ಸಾರಾಂಶ
ಇಂದಿನ ರಾಜಕೀಯ ಪರಿಸ್ಥಿತಿ ಎತ್ತ ಸಾಗುತ್ತಿದೆ ಎಂದು ತಿಳಿದು ಸಂಘಟಿತರಾಗಬೇಕು. ನಾಗರಿಕ ಹಕ್ಕುಗಳ ದಮನದ ವಿರುದ್ಧ ಹೋರಾಟ ನಡೆಸಬೇಕು ಎಂದು ಸಾಹಿತಿ ಡಾ.ಜಿ.ರಾಮಕೃಷ್ಣ ಹೇಳಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರುಇಂದಿನ ರಾಜಕೀಯ ಪರಿಸ್ಥಿತಿ ಎತ್ತ ಸಾಗುತ್ತಿದೆ ಎಂದು ತಿಳಿದು ಸಂಘಟಿತರಾಗಬೇಕು. ನಾಗರಿಕ ಹಕ್ಕುಗಳ ದಮನದ ವಿರುದ್ಧ ಹೋರಾಟ ನಡೆಸಬೇಕು ಎಂದು ಸಾಹಿತಿ ಡಾ.ಜಿ.ರಾಮಕೃಷ್ಣ ಹೇಳಿದರು.ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಚಿರಂತ್ ಪ್ರಕಾಶನದಿಂದ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಡಾ.ಪುರುಷೋತ್ತಮ ಬಿಳಿಮಲೆ ಅವರ ‘ವರ್ತಮಾನ ಭಾರತ’ ಕೃತಿ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಇಂದು ನಡೆಯುತ್ತಿರುವ ಹಲವು ಘಟನಾವಳಿಗಳನ್ನು ನೋಡಿ ನಾವು ಯಾವ ದಿಕ್ಕಿನಲ್ಲಿ ಸಾಗಬೇಕು ಎಂದು ಯೋಚಿಸುವ ಕಾಲ ಬಂದಿದೆ. ಇಂದಿನ ಪರಿಸ್ಥಿತಿ ಹೇಗಿದೆ ಎಂದು ತಿಳಿದ ಮೇಲೆ ಪ್ರಜ್ಞಾವಂತರಾಗಿ ಸಂಘಟಿತರಾಗಬೇಕು ಎಂದರು.
ಮದ್ದು ಕಂಡುಹಿಡಿಯಬೇಕು: ಸ್ವಾತಂತ್ರ್ಯ ಹೋರಾಟದ ಮೂಲಕ ನಾವು ಸಂವಿಧಾನ ಪಡೆದಿದ್ದರೂ ಇಂದು ದಯನೀಯ ಸ್ಥಿತಿಯಲ್ಲಿದ್ದೇವೆ. ಇಂದಿನ ಅವೈಜ್ಞಾನಿಕತೆಗೆ ಮದ್ದು ಕಂಡು ಹಿಡಿಯಬೇಕಿದೆ. ಲೋಕಸಭಾ ಚುನಾವಣೆಯಲ್ಲಿ ಪರ್ಯಾಯ ಸರ್ಕಾರಕ್ಕೆ ಯಾವ ಕ್ರಮ ಕೈಗೊಳ್ಳಬೇಕು ಎಂಬುದನ್ನುಗಂಭೀರವಾಗಿ ಯೋಚಿಸಬೇಕು. ತಮಿಳುನಾಡು, ಕೇರಳ, ಕರ್ನಾಟಕ ರಾಜ್ಯಗಳು ಈ ದೇಶಕ್ಕೆ ಕಂಟಕ ಎಂದು ದೆಹಲಿಯ ಕೆಲ ಮಹಾತ್ಮರು ಹೇಳುತ್ತಿರುವುದು ಸರಿಯಲ್ಲ ಎಂದು ನುಡಿದರು.ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಎ.ನಾರಾಯಣ ಮಾತನಾಡಿ, ವರ್ತಮಾನದ ಬಗ್ಗೆ ಈ ಕೃತಿ ಹೊರತಂದಿರುವ ಬಿಳಿಮಲೆ ಅವರ ಈ ಕಾರ್ಯ ಶ್ಲಾಘನೀಯ. ಇಂತಹ ಪುಸ್ತಕಗಳು ನಮ್ಮನ್ನು ಎಚ್ಚರಿಸುತ್ತವೆ ಎಂದು ಅಭಿಪ್ರಾಯಪಟ್ಟರು.ಲೇಖಕಿ ಡಾ.ವಿಜಯಮ್ಮ, ಲೇಖಕ ಡಾ.ಪುರುಷೋತ್ತಮ ಬಿಳಿಮಲೆ ಉಪಸ್ಥಿತರಿದ್ದರು.