ದಾಬಸ್‍ಪೇಟೆ: ಪ್ರತಿಯೊಬ್ಬರೂ ಹಸಿರು ಸಂಪತ್ತನ್ನು ಹೆಚ್ಚಿಸುವ ರಾಯಭಾರಿಗಳಾಗಬೇಕು ಹಾಗೂ ಹಸಿರೀಕರಣಕ್ಕೆ ಒತ್ತು ನೀಡಿದಾಗ ಮಾತ್ರ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡಬಹುದು ಎಂದು ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ಜಗದೀಶ್ ತಿಳಿಸಿದರು.

ಸೋಂಪುರ ಹೋಬಳಿಯ ಹಳೆನಿಜಗಲ್ ಗ್ರಾಮದಲ್ಲಿ ಪಶುಸಂಗೋಪನಾ ಹಾಗೂ ಪಶುಪಾಲನಾ ಇಲಾಖೆ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಗಿಡ ನೆಟ್ಟು ಮಾತನಾಡಿದ ಅವರು, ಕಳೆದ ಇಪ್ಪತ್ತು ವರ್ಷಗಳ ಹಿಂದಿನ ಜನಸಂಖ್ಯೆಗೆ, ಇಂದಿನ ಜನಸಂಖ್ಯೆ ದುಪ್ಪಟ್ಟು ಆಗಿದೆ. ಆದರೆ ಅರಣ್ಯ ಪ್ರದೇಶ ಹೆಚ್ಚಾಗದಿರುವುದು ಆತಂಕಕಾರಿ ಬೆಳವಣಿಗೆ. ಹಸಿರೀಕರಣಕ್ಕೆ ಸಸಿ ನೆಟ್ಟರೆ ಅದರ ಪೋಷಣೆಯ ಜವಾಬ್ದಾರಿಯೂ ಇರಬೇಕು ಎಂದರು.

ತಾಲೂಕು ಸಹಾಯಕ ನಿರ್ದೇಶಕ ಡಾ.ಶಿವರಾಮು ಮಾತನಾಡಿ, ಪರಿಸರ ಕಾಳಜಿ ಒಂದು ದಿನಕ್ಕೆ ಸೀಮಿತವಾಗದೆ ನಿರಂತರವಾಗಿರಬೇಕು. ಪರಿಸರ ಉಳಿಸಿ ಬೆಳೆಸುವುದು ಎಲ್ಲರ ಜವಾಬ್ದಾರಿ ಎಂದರು.

ಕಾರ್ಯಕ್ರಮದಲ್ಲಿ ಡಾ.ರವಿಕುಮಾರ್, ಡಾ.ಮಸೂದ್ ಖಾನ್, ಡಾ.ಪೃಥ್ವಿರಾಜ್, ಡಾ.ನಯನ್ ಕುಮಾರ್, ಡಾ.ನಾಗರಾಜು, ಡಾ.ಕಿಶೋರ್, ಡಾ.ಚಂದ್ರನಾಯ್ಕ್, ಡಾ.ಮಂಜುನಾಥ್, ಮಲ್ಲೇಶ್, ಬಸವರಾಜು, ನಾಗರಾಜು, ರಾಮಚಂದ್ರ, ಬಾನಪ್ಪ, ಹನುಮಂತಕುಮಾರ್, ವೀರಭದ್ರಪ್ಪ, ಪ್ರಕಾಶ್, ಚೇತನ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಪೋಟೋ 3 : ಸೋಂಪುರ ಹೋಬಳಿಯ ಹಳೆನಿಜಗಲ್ ಗ್ರಾಮದಲ್ಲಿ ಪಶುಸಂಗೋಪನಾ ಹಾಗೂ ಪಶುಪಾಲನ ಇಲಾಖೆ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಉಪನಿರ್ದೇಶಕ ಡಾ.ಜಗದೀಶ್ ಗಿಡ ನೆಟ್ಟು ಚಾಲನೆ ನೀಡಿದರು.