ಉತ್ತಮ ಮಳೆ ಸಮೃದ್ಧ ಬೆಳೆಗೆ ಪ್ರಾರ್ಥಿಸೋಣ

| Published : Dec 25 2023, 01:31 AM IST / Updated: Dec 25 2023, 01:32 AM IST

ಉತ್ತಮ ಮಳೆ ಸಮೃದ್ಧ ಬೆಳೆಗೆ ಪ್ರಾರ್ಥಿಸೋಣ
Share this Article
  • FB
  • TW
  • Linkdin
  • Email

ಸಾರಾಂಶ

ಹೊಸಕೋಟೆ: ಪ್ರಸ್ತುತ ರಾಜ್ಯದಲ್ಲಿ ತೀವ್ರ ಬರಗಾಲವಿದ್ದು ಮುಂದಿನ ದಿನಗಳಲ್ಲಿ ಉತ್ತಮ ಮಳೆ ಸಮೃದ್ಧ ಬೆಳೆಯಾಗಲೆಂದು ಹನಮನಲ್ಲಿ ಪ್ರಾರ್ಥಿಸೋಣ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು.

ಹೊಸಕೋಟೆ: ಪ್ರಸ್ತುತ ರಾಜ್ಯದಲ್ಲಿ ತೀವ್ರ ಬರಗಾಲವಿದ್ದು ಮುಂದಿನ ದಿನಗಳಲ್ಲಿ ಉತ್ತಮ ಮಳೆ ಸಮೃದ್ಧ ಬೆಳೆಯಾಗಲೆಂದು ಹನಮನಲ್ಲಿ ಪ್ರಾರ್ಥಿಸೋಣ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು.

ನಗರದ ಪಾರ್ವತಿಪುರ ವಾರ್ಡ್‌ನಲ್ಲಿರುವ ಊರಬಾಗಿಲು ಆಂಜನೇಯ ಸ್ವಾಮಿ ದೇವಾಲಯಕ್ಕೆ ಹನುಮ ಜಯಂತಿ ಪ್ರಯುಕ್ತ ಭೇಟಿ ನೀಡಿ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಇತಿಹಾಸ ಪ್ರಸಿದ್ಧ ಊರಬಾಗಿಲು ಆಂಜನೇಯ ದೇವಾಲಯ ಭಕ್ತರ ಕಷ್ಟ ನಿವಾರಣೆಯ ಕೇಂದ್ರವಾಗಿದ್ದು ನಗರಕ್ಕೆ ಕಲಶಪ್ರಾಯವಾಗಿದೆ. ನಾನು ಶಾಸಕನಾಗಿದ್ದಾಗ ನಗರದಲ್ಲಿರುವ ಐತಿಹಾಸಿಕ ಕಾಶಿ ವಿಶ್ವನಾಥ, ಅವಿಮುಕ್ತೇಶ್ವರ, ಪಟಾಲಮ್ಮ, ಆಂಜನೇಯ ಸ್ವಾಮಿ ದೇವಾಲಯ ಸೇರಿದಂತೆ ಹಲವಾರು ದೇವಾಲಯಗಳನ್ನು ಕೋಟ್ಯಂತರ ರು. ಖರ್ಚು ಮಾಡಿ ಅಭಿವೃದ್ಧಿಪಡಿಸಿ ಕಾಯಕಲ್ಪ ಕೊಟ್ಟಿದ್ದೇನೆ ಎಂದರು.

ಹೊಸಕೋಟೆ ಕ್ಷೇತ್ರದಲ್ಲಿ ಮೂರು ಭಾರಿ ಶಾಸಕನಾಗಿ, ಸಚಿವನಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿರುವ ಕ್ಷೇತರದ ಮತದಾರರ ಋಣ ಎಂದಿಗೂ ಮರೆಯುವುದಿಲ್ಲ.ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು.

ಟೌನ್ ಬ್ಯಾಂಕ್ ಅಧ್ಯಕ್ಷ ಎ.ಅಪ್ಸರ್, ನಗರಸಭೆ ಸದಸ್ಯರಾದ ಅರುಣ್ ಕುಮಾರ್, ಶೋಭಾ ಶಿವಾನಂದ್, ನಿತಿನ್ ಶ್ರೀನಿವಾಸ್, ಸಿಪಿಎನ್ ನವೀನ್, ವೆಂಕಟೇಶ್, ಡಿ.ಕೆ.ನಾಗರಾಜ್, ಹಿರಿಯ ಮುಖಂಡ ಜಯಕುಮಾರ್, ಸ್ಥಳೀಯ ಮುಖಂಡರು ಹಾಜರಿದ್ದರು.ಫೋಟೋ: 24 ಹೆಚ್‌ಎಸ್‌ಕೆ 6 ಮತ್ತು 7ಹೊಸಕೋಟೆ ನಗರದ ಪಾರ್ವತಿಪುರ ವಾರ್ಡ್ನಲ್ಲಿರುವ ಇತಿಹಾಸ ಪ್ರಸಿದ್ದ ಊರಬಾಗಿಲು ಆಂಜನೇಯ ಸ್ವಾಮಿ ದೇವಾಲಯಕ್ಕೆ ಮಾಜಿ ಸಚಿವ ಎಂಟಿಬಿ ನಾಗರಾಜ್ ಬೇಟಿ ನೀಡಿ ಪೂಜೆ ಸಲ್ಲಿಸಿದ್ದು ನಗರದ ಬಿಜೆಪಿ ಕಾರ್ಯಕರ್ತರು ಅಭಿನಂದಿಸಿದರು.