ಸಾರಾಂಶ
ಮಾಗಡಿ: ತ್ರಿಪದಿ ಮೂಲಕ ಸಮಾಜವನ್ನು ತಿದ್ದಿದ ಮಹಾ ನಾಯಕರಾದ ಸರ್ವಜ್ಞನವರ ಹೆಸರನ್ನು ಮಾಗಡಿಯ ಪ್ರಮುಖ ರಸ್ತೆಗೆ ಇಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಶಾಸಕ ಬಾಲಕೃಷ್ಣ ಹೇಳಿದರು.
ಮಾಗಡಿ: ತ್ರಿಪದಿ ಮೂಲಕ ಸಮಾಜವನ್ನು ತಿದ್ದಿದ ಮಹಾ ನಾಯಕರಾದ ಸರ್ವಜ್ಞನವರ ಹೆಸರನ್ನು ಮಾಗಡಿಯ ಪ್ರಮುಖ ರಸ್ತೆಗೆ ಇಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಶಾಸಕ ಬಾಲಕೃಷ್ಣ ಹೇಳಿದರು.
ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ತಾಲೂಕು ಆಡಳಿತ ಹಾಗೂ ಕುಂಬಾರರ ಸಂಘದ ವತಿಯಿಂದ ಶ್ರೀ ಸಂತ ಸರ್ವಜ್ಞ ಜಯಂತ್ಯುತ್ಸವ ಕಾರ್ಯಕ್ರಮದ ಅಂಗವಾಗಿ ಸರ್ವಜ್ಞರ ಭಾವಚಿತ್ರಕ್ಕೆ ಪುಷ್ಪಮಾಲೆ ಅರ್ಪಿಸಿ ಮಾತನಾಡಿದ ಅವರು, ಎಲ್ಲವನ್ನು ಬಲ್ಲವರು ಸರ್ವಜ್ಞ. ಜನಸಾಮಾನ್ಯರಿಗೆ ಅರ್ಥವಾಗುವ ಸರಳವಾಗಿ ತ್ರಿಪದಿಗಳ ಮೂಲಕ ಜನಜಾಗೃತಿ ಮೂಡಿಸಿದ್ದಾರೆ. ಇಂತಹ ಮಹನೀಯರ ಪ್ರತಿಮೆಯನ್ನು ಮಾಗಡಿ ಪಟ್ಟಣದಲ್ಲಿ ಸ್ಥಾಪನೆ ಮಾಡಬೇಕಿದೆ. ಇಂತಹ ಮಹನೀಯರ ಕುರಿತು ಮುಂದಿನ ಪೀಳಿಗೆಗೆ ತಿಳಿಸುವ ನಿಟ್ಟಿನಲ್ಲಿ ಸರ್ವಜ್ಞರವರ ಪ್ರತಿಮೆ ನಿರ್ಮಿಸಬೇಕು. ಸರ್ವಜ್ಞರನ್ನು ಒಂದು ಜನಾಂಗಕ್ಕೆ ಸೀಮಿತ ಮಾಡದೆ ಎಲ್ಲಾ ಜನಾಂಗದವರು ಸೇರಿ ಜಯಂತ್ಯುತ್ಸವ ಆಚರಿಸಬೇಕು ಎಂದು ಹೇಳಿದರು.ಸರ್ವಕಾಲದಲ್ಲೂ ಅವರನ್ನು ನೆನೆಸಿಕೊಳ್ಳಬೇಕು. ಕುಂಬಾರರ ಜನಾಂಗದ ಅಭಿವೃದ್ಧಿಗೆ ಸರ್ಕಾರ ವಿವಿಧ ಸೌಲಭ್ಯಗಳನ್ನು ಕಲ್ಪಿಸಿದ್ದು, ಅವುಗಳ ಸದ್ಬಳಕೆಯಿಂದ ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದು ತಿಳಿಸಿದರು.
ದಲಿತ ಮುಖಂಡ ಕಲ್ಕೆರೆ ಶಿವಣ್ಣ, ನಿವೃತ್ತ ಶಿಕ್ಷಕ ಮಾರಣ್ಣ, ಬಂದಿದ್ದ ಗಣ್ಯರನ್ನು ಕುಂಬಾರ ಸಂಘದ ವತಿಯಿಂದ ಸನ್ಮಾನಿಸಲಾಯಿತು ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.ಕಾರ್ಯಕ್ರಮದಲ್ಲಿ ಕುಂಬಾರ ಸಂಘದ ತಾಲೂಕು ಅಧ್ಯಕ್ಷ ವೆಂಕಟೇಶ್, ಜಿಪಂ ಮಾಜಿ ಅಧ್ಯಕ್ಷ ಎಂ.ಕೆ.ಧನಂಜಯ್ಯ, ಗ್ರಾಪಂ ಮಾಜಿ ಅಧ್ಯಕ್ಷ ತಗ್ಗಿಕುಪ್ಪೆ ರಾಜಣ್ಣ, ಉಪತಹಸೀಲ್ದಾರ್ ಶರತ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.ಫೋಟೊ 20ಮಾಗಡಿ2 :
ಮಾಗಡಿಯ ತಾಲೂಕು ಕಚೇರಿ ಆವರಣದಲ್ಲಿ ತಾಲೂಕು ಆಡಳಿತ ಹಾಗೂ ಕುಂಬಾರರ ಸಂಘದ ವತಿಯಿಂದ ಸಂತ ಸರ್ವಜ್ಞರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಶಾಸಕ ಬಾಲಕೃಷ್ಣ ಮಾತನಾಡಿದರು.