ಮರಾಠಾ ಸಮಾಜದ ಸಮುದಾಯ ಭವನದ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ

ಕನ್ನಡಪ್ರಭ ವಾರ್ತೆ ಜೋಯಿಡಾ

ಸಮಾಜದಲ್ಲಿ ನಾವೆಲ್ಲರೂ ಜಾತಿಗಳಿಗೆ ಅಂಟಿಕೊಳ್ಳದೆ ಒಂದೆ ಎನ್ನುತ್ತಾ ಎಲ್ಲಾ ಜಾತಿ, ಧರ್ಮವನ್ನು ಗೌರವಿಸಿ ದೇವರಲ್ಲಿ ಶ್ರದ್ದೆ, ಭಕ್ತಿ ಇಟ್ಟು ಮಾನವರಾಗಿ ಬದುಕಬೇಕೆಂದು ಶಾಸಕ ಆರ್. ವಿ. ದೇಶಪಾಂಡೆ ಹೇಳಿದರು.

ತಾಲೂಕಿನ ರಾಮನಗರದಲ್ಲಿ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಅನುಮೋದಿಸಲಾದ ಶ್ರೀ ತುಳಜಾ ಭವಾನಿ ದೇವಾಲಯ ನವೀಕರಣ ಮತ್ತು ಕ್ಷತ್ರಿಯ ಮರಾಠಾ ಸಮಾಜದ ಸಮುದಾಯ ಭವನದ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ದೇವರ ಕಾರ್ಯಕ್ಕೆ ಸರಕಾರದ ಅನುದಾನಕ್ಕೆ ಅವಲಂಬಿಸದೇ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಗ್ರಾಮಸ್ಥರೆಲ್ಲರೂ ಸೇರಿ ಕೈ ಜೋಡಿಸಬೇಕೆಂದು ಕರೆನೀಡಿದರು.


ಮಾತಾ ತುಳಜಾ ಭವಾನಿ ದೇವಾಲಯ ನವೀಕರಣಕ್ಕೆ ₹20 ಲಕ್ಷ, ಕ್ಷತ್ರೀಯ ಮರಾಠಾ ಸಮಾಜದ ಸಮುದಾಯ ಭವನಕ್ಕೆ ₹20 ಲಕ್ಷ ಅನುದಾನವನ್ನು ಶಾಸಕರು ಮಂಜೂರಿ ಮಾಡಿಸಿ ಕಾಮಗಾರಿಗೆ ಚಾಲನೆ ನೀಡಿದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಬೆಂಗಳೂರಿನ ಗವಿಪುರಂನ ವೇದಾಚಾರ್ಯ ಮಂಜುನಾಥ ಭಾರತಿ ಸ್ವಾಮೀಜಿ ಆಶೀರ್ವಚನ ನೀಡಿದರು.

ಈ ಸಂದರ್ಭ ಕ್ಷತ್ರೀಯ ಮರಾಠಾ ಪರಿಷತ್ತಿನಿಂದ ಆಮಂತ್ರಿತರಾದ ವಾರಕರಿ ಸಂಪ್ರದಾಯದ ಸಂತರನ್ನು ವೇದಿಕೆಯಲ್ಲಿ ಶಾಸಕರು ಹಾಗೂ ಸ್ವಾಮಿಗಳು ಸತ್ಕರಿಸಿದರು.

ಕಾರ್ಯಕ್ರಮದಲ್ಲಿ ಶಾಸಕರ ಧರ್ಮಪತ್ನಿ ರಾಧಾಬಾಯಿ ದೇಶಪಾಂಡೆ, ಕ್ಷತ್ರೀಯ ಮರಾಠಾ ಪರಿಷತ್‌ ಅಧ್ಯಕ್ಷ ವಿ. ಜಿ. ದೇಸಾಯಿ, ಕಾರ್ಯದರ್ಶಿ ಮಲ್ಲಾರ ರಾಣೆ, ತಹಶೀಲ್ದಾರ್ ಮಂಜುನಾಥ ಮುನ್ನೊಳ್ಳಿ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಆನಂದ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾರುತಿ ಪಾಟೀಲ, ಕೆಪಿಸಿಸಿ ಸದಸ್ಯ ಸದಾನಂದ ದಬಗಾರ, ಜಿಪಂ ಮಾಜಿ ಸದಸ್ಯ ಸಂಜಯ ಹಣಬರ, ವಿಜಯ ಪಂಡಿತ, ಕೃಷ್ಣಾ ದೇಸಾಯಿ, ಜಿ.ಜಿ. ಗಾಂದಲೆ, ಉಪಸ್ಥಿತರಿದ್ದರು.