, ಮತ್ತೊಂದು ಪಾರ್ಟಿಯವರಾಗಲಿ ರಾಜಕಾರಣ ಮಾಡುವದಿಲ್ಲ. ಅದನ್ನು ನಾವು ಸಹಿಸೋದಿಲ್ಲ. ಜಿಲ್ಲೆಯಲ್ಲಿ ಕ್ರಿಮಿನಲ್ ವಾಜ್ಯಗಳಿಲ್ಲದ ೫೮ ಗ್ರಾಮಗಳಿವೆ ಎಂದು ಸಚಿವ ಎಚ್.ಕೆ.ಪಾಟೀಲ ತಿಳಿಸಿದ್ದಾರೆ.